Thursday, August 27, 2015

PRESS NOTEಪತ್ರಿಕಾ ಪ್ರಕಟಣೆ
          ಕಳೆದ 2-3 ವಾರಗಳಿಂದೀಚೆಗೆ ಉಡುಪಿ ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಣಿಕೆ, ಗೋ ಕಳ್ಳತನ ಪ್ರಕರಣಗಳು ಹೆಚ್ಚಾಗಿ ಸಂಭವಿಸುತ್ತಿದ್ದು, ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿರುತ್ತದೆ.
 ಸದ್ರಿ ವಿಶೇಷ ತಂಡಗಳಿಗೆ ಸೂಕ್ತ  ನಿರ್ದೇಶನಗಳನ್ನು ನೀಡಿದ್ದು, ರಾತ್ರಿ ವೇಳೆ ಕಡ್ಡಾಯವಾಗಿ ರೌಂಡ್ಸ್‌ ನಡೆಸುವಂತೆ ಸೂಚನೆಗಳನ್ನು ನೀಡಲಾಗಿದೆ. ದಿನಾಂಕ: 28/08/2015 ರಂದು ಸಂಜೆ 4:00 ಗಂಟೆಗೆ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆ ಅಕ್ರಮ ಗೋ ಸಾಗಾಣಿಕೆಗಳಲ್ಲಿ ಭಾಗಿಯಾಗಿದ್ದವರ ಪೆರೇಡನ್ನು ನಡೆಸುತ್ತಿದ್ದು, ಪ್ರಸ್ತುತ ಅವರ ಕಾರ್ಯಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು. 
ಅಕ್ರಮ ಗೋ ಸಾಗಾಣಿಕೆ, ಗೋ ಕಳ್ಳತನ ಪ್ರಕರಣಗಳ ಬಗ್ಗೆ ತಮಗೆ ಏನಾದರೂ ಮಾಹಿತಿ ಇದ್ದಲ್ಲಿ, ಯಾವುದೇ ಸಮಯದಲ್ಲಾದರೂ ಸದ್ರಿ ಮಾಹಿತಿಯನ್ನು ಜಿಲ್ಲಾ ನಿಯಂತ್ರಣ ಕೊಠಡಿಯ ದೂರವಾಣಿ  100 ಅಥವಾ 0820-2526444 ಗೆ ಕರೆ ಮಾಡಿ ನೀಡುವುದು. ನೀವು ನೀಡಿದ ಮಾಹಿತಿಗೆ ತಕ್ಷಣವೇ ಸ್ಪಂದಿಸಿ  ಅಕ್ರಮ ಗೋ ಸಾಗಾಣಿಕೆ, ಗೋ ಕಳ್ಳತನ ಪ್ರಕರಣಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.-
                 ಪೊಲೀಸ್ ಅಧೀಕ್ಷಕರು
                 ಉಡುಪಿ ಜಿಲ್ಲೆ,
                                                                                  ಪ್ರವಾಸಿ ಮಂದಿರದ ರಸ್ತೆ, ಬನ್ನಂಜೆ, ಉಡುಪಿ -576 101

No comments: