Friday, August 28, 2015

Daily Crime Reports As on 28/08/2015 at 19:30 Hrsಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿ ಗಣೇಶ್ (23) ತಂದೆ:ರಾಮ ವಾಸ:ಅಣ್ಣಪ್ಪ ಪಂಜುರ್ಲಿ ದೇವಸ್ಥಾನದ ಹತ್ತಿರ ಆದಿಉಡುಪಿ ಮಧ್ವನಗರ ಉಡುಪಿರವರು ದಿನಾಂಕ 28/08/2015 ರಂದು ಕೆಲಸದ ನಿಮಿತ್ತಾ  ಕೆಎ 20 ಇಜಿ 6368 ಮೋಟಾರು ಸೈಕಲಿನಲ್ಲಿ ಮಣಿಪಾಲ ಕಡೆಗೆ ಹೋಗುತ್ತಿದ್ದು ಸಮಯ ಸುಮಾರು ಬೆಳಿಗ್ಗೆ 8.30 ಗಂಟೆಗೆ  ಕಡಿಯಾಳಿ ಬಳಿ ಗುಜ್ಜಾಡಿ ಟವರ್ಸ್ ಹತ್ತಿರ ಮೋಟಾರು ಸೈಕಲಿಗೆ ಹಿಂದಿನಿಂದ ಬಸ್ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬೈಕ್ ಎದುರಿನಿಂದ ಹೋಗುತ್ತಿದ್ದ ಬೈಕ್ ನಂಬ್ರ ಕೆಎ 20 ಇಇ 8028 ಗೆ ತಾಗಿ ಗಣೇಶ್ ರವರು ಮತ್ತು ಎದುರಿನಿಂದ ಹೋಗುತ್ತಿದ್ದ ಬೈಕ್ ಸವಾರ ಇಬ್ಬರೂ  ಬೈಕ್‌ನೊಂದಿಗೆ ಕೆಳಗೆ ಬಿದ್ದರು. ಪರಿಣಾಮ ಪಿರ್ಯಾದಿದಾರರಿಗೆ ತಲೆಗೆ ಕಾಲಿಗೆ ಮತ್ತು ಎಡ ಭುಜಕ್ಕೆ ಗಾಯವಾಗಿರುತ್ತದೆ, ಅಲ್ಲದೆ ಎದುರಿನಿಂದ ಹೋಗುತ್ತಿದ್ದ ಬೈಕ್ ಚಾಲಕನಿಗೂ ಕಾಲುಗಳಿಗೆ ಗಾಯವಾಗಿದ್ದು, ಡಿಕ್ಕಿ ಹೊಡೆದ ಬಸ್ ನಂಬ್ರ ನೋಡಲಾಗಿ ಕೆಎ 20 ಬಿ 8133 ಆಗಿದ್ದು ಅದರ ಚಾಲಕನ ಹೆಸರು ವಿನಯ ಪೆರ್ನಾಂಡಿಸ್ ಎಂಬುವರು ಆಗಿರುತ್ತದೆ, ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 93/2015 ಕಲಂ. 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರೇ ಪ್ರಕರಣ

  • ಕುಂದಾಪುರ: ಶ್ರೀಮತಿ ಗಾಯತ್ರಿ ನಾಯಕ್‌ ರವರು ಕುಂದಾಪುರ ತಾಲೂಕು ತಹಶೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಯಾಗಿದ್ದು, ಕುಂದಾಪುರ ತಾಲೂಕು ಗುಲ್ವಾಡಿ ಗ್ರಾಮದ ಸರ್ವೆ ನಂಬ್ರ: 195/4ಬಿ2 ರಲ್ಲಿ 1.28 ಎಕ್ರೆ ಜಮೀನನ್ನು ಅಬುಶೇಕ್‌ ಬ್ಯಾರಿ ಬಿನ್‌ ಹಸನ್‌ ಬ್ಯಾರಿ ರವರಿಗೆ ಕಡತ ಸಂಖ್ಯೆ: ಎಡಿಸ್‌/ಎನ್‌ ಸಿಆರ್‌:ಡಿಆರ್‌ 217/73-74, ದಿನಾಂಕ 15.09.1974 ರಂತೆ ಮಂಜೂರಾತಿಯಾಗಿ ಸಾಗುವಳಿ ಚೀಟಿ ನೀಡಿದ್ದು, ಆದರೆ ಗುಲ್ವಾಡಿ ಗ್ರಾಮದ ಸರ್ವೇ ನಂಬ್ರ: 195/4ಬಿ1 ರಲ್ಲಿ 1.68 ಎಕ್ರೆ ಜಮೀನಿಗೆ ಹಸನ್‌ ಬ್ಯಾರಿ ಬಿನ್‌ ಸೈಯದ್‌ ಬ್ಯಾರಿ ರವರ ಹೆಸರಿಗೆ ಆರೋಪಿ ನಕಲಿ ಸಾಗುವಳಿ ಚೀಟಿಯನ್ನು ಸೃಷ್ಟಿಸಿಕೊಂಡಿದ್ದು, ಹಸನ್‌ ಬ್ಯಾರಿ ಬಿನ್‌ ಸೈಯದ್‌ ಬ್ಯಾರಿ ರವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರಕಾರಿ ಜಮೀನನ್ನು ಮೋಸದಿಂದ ಕಬಳಿಸಲು ಪ್ರಯತ್ನಿಸಿದ್ದು, ಈ ಬಗ್ಗೆ ಆರೋಪಿಯಾದ ಹಸನ್‌ ಬ್ಯಾರಿ ತಂದೆ: ಸೈಯದ್‌ ಬ್ಯಾರಿ ವಾಸ: ಗುಲ್ವಾಡಿ ಗ್ರಾಮ, ಕುಂದಾಪುರ ತಾಲೂಕು ಇವರ  ವಿರುದ್ದ ಮೊಕದ್ದಮೆ ದಾಖಲಿಸಲು ಆದೇಶಿಸಿ ವರದಿ ನೀಡಿರುವುದಾಗಿದೆ, ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 297/2015  ಕಲಂ: 465, 468, 471, 484 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: