Saturday, August 29, 2015

Daily Crime Reports As on 29/08/2015 at 17:00 Hrs

ಅಪಘಾತ ಪ್ರಕರಣಗಳು
  • ಕೋಟ: ಪಿರ್ಯಾದಿದಾರರಾದ ಕೃಷ್ಣ ದೇವಾಡಿಗ (40) ತಂದೆ: ದಿ:ಶೀನ ದೇವಾಡಿಗ, ವಾಸ:ಮೂಕಾಂಬಿಕಾ ನಿಲಯ, ದೇವಾಡಿಗರ ಬೆಟ್ಟು, ಶಿವಕೃಪ ಹಾಲ್‌ನ ಹಿಂದೆ, ಐರೋಡಿ ಗ್ರಾಮ, ಉಡುಪಿ ತಾಲೂಕು ಇವರು ದಿನಾಂಕ 28/08/2015 ರಂದು ಮಧ್ಯಾಹ್ನ 2:45 ಗಂಟೆ ಸಮಯಕ್ಕೆ ಅವರ ಕೆಎ 18 ಕ್ಯೂ 0182 ನೇ ನಂಬ್ರದ ಮೋಟಾರ್ ಸೈಕಲ್‌ನಲ್ಲಿ ಅವರ ಹೆಂಡತಿ ವಾಣಿ ಎಂಬುವವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸವಾರಿ ಮಾಡಿಕೊಂಡು ಐರೋಡಿಯಿಂದ ಕೋಟ ಕಡೆಗೆ ಹೋಗುತ್ತಾ ಸಾಲಿಗ್ರಾಮ ಮೀನು ಮಾರ್ಕೆಟ್ ಬಳಿ ತಲುಪುವಾಗ ಎದುರಿನಿಂದ ಹೋಗುತ್ತಿದ್ದ ಕೆಎ 15 6522 ನೇ ನಂಬ್ರದ ಅಂಬಿಕಾ ಬಸ್ಸಿನ ಚಾಲಕನು ಆತನ ಬಸ್‌ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ ಯಾವುದೇ ಮುನ್ಸೂಚನೆ ನೀಡದೆ ಓಮ್ಮಲೇ ಬ್ರೇಕ್‌ ಹಾಕಿದ ಪರಿಣಾಮ ಕೃಷ್ಣ ದೇವಾಡಿಗ ರವರ ಮೋಟಾರ್ ಸೈಕಲ್‌ ಬಸ್ಸಿನ ಹಿಂಬದಿಗೆ ಢಿಕ್ಕಿ ಹೊಡೆದು ಕೃಷ್ಣ ದೇವಾಡಿಗ ರವರು ಹಾಗೂ ಅವರ ಹೆಂಡತಿ ಮೋಟಾರ್ ಸೈಕಲ್‌ ಸಮೇತ ಟಾರು ರಸ್ತೆಯ ಬಿದ್ದು ಕೃಷ್ಣ ದೇವಾಡಿಗ ರವರ ದವಡೆಗೆ ಹಾಗೂ ವಾಣಿಯವರ ತಲೆಯ ಹಿಂಬದಿಗೆ ತೀವ್ರ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ಕೋಟೇಶ್ವರ ಎನ್.ಆರ್ ಆಚಾರ್ಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 197/2015 ಕಲಂ:279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು: ಪಿರ್ಯಾದಿದಾರರಾದ ಪಿ.ಎನ್ ಮಂಜುನಾಥ (38), ತಂದೆ: ಪಿ.ಎ ನಾಗಣ್ಣ, ವಾಸ: ಎಸ್.ಎನ್ ಹಳ್ಳಿ ಯಲಹಂಕ  ಬೆಂಗಳೂರು ಇವರು ದಿನಾಂಕ 28/08/2015 ರಂದು ರಾತ್ರಿ ಬೆಂಗಳೂರಿನಿಂದ KL 07 BR 86 ನೇ ಕಾರಿನಲ್ಲಿ ಕಾರಿನ ಮಾಲಕರ ಸ್ನೇಹಿತರನ್ನು ಕೊಲ್ಲೂರು ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾ ದಿನಾಂಕ 29/08/2015 ರಂದು ಕೊಲ್ಲೂರಿನ ದಳಿ ಎಂಬಲ್ಲಿ ಸಾಗರ ಕೊಲ್ಲೂರು ರಾಜ್ಯ ಹೆದ್ದಾರಿಯ ತಿರುವು ರಸ್ತೆಯಲ್ಲಿ ಮಧ್ಯಾಹ್ನ 12:30 ಗಂಟೆ ಸಮಯ ತಲುಪುವಾಗ ಎದುರಿನಿಂದ ಕೊಲ್ಲೂರು ಕಡೆಯಿಂದ KA 20 C 2800 ನೇ ಓಮಿನಿ ಕಾರಿನ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಪಿ.ಎನ್ ಮಂಜುನಾಥ ರವರ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನ ಎದುರು ಬದಿಯ ಬಲ ಹೆಡ್‌ಲೈಟ್‌, ಬಂಪರ್‌, ಬೊನೆಟ್‌ ಮುಂತಾದವುಗಳು ಜಖಂಗೊಂಡಿರುತ್ತದೆ. ಈ ಬಗ್ಗೆ ಕೊಲ್ಲೂರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 99/2015 ಕಲಂ:279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣಗಳು
  • ಬೈಂದೂರು: ದಿನಾಂಕ 28/08/2015 ರಂದು ಸಂಜೆ 07:45 ಗಂಟೆಯ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀಮತಿ ದೇವಿ (55) ಗಂಡ: ದಿ| ಮಾಚ ಪೂಜಾರಿ, ವಾಸ: ಕೋಡಿಮನೆ ಅಳಿವೆ ಕೋಡಿ ತಾರಾಪತಿ ಪಡುವರಿ ಗ್ರಾಮ ಕುಂದಾಪುರ ತಾಲೂಕು ಇವರ ಮಗಳಾದ ಗಂಗೆ ಎಂಬುವವರು ಉಪ್ಪುಂದ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೋಗಿ ವಾಪಾಸ್ಸು ಕುಂದಾಪುರ ತಾಲೂಕು ಪಡುವರಿ ಗ್ರಾಮದ ತಾರಪತಿ ಅಳಿವೆಕೋಡಿ ಎಂಬಲ್ಲಿರುವ ಅವರ ಮನೆಗೆ ಬರುತ್ತಾ ಮನೆಯ ಹತ್ತಿರ ಕಾಲ್ದಾರಿಯಲ್ಲಿ ನಡೆದುಕೊಂಡು ಬರುತ್ತಿರುವ ಸಮಯ ಆರೋಪಿ ಶಂಕರ ಹಾಗೂ ಅವನ ಮಗ ಯೋಗೀಶನು ಗಂಗೆಯನ್ನು ಅವಾಚ್ಯ ಶಬ್ದಗಳಿಂದ ಬೈದು ಯೋಗಿಶನು ಆತನ ಕೈಯಲ್ಲಿದ್ದ ಚೂರಿಯಿಂದ ಹೊಡೆದಾಗ ಗಂಗೆಯ ಎಡಕಾಲಿಗೆ ಪೆಟ್ಟಾಗಿರುತ್ತದೆ. ಜಗಳ ಬಿಡಿಸಲು ಹೋದ ದೇವಿಯವರಿಗೆ ಶಂಕರನು ಕೈಯಿಂದ ಹೊಡೆದಿದ್ದು, ಯೋಗೀಶನು ಅವನ ಕೈಯಲ್ಲಿದ್ದ ಚೂರಿಯಿಂದ ತೀವ್ರವಾಗಿ ತಲೆ ಹಾಗೂ ಎಡಕೆನ್ನೆಗೆ ಚುಚ್ಚಿದನು ಬಳಿಕ ಆರೋಪಿತರು ದೇವಿ ಯವರನ್ನು ಹಾಗೂ ಅವರ ಮಗಳಿಗೆ ಜೀವ ಬೆದರಿಕೆ ಹಾಕಿರುತ್ತಾರೆ. ದೇವಿ ಯವರು ಹಾಗೂ ಅವರ ಮಗಳು ಗಂಗೆಯು ಚಿಕಿತ್ಸೆಯ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 232/2015 ಕಲಂ 341, 504, 326, 323, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ದಿನಾಂಕ 28/08/2015 ರಂದು ರಾತ್ರಿ 08:00 ಗಂಟೆಯ ವೇಳೆಗೆ ಪಿರ್ಯಾದಿದಾರರಾದ ಶಂಕರ ಪೂಜಾರಿ (54) , ತಂದೆ: ನಾರಾಯಣ ಪೂಜಾರಿ, ವಾಸ: ಕೋಡಿಮನೆ ತಾರಾಪತಿ ಪಡುವರಿ ಗ್ರಾಮ ಕುಂದಾಪುರ ತಾಲೂಕು ಇವರು ಮನೆಯ ಹತ್ತಿರ ಕಾಲ್ದಾರಿಯ ಬಳಿ ಇರುವ ಸಮಯ ಅವರ ನೆರೆಮನೆಯ ದೇವಯ್ಯ ಪೂಜಾರಿಯು ಅಡ್ಡಗಟ್ಟಿ ಶಂಕರ ಪೂಜಾರಿ ಯವರನ್ನು ಉದ್ದೇಶಿಸಿ ಅವಾಚ್ಯ ಶಬ್ದದಿಂದ ಬೈದು ಆತನ ಕೈಯಲ್ಲಿದ್ದ ಕತ್ತಿಯಿಂದ ತಲೆಯ ಬಲಬದಿಗೆ ಕಡಿದನು ಶಂಕರ ಪೂಜಾರಿಯವರು ನೋವಿನಿಂದ ಬೊಬ್ಬೆ ಹೊಡೆದಾಗ ಅವರ ಮಗ ಹಾಗೂ ಹೆಂಡತಿ ಹಾಗೂ ಇತರರು ಬರುವುದನ್ನು ನೋಡಿ ಆರೋಪಿತನು ಅಲ್ಲಿಂದ ಹೋಗುತ್ತಾ ಜೀವ ಬೆದರಿಕೆ ಹಾಕಿ ಹೋಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 233/2015  ಕಲಂ 341, 504, 326, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: