Sunday, August 30, 2015

Daily Crime Reports As on 30/08/2015 at 07:00 Hrs


ಅಪಘಾತ ಪ್ರಕರಣ
  • ಉಡುಪಿ ಸಂಚಾರ:ದಿನಾಂಕ:25/08/2015 ರಂದು 10:15 ಗಂಟೆಗೆ ಪಿರ್ಯಾದಿದಾರರಾದ ರವೀಂದ್ರ ಅಚಾರ್ಯ (46) ತಂದೆ:ಅನಂತಯ್ಯ ಅಚಾರ್ಯ, ವಾಸ:ಗುಳಿಬೆಟ್ಟು, ಕೆಮ್ಮಣ್ಣು, ಮೂಡುತೋನ್ಸೆ ಗ್ರಾಮ, ಉಡುಪಿರವರು ತನ್ನ ಕೆಎ 20 331 ನೇ ಬೈಕ್‌ನಲ್ಲಿ ಅರುಣ ಬಂಗೇರ ಎಂಬವರನ್ನು ಸಹ ಸವಾರರನ್ನಾಗಿ ಕೂರಿಸಿಕೊಂಡು ಲಕ್ಷ್ಮಿನಗರ-ಪುತ್ತೂರು ರಸ್ತೆಯಲ್ಲಿ ಉಡುಪಿಗೆ ಬರುತ್ತಾ ಗೋಳಿಮರದ ಹತ್ತಿರದ ತಿರುವಿನಲ್ಲಿ ಎಡಗಡೆಯ ಒಳ ರಸ್ತೆಯಿಂದ ಕೆಎ 20 ಇಎಚ್ 4380 ನೇ ಬೈಕ್ ಸವಾರ ಯೊಗೀಶ್ ಬೈಕನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ಒಮ್ಮೆಲೆ ಮುಖ್ಯ ರಸ್ತೆಗೆ ಬಂದು ರವೀಂದ್ರ ಅಚಾರ್ಯರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಬೈಕಿಗೆ ಡಿಕ್ಕಿ  ಹೊಡೆದ ಪರಿಣಾಮ ಇಬ್ಬರೂ ರಸ್ತೆಗೆ ಬಿದ್ದು ರವೀಂದ್ರ ಅಚಾರ್ಯರವರಿಗೆ ಮುಖಕ್ಕೆ ಹಾಗೂ ಎಡ ಕಾಲಿಗೆ ಹಾಗೂ ಸಹ ಸವಾರ  ಅರುಣ ಬಂಗೇರರವರಿಗೆ ಎಡ ಕಾಲಿಗೆ ತೀವ್ರ ಸ್ವರೂಪದ ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಠಾಣಾ ಅಪರಾಧ ಕ್ರಮಾಂಕ 95/2015 ಕಲಂ:279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಬಾವಿಕ ಮರಣ ಪ್ರಕರಣ
  • ಅಜೆಕಾರು:ಪಿರ್ಯಾದಿದಾರರಾದ ಜಯ ಪೂಜಾರಿ (46) ತಂದೆ:ಮೆಂಕ ಪೂಜಾರಿ ವಾಸ:ಬಾಗಂತ ಬೆಟ್ಟು, ಹಾಡಿಯಂಗಡಿ, ಶಿರ್ಲಾಲು ಗ್ರಾಮ, ಕಾರ್ಕಳ ತಾಲೂಕುರವರ ತಾಯಿ ಕಿಟ್ಟಿ ಪೂಜಾರ್ತಿ (85) ಎಂಬವರು ಮೂತ್ರದ ಸಮಸ್ಯೆಯಿಂದ ಬಳಲುತ್ತಿದ್ದು ಹಾಗೂ ಈ ಹಿಂದೆ  ದನಕಟ್ಟುವಾಗ ಬಿದ್ದು ಸೊಂಟಕ್ಕೆ ಮತ್ತು ಕಾಲಿಗೆ ನೋವಾಗಿರುತ್ತದೆ. ಈ ನೋವು ಪದೇ ಪದೇ ಬರುತ್ತಿರುವುದರಿಂದ ಚಿಕಿತ್ಸೆ ಮಾಡಿಸಿದ್ದು  ದಿನಾಂಕ:29/08/2015 ರಂದು ಬೆಳಿಗ್ಗೆ ಜಯ ಪೂಜಾರಿರವರು ಕೆಲಸಕ್ಕೆ ಹೋಗಿದ್ದು, ಅವರ ಹೆಂಡತಿ ಸರೋಜಾಳು ಮಧ್ಯಾಹ್ನ ಸುಮಾರು  02:00 ಗಂಟೆಗೆ  ಬೀಡಿ ಬ್ರಾಂಚ್‌ಗೆ ಹೋಗಿ ವಾಪಾಸು ಮನೆಗೆ ಬಂದಾಗ, ಕಿಟ್ಟಿ ಪೂಜಾರ್ತಿರವರು ಮನೆಯಲ್ಲಿ ಇರದೇ ಇದ್ದು, ಸರೋಜಾರವರು ಜಯ ಪೂಜಾರಿರವರ ಮೊಬೈಲ್ ನಂಬರಿಗೆ ಕರೆ ಮಾಡಿ ತಿಳಿಸಿದ್ದು, ಜಯ ಪೂಜಾರಿರವರು ಕೂಡಲೇ ಬಂದು ನೆರೆಕರೆಯವರೊಂದಿಗೆ ಮನೆಯ ಪರಿಸರದಲ್ಲಿ ಹುಡುಕಿದಲ್ಲಿ ಸುಮಾರು 02:45 ಗಂಟೆಗೆ ಮನೆಯಿಂದ ಸುಮಾರು 200 ಮೀಟರ್‌ ದೂರದಲ್ಲಿ ಕಿಟ್ಟಿ ಪೂಜಾರ್ತಿರವರು ಗೇರು ಮರಕ್ಕೆ ಕುತ್ತಿಗೆಗೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಕಿಟ್ಟಿ ಪೂಜಾರ್ತಿರವರು ತೀವ್ರ ತರದ ಸೊಂಟದ ನೋವು ಮತ್ತು ಮೂತ್ರದ ಸಮಸ್ಯೆಯಿಂದ ಬಳಲುತ್ತಿದ್ದು ಅದರಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕಿಟ್ಟಿ ಪೂಜಾರ್ತಿರವರ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಎಂಬುದಾಗಿ ಜಯ ಪೂಜಾರಿರವರು ನೀಡಿದ ದೂರಿನಂತೆ ಅಜೆಕಾರು ಠಾಣಾ ಅಸ್ವಾಭಾವಿಕ  ಮರಣ ಕ್ರಮಾಂಕ 12/2015 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.   

No comments: