ಮಟ್ಕಾ ಜುಗಾರಿ ಪ್ರಕರಣ
- ಬ್ರಹ್ಮಾವರ: ದಿನಾಂಕ 16/09/2015 ರಂದು 18:05 ಗಂಟೆಗೆ ಅರುಣ.ಬಿ.ನಾಯಕ ಪೊಲೀಸ್ ವೃತ್ತ ನಿರೀಕ್ಷಕರು ಬ್ರಹ್ಮಾವರ ವೃತ್ತ ಇವರಿಗೆ ಉಡುಪಿ ತಾಲೂಕು ಚಾಂತಾರು ಗ್ರಾಮದ ಬ್ರಹ್ಮಾವರ ಕುಂಜಾಲು ಜಂಕ್ಷನ್ ಬಳಿಯ ಆರ್.ಆರ್ ಕಾಂಪ್ಲೆಕ್ಸ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮಟ್ಕಾ ಜುಗಾರಿ ನಡೆಸುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿದ್ದ ಶರತ್ ಶೆಟ್ಟಿ (34), ತಂದೆ: ಸೂಲಿಯಣ್ಣ ಶೆಟ್ಟಿ, ವಾಸ: ಮದ್ಯಸ್ಥರಬೆಟ್ಟು ನೀಲಾವರ ಅಂಚೆ ಮತ್ತು ಗ್ರಾಮ ಉಡುಪಿ ತಾಲೂಕು ಎಂಬಾತನನ್ನು ವಶಕ್ಕೆ ಪಡೆದುಕೊಂಡು ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ಮಟ್ಕಾ ನಂಬ್ರ ಬರೆದ ಚೀಟಿ-1, ಬಾಲ್ ಪೆನ್-1 ಮತ್ತು ನಗದು ರೂಪಾಯಿ 540/- ನ್ನು ವಶಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 182/2015 ಕಲಂ: 78 (1)(111) ಕರ್ನಾಟಕ ಪೊಲೀಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
- ಉಡುಪಿ : ದಿನಾಂಕ 28/08/2015 ರಂದು ಪಿರ್ಯಾದಿದಾರರಾದ ಜಯಪ್ರಕಾಶ (36), ತಂದೆ: ಪಿ.ಎಲ್ ಉಪೇಂದ್ರ ಪೈ, ವಾಸ: ಮಹಾಲಸ 1 ನೇ ಮಹಡಿ ವಿದ್ಯಾರಣ್ಯ ರೋಡ್ ಉಡುಪಿ ಇವರ ಐಡಿಬಿಐ ಬ್ಯಾಂಕಿಗೆ ಉಡುಪಿ ಅಲಹಬಾದ್ ಬ್ಯಾಂಕ್ ಕನಕದಾಸ ರಸ್ತೆ ಶಾಖೆಯಿಂದ ಆರೋಪಿತಳಾದ ಶ್ರೀಮತಿ ನಿಲೇಶ್ ಕತುಡಿಯಾ (32), ಗಂಡ: ನಿಲೇಶ್ ಕತುಡಿಯಾ ವಿಳಾಸ: ಡೋರ್ ನಂ 904/57/ಬಿ ಮಾಸ್‌ಹೌಸಿಂಗ್ ಪ್ರೊಜೆಕ್ಟ್-3 ಮಲವಾನಿ ಗ್ರಾಮ ಮಲಾಡ್‌ವೆಸ್ಟ್ ಮುಂಬಯಿ ಇವರು ಜಮಾ ಮಾಡಿದ ಶ್ರೀ ರೇಣುಕಾ ಮಾತಾ ವಿವಿಧೋದ್ದೇಶ ಸಹಕಾರಿ ಸೊಸೈಟಿ ಉಂಜ್ಹಾ ಪಾರ್ಮಸ್ಸೀ ಎದುರು, ಸ್ಟೇಶನ್‌ರಸ್ತೆ ಉಂಜ್ಹಾ ಗುಜರಾತ್ ಸೊಸೈಟಿಯಿಂದ ಪಡೆದ ಚೆಕ್ ನಂಬ್ರ 248061 ರಲ್ಲಿ ರೂಪಾಯಿ 600/- ಎಂದು ನಮೂದಿಸಿದ್ದರಲ್ಲಿ ಆರೋಪಿತಳು ಬ್ಯಾಂಕಿಗೆ ಮೋಸ ಮಾಡುವ ಉದ್ದೇಶದಿಂದ ಪೂರ್ವ ಯೋಜಿತಳಾಗಿ ಚೆಕ್‌ನಲ್ಲಿ ಹೆಚ್ಚುವರಿಯಾಗಿ ರೂಪಾಯಿ 5,25,600/- ಎಂಬುದಾಗಿ ಟೈಪ್‌ಮಾಡಿಸಿ ಜಮಾ ಮಾಡಿದ್ದು ಅಪರಾಹ್ನ 15:00 ಗಂಟೆಗೆ ಚೆಕ್‌ನ ಬಗ್ಗೆ ಪರಿಶೀಲಿಸಿದ ಬ್ಯಾಂಕ್ ಸಿಬ್ಬಂದಿಯವರು ಚೆಕ್‌ನಲ್ಲಿ ನಮೂದಿಸಿದ ರೂಪಾಯಿ 5,25,600/- ಅನ್ನು ಶ್ರೀ ರೇಣುಕಾ ಮಾತಾ ವಿವಿಧೋದ್ದೇಶ ಸಹಕಾರಿ ಸೊಸೈಟಿಯ ಐಡಿಬಿಐ ಖಾತೆಯಿಂದ ಡ್ರಾ ಮಾಡಿ ಉಡುಪಿ ಅಲಹಬಾದ್ ಬ್ಯಾಂಕಿನ ಶಾಖೆಗೆ ಜಮಾ ಆಗಿದ್ದು ಆರೋಪಿತಳು ಬ್ಯಾಂಕ್ ಖಾತೆಯಿಂದ ಡ್ರಾ ಮಾಡಿ ಮೋಸ ಮಾಡಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 190/2015 ಕಲಂ: 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment