Friday, September 11, 2015

Daily Crime Reported As On 11/09/2015 At 07:00 Hrs

ಅಪಘಾತ ಪ್ರಕರಣಗಳು
  • ಬೈಂದೂರು: ದಿನಾಂಕ 10/09/2015 ರಂದು ಮದ್ಯಾಹ್ನ 12:30 ಗಂಟೆಗೆಪಿರ್ಯಾದಿದಾರರಾದ ಕೇಶವ ಮೊಗವೀರ (30), ತಂದೆ: ಮಂಜು ಮೊಗವೀರ, ವಾಸ: ಬಬ್ಬು ಮನೆ ನಾವುಂದ ಕಾಲೇಜು ಎದುರುಗಡೆ ನಾವುಂದ ಗ್ರಾಮ ಕುಂದಾಪುರ ತಾಲೂಕು ಇವರು ನಾವುಂದ ಗ್ರಾಮದ ಮಸ್ಕಿ ಮಹಾಗಣಪತಿ ದೇವಸ್ಥಾನದ ಹತ್ತಿರ ನಿಂತುಕೊಂಡಿರುವಾಗ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ  ಕೆಎ 20 ಎ 2902 ನೇ ಬಸ್ಸನ್ನು ಅದರ ಚಾಲಕನು ಅತೀ ವೇಗದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ಬ್ರೇಕ್‌ ಹಾಕಿದ ಪರಿಣಾಮ ಬಸ್ಸಿನ ಹಿಂದುಗಡೆಯಿಂದ ಕೆಎ 20 ಎಮ್‌ಎ 2745 ನೇ ಕಾರನ್ನು ಅದರ ಚಾಲಕನು ಮುಂದೆ ಹೋಗುತ್ತಿದ್ದ ಬಸ್ಸಿನಿಂದ ಅಂತರವನ್ನು ಕಾಯ್ದುಕೊಳ್ಳದೇ ಅತೀ ವೇಗದಿಂದ ಚಲಾಯಿಸಿಕೊಂಡು ಬಂದು ಬಸ್ಸಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಬಾಸ್ಕರ್‌ ಪುತ್ರನ್‌ರವರಿಗೆ ರಕ್ತಗಾಯವಾಗಿರುವುದಾಗಿದೆ. ಗಾಯಗೊಂಡ ಬಾಸ್ಕರ್ ಪುತ್ರನ್‌ರವರನ್ನು ಚಿನ್ಮಯಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 246/2015 ಕಲಂ: 279.338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಶಶಿಕಾಂತ ಶಿವರಾಮ ಗಾಸ್ತಿ (59) ಇವರು ಸಿಐಡಿ ಇಲಾಖೆಯಲ್ಲಿ ಸಿ.ಎ.ಎನ್‌ ವಿಭಾಗದಲ್ಲಿ ಪೊಲೀಸ್ ಉಪಾಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಮಣಿಪಾಲ ಠಾಣಾ ಮೊ.ನಂ 242/2011 ಪ್ರಕರಣದ ತನಿಖೆಯ ನಿಮಿತ್ತ ದಿನಾಂಕ 10/09/2015 ರಂದು ಬೆಳಿಗ್ಗೆ ಇಲಾಖಾ ವಾಹನ KA 04 G 615 ನೇ ಯದರಲ್ಲಿ ಚಾಲಕ HG 846 ರಾಜಾರಾವ್‌ರವರೊಂದಿಗೆ ಬೆಂಗಳೂರಿನಿಂದ ಹೊರಟು ಮಂಗಳೂರಿಗೆ ಬಂದು ಅಲ್ಲಿಂದ ತನಿಖೆಯ ಬಗ್ಗೆ ಮಣಿಪಾಲಕ್ಕೆ ಹೋಗಲು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬರುತ್ತಾ ಉಡುಪಿ ಜಿಲ್ಲೆಯ ಪಡುಬಿದ್ರಿ ಬಳಿ ಬೀಡು ಎಂಬಲ್ಲಿ ತಲಪುವಾಗ ಸಂಜೆ 3:30 ಗಂಟೆ ಸಮಯ ಅವರ ಮುಂದಿನಿಂದ KA 23 A 9032 ನೇ ಲಾರಿಯನ್ನು ಅದರ ಚಾಲಕ ಪ್ರಮೋದ್‌ ಸದಾಶಿವ ನಾಯ್ಕ್‌ ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹತೋಟಿ ತಪ್ಪಿ ರಸ್ತೆಯ ವಿಭಾಜಕಕ್ಕೆ ಢಿಕ್ಕಿ ಹೊಡೆದು ವಿರುದ್ಧ ದಿಕ್ಕಿಗೆ ತಿರುಗಿ ಶಶಿಕಾಂತ ಶಿವರಾಮ ಗಾಸ್ತಿ ರವರು ಪ್ರಯಾಣಿಸುತ್ತಿದ್ದ ಇಲಾಖಾ ಜೀಪ್‌ನ ಮುಂಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ ಶಶಿಕಾಂತ ಶಿವರಾಮ ಗಾಸ್ತಿ ರವರ ಎಡಗಾಲಿನ ಮೊಣಗಂಟಿನ ಬಳಿ ಜಜ್ಜಿದ ಗಾಯವಾಗಿದ್ದು ಜೀಪ್‌ನ ಮುಂಬದಿ ಜಖಂಗೊಂಡಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 114/15 ಕಲಂ:279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೇ ಪ್ರಕರಣ
  • ಉಡುಪಿ: ದಿನಾಂಕ 30/08/2015 ರಂದು ಮಧ್ಯಾಹ್ನ ಪಿರ್ಯಾದಿದಾರರಾದ ಶೇಖ್ ಇಸ್ಮಾಯಿಲ್ (53), ತಂದೆ: ಶೇಖ್ ಹುಸೇನ್, ವಾಸ:ಮನೆ ನಂ 8-2-96 ಶಿವಳ್ಳಿ ಗ್ರಾಮ ಉಡುಪಿ ಇವರ ಮೊಬೈಲ್ ಗೆ ಕರೆ ಮಾಡಿ “ನಾನು ರಾಘು ಮಾತನಾಡುವುದು ನನಗೆ ನೀನು ಹಣ ಕೊಡಬೇಕು ಸಂಜೆ ಸಿಗುತ್ತೇನೆ 10,000/- ರೂಪಾಯಿ ಹಣ ರೆಡಿ ಮಾಡಿಕೊಂಡಿರು" ಎಂದು ತುಳುವಿನಲ್ಲಿ ಹೇಳಿ ಫೋನ್ ಕಟ್ ಮಾಡಿದ್ದು ನಂತರ.ಅದೇ ದಿನ ಸಾಯಂಕಾಲ 7:00 ಗಂಟೆ ಸಮಯಕ್ಕೆ ಶೇಖ್ ಇಸ್ಮಾಯಿಲ್ ರವರು ಶ್ರೀಕೃಷ್ಣ ದೇವಸ್ಥಾನದ ಹಿಂಬದಿ ಇರುವ ವಾಹನ ಪಾರ್ಕಿಂಗ್ ಜಾಗದಲ್ಲಿ ನಡೆದುಕೊಂಡು ಹೋಗುವಾಗ ಆರೋಪಿ ರಾಘವೇಂದ್ರ ಕಾಂಚನ್ @ ರಾಘು ಶೇಖ್ ಇಸ್ಮಾಯಿಲ್ ರವರ ಬಳಿಗೆ ಬಂದು ಮಾತನಾಡಿಸಿ ಮಧ್ಯಾಹ್ನ ನಿನ್ನಲ್ಲಿ ಕೇಳಿದ ಹಣ ಕೊಡು ಎಂದು ಕೇಳಿದ ಅದಕ್ಕೆ ಯಾಕೇ ಕೊಡಬೇಕು ಎಂದು ಕೇಳಿದಾಗ ನೀನು ಬಾಡಿಗೆ ರೂಮ್ ಗಳನ್ನು ಇಟ್ಟು ಅವ್ಯವಹಾರ ಮಾಡುತ್ತೀಯ ಅದಕ್ಕಾಗಿ ನನಗೆ ಹಣ ಕೊಡಲೇ ಬೇಕು ಕೊಡದಿದ್ದರೆ ನಿನ್ನನ್ನು ಬಿಡುವುದಿಲ್ಲ ಎಂದು ಹೇಳಿದ್ದು, ಶೇಖ್ ಇಸ್ಮಾಯಿಲ್ ರವರು ಹಣ ಇಲ್ಲ ಎಂದು ಹೇಳಿದಾಗ ಆರೋಪಿ ಈಗ ನೀನು ಮಧ್ಯಾಹ್ನ ಕೇಳಿದ 10,000/- ರೂಪಾಯಿ ಕೊಡದಿದ್ದರೆ ನಿನ್ನನ್ನು ಕೊಂದು ಬಿಡುತ್ತೇನೆ, ಜೀವ ಉಳಿಸಿಕೊಳ್ಳಬೇಕಾದರೆ ಹಣ ಕೊಡಬೇಕು ಎಂದು ಹೇಳಿ ಶೇಖ್ ಇಸ್ಮಾಯಿಲ್ ರವರ ಬಳಿ ಇದ್ದ  7,000/- ರೂಪಾಯಿ ಹಣವನ್ನು ಬಲಾದ್ಗ್ರಹಣ ಮೂಲಕ ಪಡೆದುಕೊಂಡು ಈ ವಿಚಾರವನ್ನು ಬೇರೆ ಯಾರಿಗಾದರು ಹೇಳಿದರೆ ಜಾಗ್ರತೆ ಇನ್ನುಳಿದ ಹಣ ಕೊಡದಿದ್ದರೆ ನಿನ್ನನ್ನು ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆಯೊಡ್ಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 189/2015 ಕಲಂ: 387, 504,506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

No comments: