Saturday, August 29, 2015

Daily Crime Reports As on 29/08/2015 at 07:00 Hrs

ಅಪಘಾತ ಪ್ರಕರಣಗಳು
  • ಪಡುಬಿದ್ರಿ: ದಿನಾಂಕ 28/08/2015 ರಂದು 20:00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ನೇಹಾ (40), ಗಂಡ: ಸಲಾವುದ್ದೀನ್ ವಾಸ: ನಯಾತ್ ರೆಸಿಡೆನ್ಸಿ ಹತ್ತಿರ, ಪಡುಬಿದ್ರಿ, ನಡ್ಸಾಲು ಗ್ರಾಮ ಉಡುಪಿ ಇವರು ತನ್ನ ಮಗನಾದ ಸುಹಾನ (14), ಜೊತೆಗೆ ಜೌಕೀರ್ ರವರು ಚಾಲಯಿಸುತ್ತಿದ್ದ ಕೆಎ 20 ಇಹೆಚ್ 6193 ನೇ ಆಕ್ಟಿವಾ ಹೋಂಡಾದಲ್ಲಿ 3 ಜನರು ಒಟ್ಟಾಗಿ ಬರುತ್ತಿರುವಾಗ ತೆಂಕ ಎರ್ಮಾಳು  ಗ್ರಾಮದ ನಾರಂತಾಯ ಗುಡಿಯ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತಲುಪಿದಾಗ ಉಚ್ಚಿಲ ಕಡೆಯಿಂದ ಪಡುಬಿದ್ರಿ ಕಡೆಗೆ ಕೆಎ 19 ಎಂಬಿ 8277 ನೇ ಕಾರು ಚಾಲಕ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಆಕ್ಟಿವಾ ಹೋಂಡಾದ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಆಕ್ಟಿವ್ ಹೋಂಡಾದಲ್ಲಿದ್ದ 3 ಜನರು ನೆಲಕ್ಕೆ ಬಿದ್ದಿದ್ದು, ಶ್ರೀಮತಿ ನೇಹಾ ರವರಿಗೆ ಬಲಕೈ ಮೊಣಗಂಟಿಗೆ, ಎಡಕೈ ತೋರು ಬೆರಳು ಮತ್ತು ಉಂಗುರ ಬೆರಳಿಗೆ ಬಲಕಾಲಿನ ಪಾದದ ಬಳಿ ಗಂಟಿಗೆ ಗಾಯವಾಗಿದ್ದು, ಬಲ ತೋಳು ಮತ್ತು ಬಲ ತೊಡೆಗೆ ತರಚಿದ ಹಾಗೂ ಗುದ್ದಿದ ಗಾಯವಾಗಿರುತ್ತದೆ, ಸುಹಾನನ ಎಡಕಾಲು ಹಿಮ್ಮಡಿಗೆ ಮತ್ತು ಬಲಕೈ ಬೆರಳುಗಳಿಗೆ ತರಚಿದ ಗಾಯವಾಗಿದ್ದು, ಜಾಕೀರ್ ರವರಿಗೆ ಸೊಂಟಕ್ಕೆ ತರಚಿದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 111/2015 ಕಲಂ; 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಉಡುಪಿ: ಪಿರ್ಯಾದಿದಾರಾದ ವಿಶ್ವನಾಥ್ ಕಾಂಚಾನ್‌(36), ತಂದೆ:ಸಂಜೀವ ಸಾಲಿಯಾನ್, ವಾಸ:ಜೈ ಮಾತಾ ಹೌಸ್ 2-89 ಹನುಮಾನ್‌ನಗರ ಕೋಳ ಮಲ್ಪೆ ಉಡುಪಿ ಇವರು ದಿನಾಂಕ 28/08/2015 ರಂದು ಬ್ರಹ್ಮಾವರದಿಂದ ತನ್ನ ಗೆಳೆಯ ಗೀರೀಶ್‌ರವರ  ಮೋಟಾರ್‌ ಸೈಕಲ್‌ ನಂಬ್ರ ಕೆಎ 20 ಯು5776 ರಲ್ಲಿ ಗೀರೀಶ್‌ರವರನ್ನು ಸಹಸವಾರನ್ನಾಗಿ ಕುಳ್ಳರಿಸಿಕೊಂಡು ಉಡುಪಿ ಶಾರದಾ ಇಂಟರ್‌ನ್ಯಾಶನಲ್ ಹೋಟೇಲ್ ಬಳಿ ತಲುಪಿದಾಗ ಸಂಜೆ 04:30 ಗಂಟೆಗೆ ವಿಶ್ವನಾಥ್ ಕಾಂಚಾನ್‌ರವರ ಹಿಂಬದಿಯಿಂದ ಕೆಎ 20 ಬಿ 9657 ನೇ ಟೆಂಪೋ ಚಾಲಕ ರಮೇಶ್ ಎಂಬುವವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ವಿಶ್ವನಾಥ್ ಕಾಂಚಾನ್‌ರವರು ಹಾಗೂ ಸಹಸವಾರ ಗೀರೀಶ್ ರವರು ರಸ್ತೆಗೆ ಬಿದ್ದರು ನಂತರ ಅಲ್ಲಿ ಸೇರಿದವರು ಗಾಯಾಳುಗಳನ್ನು ಗಾಂಧಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿರುವುದಾಗಿದೆ. ಈ ಅಪಘಾತದಿಂದ ವಿಶ್ವನಾಥ್ ಕಾಂಚಾನ್‌ರವರಿಗೆ ಬಲಕಾಲಿನ ಪಾದದ ಬಳಿ ರಕ್ತಗಾಯ, ಎಡಕಾಲಿನ ತೊಡೆಗೆ ಗುದ್ದಿನ ನೋವುಂಟಾಗಿರುತ್ತದೆ ಮತ್ತು ಸಹಸವಾರ ಗೀರೀಶ್‌ರವರಿಗೆ ತಲೆಗೆ ಗುದ್ದಿದ ನೋವು ಮತ್ತು ಎಡಕೈ ಹಾಗೂ ಎಡ ಕಾಲಿಗೆ ಗುದ್ದಿದ ಒಳನೋವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 94/2015 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ 

  • ಉಡುಪಿ: ದಿನಾಂಕ 28/08/2015ರಂದು 14:00 ಗಂಟೆಗೆ ವಿಶು ಶೆಟ್ಟಿ (42), ತಂದೆ: ಗುಂಡು ಶೆಟ್ಟಿ, ವಾಸ: ಅಂಬಲಪಾಡಿ ಉಡುಪಿ ಇವರಿಗೆ ಯಾರೋ ಸಾರ್ವಜನಿಕರು ಪೋನ್‌ ಮಾಡಿ ಉಡುಪಿ ಸರಕಾರಿ ಆಸ್ಪತ್ರೆಯ ಅಂಬುಲೆನ್ಸ್‌‌ ನಿಲ್ಲಿಸುವ ಶೆಡ್‌ನಲ್ಲಿ ಎರಡು ಅಂಬುಲೆನ್ಸ್‌ ವಾಹನಗಳ ಮಧ್ಯದಲ್ಲಿ ಯಾರೋ ಒಬ್ಬ ರಿಕ್ಷಾ ಚಾಲಕನು ರಿಕ್ಷಾದಲ್ಲಿ ಬೆಳಿಗ್ಗೆ 11:30 ಗಂಟೆಯಿಂದ 12:00ಗಂಟೆ ಮಧ್ಯ ಅವಧಿಯಲ್ಲಿ ಸುಮಾರು 50 ರಿಂದ 55 ವರ್ಷದ ಗಂಡಸಿನ ಮೃತ ದೇಹವನ್ನು ತಂದು ವಾಹನಗಳ ಮಧ್ಯದಲ್ಲಿರಿಸಿ ಅಲ್ಲಿಂದ  ಹೋಗಿದ್ದು ನಂತರ ಆಸ್ಪತ್ರೆಯ ಸಿಬ್ಬಂದಿ ಹಾಗೂ ಇತರರು ಕಂಡು ಮೃತ ದೇಹವನ್ನು  ಉಡುಪಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು, ಮೃತ ದೇಹವನ್ನು ಆಸ್ಪತ್ರೆಯ ಶೀತಿಲೀಕರಣ ಕೊಠಡಿಯಲ್ಲಿ ಇರಿಸಿರುತ್ತಾರೆ  ಎಂದು ತಿಳಿಸಿದ್ದು ನಂತರ ವಿಶು ಶೆಟ್ಟಿ ಯವರು ಬಂದು ನೋಡಲಾಗಿ ಹಸಿರು ಚೌಕುಳಿಯಿಂದ ಕೂಡಿದ ಶರ್ಟ್ ಕೇಸರಿ ಚೌಕುಳಿಯಿಂದ ಕೂಡಿದ ಬಾತ್‌ ಟವಲ್‌ ಹಸಿರು ಬಣ್ಣದ ಒಳ ಚಡ್ಡಿ ಧರಿಸಿರುವುದು ಕಂಡು ಬಂದು ಮೃತರು ಯಾವ ರೀತಿಯಲ್ಲಿ ಮೃತ ಪಟ್ಟಿದ್ದಾರೆ  ಎಂಬ ಬಗ್ಗೆ ತಿಳಿದು ಬಂದಿರುವುದಿಲ್ಲ. ಈ ಬಗ್ಗೆ ಉಡುಪಿ ನಗರ ಪೋಲಿಸ್ ಠಾಣೆ ಯುಡಿಆರ್ ಕ್ರಮಾಂಕ 44/2015 ಕಲಂ 174 (ಸಿ,) ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ
  • ಕಾರ್ಕಳ : ದಿನಾಂಕ 28/08/2015 ರಂದು 18:15 ಗಂಟೆಗೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಚಿಕ್ಕಲ್‌ಬೆಟ್ಟು ಕ್ರಾಸ್‌ ಬಳಿ ಇರುವ ಕೃಷ್ಣ ಶೆಟ್ಟಿಯವರ ಕಾಂಪ್ಲೆಕ್ಸ್‌ ಕಟ್ಟಡದಲ್ಲಿರುವ ಶ್ರೀ ಪಧ್ಮಾವತಿ ಜನರಲ್‌ ಸ್ಟೋರ್ಸ್‌ ಎಂಬ ಅಂಗಡಿಯನ್ನು ನಡೆಸುತ್ತಿರುವ ಪಿರ್ಯಾದಿದಾರರಾದ ಶ್ರೀ ವಿಘ್ನೇಶ್ ನಾಯಕ್ (22), ತಂದೆ: ಸುಬ್ರಮಣ್ಯ ನಾಯಕ್, ವಾಸ: ಕೆರೆಮನೆ, ಚಿಕ್ಕಲ್‌ಬೆಟ್ಟು ಕ್ರಾಸ್ ಬಳಿ, ಹಿರ್ಗಾನ ಗ್ರಾಮ, ಕಾರ್ಕಳ ತಾಲೂಕು ಇವರಿಗೆ ಆಪಾದಿತ ಶೇಖರ ಎಂಬಾತನು ತನ್ನ ತಂಗಿಯ ಮಗ ಸುದರ್ಶನ್‌ ಎಂಬಾತನ ಸೈಕಲ್ಲನ್ನು ವಿಘ್ನೇಶ್ ನಾಯಕ್ ಮುಟ್ಟಿ ನೋಡಿದರು ಎಂಬ ಕಾರಣದಿಂದ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಅವರ ಅಂಗಡಿಗೆ ಅಕ್ರಮ ಪ್ರವೇಶ ಮಾಡಿ ಅವರಿಗೆ ಕೈಗಳಿಂದ ಹಲ್ಲೆ ನಡೆಸಿ, ಅಂಗಡಿಯ ಹೊರ ಬದಿಯಲ್ಲಿದ್ದ ಕುಡಿದು ಬಿಸಾಡಿದ ಬೊಂಡದಿಂದ ಅಂಗಡಿಯ ಶೋಕೇಶಿನ ಗಾಜನ್ನು ಪುಡಿ ಮಾಡಿ ಮನೆಗೆ ತೆರಳಿ ತನ್ನ ಸೊಂಟದಲ್ಲಿ ಸಾಧಾರಣ ಗಾತ್ರದ ಚೂರಿಯನ್ನು ಸಿಕ್ಕಿಸಿಕೊಂಡು ಮರಳಿ ವಿಘ್ನೇಶ್ ನಾಯಕ್ ರವರ ಅಂಗಡಿಯ ಬಳಿಗೆ ಬಂದಾಗ ಸ್ಥಳದಲ್ಲಿದ್ದ ವಿಘ್ನೇಶ್ ನಾಯಕ್ ರವರ ತಮ್ಮ ಯೋಗೀಶ್‌ ನಾಯಕ್‌ ಎಂಬವರು ಆಪಾದಿತನು ಹಲ್ಲೆ ನಡೆಸಿದ ಕೃತ್ಯವನ್ನು ಆಕ್ಷೇಪಿಸಿದ ಕಾರಣ ಕುಪಿತಗೊಂಡು ಆಪಾದಿತನು ಯೋಗೀಶ್‌ ನಾಯಕ್‌ರ ವರನ್ನು ಕೊಲ್ಲುವ ಉದ್ದೇಶದಿಂದ ತನ್ನ ಸೊಂಟದಲ್ಲಿದ್ದ ಮರದ ಹಿಡಿಯಿರುವ ಸಾದಾರಣ ಗಾತ್ರದ ಚೂರಿಯಿಂದ ಅವರ ಹೊಟ್ಟೆಯ ಬಲ ಬದಿಗೆ ತಿವಿದು ಹಲ್ಲೆ ನಡೆಸಿ ಅವರಿಗೆ ಗಂಭೀರ ಸ್ವರೂಪದ ಗಾಯಗೊಳಿಸಿ ಸ್ಥಳದಿಂದ ಚೂರಿ ಸಹಿತ ಪರಾರಿಯಾಗಿರುತ್ತಾನೆ. ಈ ಬಗ್ಗೆ ಕಾರ್ಕಳ ನಗರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 120/2015 ಕಲಂ 323, 504,447,323,326,307  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: