Friday, August 28, 2015

Daily Crime Reports As on 28/08/2015 at 17:00 Hrs

ಮಟ್ಕಾ ಜುಗಾರಿ ಪ್ರಕರಣ
  • ಕುಂದಾಪುರ: ದಿನಾಂಕ 27.08.2015 ರಂದು 18:15 ಗಂಟೆಗೆ ಎಂ. ಮಂಜುನಾಥ ಶೆಟ್ಟಿ, ಡಿವೈಎಸ್‌ಪಿ ಕುಂದಾಪುರ ಉಪ ವಿಭಾಗ ಇವರಿಗೆ ದೊರೆತ ಖಚಿತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ಕುಂದಾಪುರ ತಾಲೂಕು ತಲ್ಲೂರು ಗ್ರಾಮದ ಉಪ್ಪಿನಕುದ್ರು ರಸ್ತೆ ರಮ್ಯ ಹೇರ್‌ ಡ್ರೆಸರ್ಸ್‌ ಪಕ್ಕದ ಗೂಡಂಗಡಿಯಲ್ಲಿ ಆಪಾದಿತ ಚಂದ್ರ ದೇವಾಡಿಗ (51) ತಂದೆ: ದಿ. ರಾಮ ದೇವಾಡಿಗ ವಾಸ: ಮಾರನಮನೆ, ಉಪ್ಪಿನಕುದ್ರು ರಸ್ತೆ, ತಲ್ಲೂರು, ಕುಂದಾಪುರ ತಾಲೂಕು ರವರು ಸಾರ್ವಜನಿಕರಿಂದ ಹಣವನ್ನು ಪಣವಾಗಿ ಪಡೆದು ಮಟ್ಕಾ ಜುಗಾರಿ ನಡೆಸುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಆಪಾದಿತನನ್ನು ವಶಕ್ಕೆ ಪಡೆದು, ದಸ್ತಗಿರಿ ಮಾಡಿ, ಜುಗಾರಿ ಆಟಕ್ಕೆ ಉಪಯೋಗಿಸಿದ ರೂಪಾಯಿ 250/-, ಮಟ್ಕಾ ಚೀಟಿ ಹಾಗೂ ಬಾಲ್‌ ಪೆನ್ ಅನ್ನು ವಶಕ್ಕೆ ಪಡೆದು ಆಪಾದಿತನನ್ನು ವಿಚಾರಣೆಗೆ ಒಳಪಡಿಸಿದಾಗ ತಾನು ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ ಹಣವನ್ನು ಬುಕ್ಕಿ ಕೋಡಿಯ ಪ್ರತಾಪ್‌ ಎಂಬವರಿಗೆ ನೀಡುತ್ತಿದ್ದುದಾಗಿ ಒಪ್ಪಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 296/2015 ಕಲಂ: 78 (1) (3) ಕೆ.ಪಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಪಘಾತ ಪ್ರಕರಣ
  • ಕುಂದಾಪುರ: ದಿನಾಂಕ 27/08/2015 ರಂದು ರಾತ್ರಿ 11:00 ಗಂಟೆಗೆ ಕುಂದಾಪುರ ತಾಲೂಕು ಕರ್ಕುಂಜೆ ಗ್ರಾಮದ ಸುಕುಮಾರ್‌ ಶೆಟ್ಟಿಯವರ ಫ್ಯಾಕ್ಟರಿಯ ಮುಂದೆ ರಸ್ತೆಯಲ್ಲಿ ಪಿರ್ಯಾದಿ ಮಹಾಬಲ ಮೋಗವೀರ (60)೦ ತಂದೆ:ದಿವಂಗತ ನಾಗಮೋಗವೀರ ವಾಸ: ಮಂಜುಶ್ರೀ ನೆಂಪು ಹೈಸ್ಕೂಲ್ ಹತ್ತೀರ ನೆಂಪು ಕರ್ಕುಂಜೆ ಗ್ರಾಮ   ಕುಂದಾಪುರ  ಇವರು ವಂಡ್ಸೆ ಕಡೆಯಿಂದ ಮನೆಗೆ ನೆಡೆದುಕೊಂಡು ಹೊಗುತ್ತಿರುವಾಗ ಅಂಪಾರು ಕಡೆಯಿಂದ ವಂಡ್ಸೆ ಕಡೆಗೆ  ಯಾವುದೋ  ನೊಂದಣಿ ನಂಬ್ರ  ತಿಳಿದು ಬಾರದ ವಾಹನ ಚಾಲಕನು  ಅತೀವೇಗ ಹಾಗೂ  ಅಜಾಗರೂಕತೆಯಿಂದ  ಚಾಲನೆ  ಮಾಡಿಕೊಂಡು ಬಂದು ರಸ್ತೆಯ ಬಲ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ  ಹೊಡೆದು ವಾಹನವನ್ನು ನಿಲ್ಲಿಸದೇ ಪರಾರಿಯಾಗಿದ್ದು ಮಹಾಬಲ ಮೋಗವೀರ ರವರಿಗೆ ಎರಡು ಕಾಲುಗಳಿಗೆ ತೀವ್ರ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ  ದಾಖಲಾಗಿರುತ್ತಾರೆ, ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 105/ 15  ಕಲಂ 279 ,338, 134(ಎ&ಬಿ) ,187 ಐಎಮ್ ವಿ ಆಕ್ಟ್ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೇ ಪ್ರಕರಣ
  • ಕೋಟ: ಪಿರ್ಯಾದಿ ಪ್ರತಾಪ ಇವರು ಉಡುಪಿ ತಾಲೂಕು ಗುಂಡ್ಮಿ ಗ್ರಾಮದ ಶಾಂತರಾಮ ಶೆಟ್ಟಿಯವರ ಬಾಬ್ತು ಕಲಶ ಕಾಂಪ್ಲೆಕ್ಸ್ ನಲ್ಲಿ ಮಂದಾರ ಫ್ಯಾನ್ಸಿ ಮತ್ತು ನಂದಿನಿ ಮಿಲ್ಕ್‌ ಪಾರ್ಲರ್ ಎಂಬ ಅಂಗಡಿಯನ್ನು ಇಟ್ಟುಕೊಂಡಿದ್ದು ಸದ್ರಿ ಅಂಗಡಿಗೆ ದಿನಾಂಕ:27/08/2015 ರಂದು ರಾತ್ರಿ 9:30 ಗಂಟೆಯಿಂದ ದಿನಾಂಕ:28/08/2015 06:30 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ದುಷ್ಕಮಿಗಳು ಪೆಟ್ರೋಲ್‌ ಸುರಿದು ಬೆಂಕಿ ಹಾಕಿದ ಪರಿಣಾಮ ಅಂಗಡಿಯ ಒಳಗಿನ ಪ್ರೀಜ್, ಶೋಕೆಸ್, ಹಾಲು ತುಂಬಿಡುವ ಟ್ರೇ, ಫ್ಯಾನ್ಸಿ ಸಾಮಾನುಗಳು, ಬೆಂಕಿಯಲ್ಲಿ ಸುಟ್ಟು ಹೋಗಿದ್ದು, ಫ್ರಿಜ್‌ನ ಒಳಗಡೆ ಇಟ್ಟಿದ್ದ ಸುಮಾರು 80 ಲೀಟರ್ ಹಾಲು, ಮೊಸರು, ಮಜ್ಜಿಗೆ ಹಾಗೂ ತುಪ್ಪದ ಪ್ಯಾಕೆಟ್ ಹಾಳಾಗಿರುವುದಲ್ಲದೇ ಇನ್ನಿತರ ವಿದ್ಯುತ್ ಉಪಕರಣಗಳು ಬೆಂಕಿಯಿಂದ ಸುಟ್ಟು ಹೋಗಿದ್ದು ಸುಮಾರು- 45,000 /- ರೂ ನಷ್ಟ ಉಂಟಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 196/2015 ಕಲಂ:436,427 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: