ಅಪಘಾತ ಪ್ರಕರಣಗಳು
- ಕುಂದಾಪುರ: ದಿನಾಂಕ 14/09/2015 ರಂದು ಮಧ್ಯಾಹ್ನ 3:45 ಗಂಟೆಗೆ ಕುಂದಾಪುರ ತಾಲೂಕು ಕೊಟೇಶ್ವರ ಗ್ರಾಮದ ಹಾಲಾಡಿ ರಸ್ತೆಯ ಅಂಶು ಆರ್ಕೆಡೆ ಕಟ್ಟಡದ ಎದುರುಗಡೆ ರಸ್ತೆಯಲ್ಲಿ ಆಪಾದಿತ ನಿರಂಜನ ಎಂಬುವವರು KA 20 EB 4502 ನೇ ಬೈಕನ್ನು ಹಾಲಾಡಿ ಕಡೆಯಿಂದ ಕೊಟೇಶ್ವರ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಬದಿಯ ಮಣ್ಣಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಾದ ಶ್ರೀಮತಿ ರತ್ನಾ, ಗಂಡ: ಕೃಷ್ಣಯ್ಯ ಶೇರಿಗಾರ, ವಾಸ: ಕಾಗೇರಿ, ಕೊಟೇಶ್ವರ ಗ್ರಾಮ, ಕುಂದಾಪುರ ಎಂಬುವವರಿಗೆ ಡಿಕ್ಕಿ ಹೊಡೆದ ಪರಿಣಾಮ ಶ್ರೀಮತಿ ರತ್ನಾ ರವರು ಗಾಯಗೊಂಡು ಚಿಕಿತ್ಸೆ ಬಗ್ಗೆ ಕೊಟೇಶ್ವರ ಎನ್.ಆರ್ ಆಚಾರ್ಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 113/2015 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
- ಶಂಕರನಾರಾಯಣ: ದಿನಾಂಕ 14/09/2015 ರಂದು 11:20 ಗಂಟೆಗೆ ಪಿರ್ಯಾದಿದಾರರಾದ ಸತೀಶ್ ಹೆಚ್ ಕೆ (27), ತಂದೆ: ಕೆಂಚಯ್ಯ, ವಾಸ: ನಂ 76 ಎಮ್ಜಿ ರೋಡ್ ಮೂಡಿಗೆರೆ ಚಿಕ್ಕಮಂಗಳೂರು ಇವರು ಇಎಮ್ಟಿ ಎರ್ಮಜೆನ್ಸಿ ಮೆಡಿಕಲ್ಟೆಕ್ನೇಷಿಯನ್ ಆಗಿರುವ ಕೆಎ 42 ಜಿ 180 ನೇದರ 108 ಅಂಬ್ಯುಲೆನ್ಸ್ ಚಾಲಕ ರಾಮಪ್ಪ ಶಿವಪ್ಪ ತೆರೆಗಿನ ಎಂಬುವವರು ಹಾಲಾಡಿ ಜಂಕ್ಷನ್ ಹತ್ತಿರ ಅಂಬುಲೆನ್ಸ್ನ್ನು ಅದೇ ದಿಕ್ಕಿನಲ್ಲಿ ಮುಂದೆ ಹೋಗುತ್ತಿರುವ ಟಿಪ್ಪರ್ಗೆ ಡಿಕ್ಕಿ ಹೊಡೆದಿದ್ದು ಕೆಎ 42 ಜಿ 180 ನಂಬ್ರದ 108 ಅಂಬುಲೆನ್ಸ್ನ ಮುಂಭಾಗ ಪೂರ್ಣ ಜಖಂಗೊಂಡಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 182/2015 ಕಲಂ:279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
- ಮಣಿಪಾಲ: ಪಿರ್ಯಾದಿದಾರರಾದ ದಾವಲ್ ಸಾಬ್, ತಂದೆ: ಇಮಾಮ್ ಸಾಬ್, ವಾಸ: ಗಜೇಂದ್ರಗಡ, ರೋಣಾ ತಾಲೂಕು, ಗದಗ ಜಿಲ್ಲೆ ಇವರ ಬಾವ ಮೊದಿನ್ ಸಾಬಾ(39) ಎಂಬುವವರು ದಿನಾಂಕ 13/09/2015 ರಂದು ಮಧ್ಯಾಹ್ನ 12:30 ಗಂಟೆಗೆ ಪರ್ಕಳದ ಅಂಗಡಿಯೊಂದಕ್ಕೆ ಹೋದವರು ವಾಪಸ್ಸು ಮನೆಗೆ ಬಾರದೇ ಇದ್ದು, ನಂತರ ರಾತ್ರಿ 8:30 ಗಂಟೆಗೆ ಮೊದಿನ್ ಸಾಬಾ ರವರನ್ನು ಹುಡುಕಿಕೊಂಡು ಪರ್ಕಳ ಮೀನು ಮಾರ್ಕೆಟ್ ಬಸ್ಸು ನಿಲ್ದಾಣದ ಬಳಿ ಹೋಗಿ ನೋಡಿದಾಗ ಮೊದಿನ್ ಸಾಬಾರವರು ಮಲಗಿದ ಸ್ಥಿತಿಯಲ್ಲಿದ್ದು, ಅವರನ್ನು ಎಬ್ಬಿಸಲು ಹೋದಾಗ ಅವರು ಏಳದೇ ಇದ್ದು, ಮೊದಿನ್ ಸಾಬಾರವರು ಹೃದಾಯಘಾತದಿಂದ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 34/2015 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
- ಮಣಿಪಾಲ: ದಿನಾಂಕ 10/09/2015 ರಂದು ರಾತ್ರಿ 08:23 ಗಂಟೆಗೆ ವಿಜಯ ಕುಮಾರ್ ಶೆಟ್ಟಿ, ತಂದೆ: ಎಲ್ಲಪ್ಪ ಶೆಟ್ಟಿ, ವಾಸ: ಕ್ರಿಯೇಟರ್ಸ್ಕಂಪೌಂಡ್, 1ನೇ ಕ್ರಾಸ್, ಹಯಗ್ರೀವನಗರ ಉಡುಪಿ ಎಂಬುವವರ ಮೊಬೈಲ್ ಗೆ ಅವರ ಹೆಂಡತಿಯ ಅಣ್ಣ ಪ್ರಕಾಶ್ ಶೆಟ್ಟಿರವರು ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 184/2015 ಕಲಂ: 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment