Tuesday, September 15, 2015

Daily Crime Reported As On 15/09/2015 At 17:00 Hrsಹಲ್ಲೆ ಪ್ರಕರಣ

  • ಪಡುಬಿದ್ರಿ: ದಿನಾಂಕ 13/09/2015 ರಂದು 21:45 ಗಂಟೆಗೆ ಪಲಿಮಾರು ಗ್ರಾಮದ ಸುಭಾಸ್ ನಗರ, ಮೂಡು ಪಲಿಮಾರು ಎಂಬಲ್ಲಿರುವ ಪಿರ್ಯಾದಿ ಬೇಬಿ ಇವರ ಮನೆಯ ಸಿಟೌಟ್ ನಲ್ಲಿ ಪಿರ್ಯಾದಿದಾರರು ಕುಳಿತು ಕೊಂಡಿರುವಾಗ ನೆರೆಮನೆಯ ವಾಸಿ ಶಬೀರ್ ಎಂಬವರು ಇತರೇ ಇಬ್ಬರೊಂದಿಗೆ ಸಿಟೌಟ್ ಗೆ  ಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ, ನಿಮ್ಮನ್ನೆಲ್ಲ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾನೆ. ಈ ಬಗ್ಗೆ ಪಡುಬಿದ್ರಿ ಠಾಣೆ ಅಪರಾಧ ಕ್ರಮಾಂಕ: 117/15 ಕಲಂ. 447, 504, 323, 354, 506   ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ
  • ಪಡುಬಿದ್ರಿ: ದಿನಾಂಕ 14/09/2015 ರಂದು ರಾತ್ರಿ 9-15 ಗಂಟೆಗೆ ಫಿರ್ಯಾದಿ ಶ್ರೀಮತಿ ಸಾಬಿರಾ ಇವರು ಉಚ್ಚಿಲದ ಗಾಂದಿ ರಸ್ತೆಯಲ್ಲಿರುವ ತನ್ನ ಮನೆಯಲ್ಲಿ ಊಟ ಮಾಡುತ್ತಿದ್ದಾಗ ಯಾರೋ ಜೋರಾಗಿ ಬಾಗಿಲು ಬಡಿಯುತ್ತಿರುವ ಶಬ್ದ ಕೇಳಿ ಬಾಗಿಲು ತೆರೆದಾಗ ಅಲ್ಲಿ ಆರೋಪಿತರಾದ ಚಂದ್ರ @ ತಲವಾರ್ ಚಂದ್ರ, ರಾಕೇಶ್, ಸುಧೀರ್ ಹಾಗೂ ಇತರ ಇಬ್ಬರು ವ್ಯಕ್ತಿಗಳು ಇದ್ದು ಅವರುಗಳ ಪೈಕಿ ಚಂದ್ರ @ ತಲವಾರ್ ಚಂದ್ರ ನು ಫಿರ್ಯಾದಿದಾರರನ್ನುದ್ದೇಶಿಸಿ ಶಹನಾಜ್ ಳ ವಿಚಾರಕ್ಕೆ ಬಂದರೆ ನಿನ್ನನ್ನು ಹಾಗೂ ನಿನ್ನ ಮನೆಯವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿ ಹಲ್ಲೆ ಮಾಡಿದ್ದು, ಆಗ ತಪ್ಪಿಸಲು ಬಂದ ಫಿರ್ಯಾದಿದಾರರ ಅಕ್ಕನ ಮಗ ಬದ್ರುದ್ದೀನ್ ಗೆ ಆರೋಪಿತರೆಲ್ಲರೂ ಹಲ್ಲೆ ನಡೆಸಿದ್ದು, ಫಿರ್ಯಾದಿದಾರರು ಹಾಗೂ ಅವರ ಪಕ್ಕದ ಮನೆಯ ವಾಸಿ ಶ್ರೀಮತಿ ಶಹನಾಜ್ ಎಂಬುವವರ ನಡುವೆ ದಾರಿಯ ವಿಚಾರಕ್ಕೆ ಸಂಬಂಧಿಸಿದಂತೆ ತಕರಾರಿದ್ದು, ಅದೇ ದ್ವೇಷದಿಂದ ಶ್ರೀಮತಿ ಶಹನಾಜ್ ಳು ಆರೋಪಿತರಿಗೆ ದುಷ್ಪ್ರೇರಣೆ ನೀಡಿ ಈ ಕೃತ್ಯ ಎಸಗಿರುವುದಾಗಿದೆ., ಈ ಬಗ್ಗೆ ಪಡುಬಿದ್ರಿ ಠಾಣೆ ಅಪರಾಧ ಕ್ರಮಾಂಕ: 118/15 ಕಲಂ 143, 147, 448, 504, 506, 323, 354, 109  ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

No comments: