Saturday, August 29, 2015

Daily Crime Reports As on 29/08/2015 at 19:30 Hrs

ಅಪಘಾತ ಪ್ರಕರಣ
  • ಕುಂದಾಪುರ: ದಿನಾಂಕ 29/08/2015 ರಂದು ಮಧ್ಯಾಹ್ನ 03:30 ಗಂಟೆಗೆ ಕುಂದಾಪುರ ತಾಲೂಕು ಹಂಗಳೂರು ಗ್ರಾಮದ ನೇರಂಬಳ್ಳಿ ಬಳಿ ರಸ್ತೆಯಲ್ಲಿ ಆಪಾದಿತ ಶಂಕರ.ವಿ ಎಂಬುವವರು KA 20 C 8074 ನೇ ಮಹೀಂದ್ರ ಬೋಲೆರೋ ಗೂಡ್ಸ್ ವಾಹನವನ್ನು  ನೇರಂಬಳ್ಳಿ ಕಡೆಯಿಂದ ಕಟ್ಕೇರಿ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ  ಚಲಾಯಿಸಿಕೊಂಡು ಬಂದು ಕಟ್ಕೇರಿ ಕಡೆಯಿಂದ ನೇರಂಬಳ್ಳಿ ಕಡೆಗೆ ಪಿರ್ಯಾದಿದಾರರಾದ ಕೆ.ಸಣ್ಣಯ್ಯ (59), ತಂದೆ: ದಿ.ಗಣಪಯ್ಯ ವಾಸ: ಶ್ರೀ ರಾಮ ನಿಲಯ ಮಂಗಳಪಾಡ್ಯ  ರಸ್ತೆ ವಡೇರಹೋಬಳಿಗ್ರಾಮ, ಕುಂದಾಪುರ ಇವರು ಚಲಾಯಿಸಿಕೊಂಡು ಹೋಗುತ್ತಿದ್ದ  KA 20 X 2635 ನೇ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಕೆ.ಸಣ್ಣಯ್ಯ ರವರು ಬೈಕ್‌ ಸಮೇತ ರಸ್ತೆಯಲ್ಲಿ ಬಿದ್ದು ಗಾಯಗೊಂಡು ಚಿಕಿತ್ಸೆ  ಬಗ್ಗೆ ಕುಂದಾಪುರ  ಚಿನ್ಮಯಿ  ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.ಈ ಬಗ್ಗೆ ಕುಂದಾಪುರ ಸಂಚಾರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 106/2015  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ
  • ಮಣಿಪಾಲ: ದಿನಾಂಕ 28/08/2015 ರಂದು ಬೆಳಿಗ್ಗೆ 8:30 ಗಂಟೆಯಿಂದ 15:30 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಪಿರ್ಯಾದಿದಾರರಾದ ಡಾ.ನವೀನ್‌ ರೆಡ್ಡಿ, Junior Resident, Dept of Paediatrics,Kasturba Medical Collage, Manipal ಇವರು Woman & Child Block of Kasturba Hospital, Manipal ಇದರ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದ AP 04 M 4789 ನೇ CBZ X-TREME ಮೋಟಾರ್ ಸೈಕಲ್‌ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾಗಿದೆ. ಕಳವಾದ ಮೋಟಾರ್ ಸೈಕಲ್‌ನ ಅಂದಾಜು ಮೌಲ್ಯ ಸುಮಾರು ರೂಪಾಯಿ 25,000/- ಆಗಿರುತ್ತದೆ. ಈ ಬಗ್ಗೆ ಮಣಿಪಾಲ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 171/2015 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ
  • ಮಣಿಪಾಲ: ದಿನಾಂಕ 27/08/2015 ರಂದು ರಾತ್ರಿ 8:30 ಗಂಟೆಗೆ  ಉಡುಪಿ ತಾಲೂಕು ಅಲೆವೂರು ಗ್ರಾಮದ ಅಲೆವೂರು ಪೇಟೆಯಲ್ಲಿ ಪಿರ್ಯಾದುದಾರರಾದ ಗಣೇಶ್‌, ತಂದೆ: ನಾದು,ವಾಸ: ಎಮ್‌.ಸಿ ರಸ್ತೆ, ಮಣಿಪಾಲ, ಅಂಬೆಡ್ಕರ್‌ ಭವನದ ಹತ್ತಿರ, ಅಲೆವೂರು ಗ್ರಾಮ, ಉಡುಪಿ ಇವರಿಗೆ ಕಾರಿನಲ್ಲಿ ಬಂದ ರಮೇಶ್‌ ನಾಯ್ಕ ಎಂಬುವವರು ಕೈಯಿಂದ ಎಡ ಕೆನ್ನೆಗೆ ಹೊಡೆದು, ಅವರೊಂದಿಗೆ ಬಂದ ಇತರ ಮೂರು ಮಂದಿ ಕಾಲಿನಿಂದ ತುಳಿದು ಬಿಡಿಸಲು ಬಂದ ಗಣೇಶ್‌ ರವರ ಅಕ್ಕ ರವರನ್ನು ಕೂಡ ದೂಡಿ ಹಾಕಿ ಕಾರಿನಲ್ಲಿ ಹೋಗಿರುತ್ತಾರೆ.ಈ ಬಗ್ಗೆ ಮಣಿಪಾಲ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 172/2015 ಕಲಂ 323 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಲಾಗಿರುತ್ತದೆ.

No comments: