Sunday, August 30, 2015

Daily Crime Reports As on 30/08/2015 at 17:00 Hrs


ಅಪಘಾತ ಪ್ರಕರಣ
  • ಕುಂದಾಫುರ:: ದಿನಾಂಕ 30/08/2015 ರಂದು ಬೆಳಿಗ್ಗೆ  10:45 ಗಂಟೆಗೆ ಕುಂದಾಪುರ  ತಾಲೂಕು ಕೊಟೇಶ್ವರ  ಗ್ರಾಮದ ಅಂಕದಕಟ್ಟೆಯ  ಸರ್ಜನ್  ಆಸ್ಪತ್ರೆಯ  ಬಳಿ  ರಾಷ್ಟ್ರೀಯ ಹೆದ್ದಾರಿ 66  ರಸ್ತೆಯಲ್ಲಿ  ಆಪಾದಿತ  ಗುರುದಾಸ  ನಾಯಕ್  ಎಂಬವರು KA 20 B 2457 ನೇ ಕಾರನ್ನು  ಕೊಟೇಶ್ವರ  ಕಡೆಯಿಂದ  ಕುಂದಾಪುರ  ಕಡೆಗೆ  ಅತೀವೇಗ ಹಾಗೂ  ಅಜಾಗರುಕತೆಯಿಂದ ಚಲಾಯಿಸಿಕೊಂಡು   ರಸ್ತೆಯ ಎಡ ಬದಿಗೆ ಬಂದು   ಚಂದ್ರಶೇಖರ  ಸವಾರಿ  ಮಾಡಿಕೊಂಡು  ಹೋಗುತ್ತಿದ್ದ ಸೈಕಲ್‌‌ ಗೆ  ಹಿಂದಿನಿಂದ ಡಿಕ್ಕಿ  ಹೊಡೆದ  ರಬಸಕ್ಕೆ  ಚಂದ್ರಶೇಖರ ಸೈಕಲ್‌  ನಿಂದ ಎಸೆದು  ರಸ್ತೆಯ ಬದಿಯ ಡಿವೈಡರ್‌  ಗೆ   ಬಡಿದು  ಅವರ ತಲೆಗೆ  ಹಾಗೂ  ಕೈ ಕಾಲುಗಳೀಗೆ ಗಂಬೀರ ರಕ್ತಗಾಯವಾಗಿದ್ದು ಚಂದ್ರಶೇಖರನನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ  ಆಸ್ಪತ್ರೆಗೆ  ಕರೆದುಕೊಂಡು  ಹೋದಾಗ  ಆಸ್ಪತ್ರೆಯ  ವೈದ್ಯರು  ಪರೀಕ್ಷಿಸಿ   ಚಂದ್ರಶೇಖರನು ಮೃತಪಟ್ಟಿದ್ದಾಗಿ  ತಿಳಿಸಿರುತ್ತಾರೆ, ಈ ಬಗ್ಗೆ ಯಲಗುರೇಶ (21) ತಂದೆ : ಯಮುದ್ರಪ್ಪ ವಾಸ:  ಅರಳದಿಣ್ಣಿ ಯಲ್‌‌‌‌‌‌‌‌‌‌‌‌ಬರ್‌‌‌‌‌‌  ಅಂಚೆ,  ಬಸವನ ಬಾಗೇವಾಡಿ  ತಾಲೂಕು ವಿಜಯಪುರ ಜಿಲ್ಲೆ.ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ:107/ 15  ಕಲಂ 279 ,304 (ಎ)  ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
ಇತರೇ ಪ್ರಕರಣ
  • ಗಂಗೊಳ್ಳಿ: ಕುಂದಾಪುರ ತಾಲೂಕು ಹರ್ಕೂರು ಗ್ರಾಮದ ಹೊರಣಿ ಚಿತ್ತೇರಿ ಮಂಜುನಾಥ ಕಟ್ಟಿನ ಮಕ್ಕಿ ಎಂಬವರ ಕೊಟ್ಟಿಗೆಯಿಂದ ದಿನಾಂಕ: 30/08/2015 ರಂದು ರಾತ್ರಿ 02:00 ಗಂಟೆ ಸಮಯಕ್ಕೆ ಅಪಾದಿತರಾದ ಮೊಹಮ್ಮದ್ ಹನೀಫ್ ಗಂಗೊಳ್ಳಿ ಹಾಗೂ  ಇನ್ನಿತರ ಇಬ್ಬರೂ  ಸೇರಿ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಎರಡು ಎತ್ತುಗಳನ್ನು ಹಗ್ಗ ಬಿಡಿಸಿ ಕಳವು ಮಾಡಿಕೊಂಡು  KA 20 B 2334 ನೇ ಓಮಿನಿಯಲ್ಲಿ ತುಂಬಿಸಿ ಕೊಂಡು ಹೋಗುವಾಗ ಪಿರ್ಯಾದಿ ಮಂಜುನಾಥ ಕಟ್ಟಿನ ಮಕ್ಕಿ (27) ತಂದೆ: ಗೋವಿಂದ ಪೂಜಾರಿ, ವಾಸ: ಹೊರಣಿ ಚಿತ್ತೇರಿ, ಹರ್ಕೂರು ಅಂಚೆ ಮತ್ತು ಗ್ರಾಮ ಇವರು ಎಚ್ಚರಗೊಂಡು ನೋಡಿ ಠಾಣೆಗೆ ಮಾಹಿತಿ ನೀಡಿದ್ದು  ಅದರಂತೆ ಎ.ಎಸ್.ಐ. ಅಣ್ಣಯ್ಯ ಗೊಲ್ಲ ಹಾಗೂ ಇತರ ಸಿಬ್ಬಂದಿಯವರು ಗುಜ್ಜಾಡಿ ಜಂಕ್ಷನ್ ನಲ್ಲಿ ಓಮಿನಿಯನ್ನು ತಡೆದು ನಿಲ್ಲಿಸಿ ಎರಡು ಎತ್ತುಗಳ ನಾಲ್ಕೂ ಕಾಲುಗಳನ್ನು ಕಟ್ಟಿ  ಓಮಿನಿಯಲ್ಲಿ ಸಾಗಿಸಿದ್ದು, ಅಪಾದಿತ ಮೊಹಮ್ಮದ್ ಹನೀಫ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ, ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 110/2015 ಕಲಂ379 ಐಪಿಸಿ ಕಲಂ 8,9,11 ಗೋಹತ್ಯೆ ನಿಷೇಧ ಕಾಯ್ದೆ, 1964, ಮತ್ತು ಕಲಂ 11(11) ಪ್ರಾಣಿ ಹಿಂಸೆ ತಡೆ ಕಾಯ್ದೆ 1960 ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ರವೀಶ್ ಕುಮಾರ್ ಹೊಳ್ಳ ಹೆಚ್.ಸಿ. 1732 ಗಂಗೊಳ್ಳಿ ಪೊಲೀಸ್ ಠಾಣೆ ಇವರು ರಾತ್ರಿ ವಿಶೇಷ ರೌಂಡ್ಸ ಕರ್ತವ್ಯದಲ್ಲಿ ಇರುವಾಗ  ದಿ: 30/07/2015 ರಂದು ಬೆಳ್ಳಿಗ್ಗೆ 03:15 ಗಂಟೆಗೆ ಗಂಗೊಳ್ಳಿ ಪೇಟೆಯಲ್ಲಿರುವ ವೆಂಕಟೇಶಾ ಕೃಪಾ ಟ್ರೇಡರ್ಸ ಹತ್ತಿರ ಅಂಗಡಿಗಳ ಮರೆಯಲ್ಲಿ ಒಂದು ಮೋಟಾರು ಸೈಕಲ್ ಸಂಶಯಾಸ್ಪದ ರೀತಿಯಲ್ಲಿ ನಿಲ್ಲಿಸಿರುವುದು ಕಂಡು ಬಂತು ಹತ್ತಿರ ಹೋಗಿ ನೋಡಲಾಗಿ  KA 20 Y 7602 ಆಗಿದ್ದು, ಆತನನ್ನು ಹಿಡಿದು ವಿಚಾರಿಸಲಾಗಿ ಸರಿಯಾಗಿ ಹೆಸರು ವಿಳಾಸ ನಿಡದೇ ತನ್ನ ಇರುವಿಕೆಯ ಬಗ್ಗೆ ಸಮರ್ಪಕವಾದ ವಿವರಣೆ ನೀಡದೇ ಪದೇ ಪದೇ ವಿಚಾರಿಸಿದಾಗಿ ಆದಿಲ್ (28)ತಂದೆ: ಖಾದ್ರಿ ಬ್ಯಾರಿ, ವಾಸ: ಶಬೀನಾ ಮಂಜಿಲ್ ಪಡುಕೆರೆ ರಾಮ ಮಂದಿರದ ಬಳಿ ಕೋಟ ತಟ್ಟು ಗ್ರಾಮ ಉಡುಪಿ ಜಿಲ್ಲೆ ಎಂಬುದಾಗಿ ವಿಳಾಸ ನೀಡಿದ್ದು, ಇತನು ರಾತ್ರಿ ಸಮಯ ಸದ್ರಿ ಸ್ಥಳದಲ್ಲಿ ಇರುವಿಕೆಯ ಬಗ್ಗೆ ಪ್ರಶ್ನಿಸಲಾಗಿ ಸಮರ್ಪಕವಾದ ಉತ್ತರ ನೀಡಿರುವುದಿಲ್ಲಾ ಆತನ ವಶದಲ್ಲಿ ಸುಮಾರು 2 ಅಡಿ ಉದ್ದದ ಒಂದು ಕಬ್ಬಿಣದ ಸರಳನ್ನು ಇಟ್ಟು ಕೊಂಡಿರುವುದು ಕಂಡು ಬಂತು. ಕನ್ನ ಕಳವು ಮಾಡುವ ಆಯುಧ ಹಿಡಿದು ಕೊಂಡು ಯಾವುದೋ ಬೇವಾರಂಟು ತಕ್ಷೀರು ನಡೆಸುವ ಉದ್ದೇಶದಿಂದ ತನ್ನ ಇರುವಿಕೆಯನ್ನು ಮರೆ ಮಾಚಿ ಕೊಂಡಿದ್ದಲ್ಲದೇ ತನ್ನ ಇರುವಿಕೆಯ ಬಗ್ಗೆ ಸಮರ್ಪಕವಾಧ ಉತ್ತರವನ್ನು ನೀಡದೇ ಇರವು ಕಾರಣ ಇತನನ್ನ ಸ್ಥಳದಲ್ಲಿ ದಸ್ತಗಿರಿ ಮಾಡಿ  ಅವನು ಉಪಯೋಗಿಸಿದ ಮೋಟಾರು ಸೈಕಲ್ ಹಾಗೂ ಕಬ್ಬಿಣದ ಸರಳನ್ನು ಸ್ಥಳದಲ್ಲಿಯೇ ಮಹಜರು ಮುಖೇನ ಸ್ವಾಧೀನ ಪಡಿಸಿ ಕೊಳ್ಳಲಾಗಿದೆ, ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ 109/2015 ಕಲಂ 96 ಕರ್ನಾಟಕ ಪೊಲೀಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಉಡುಪಿ: ಪಿರ್ಯಾದಿ ಸಂದೇಶ ಕೆ ಶೆಟ್ಟಿ, ವಾಸ: ಪ್ರಿ ನಿಲಯ ಅಲೆವೂರು ಉಡುಪಿ ಇವರ ತಂದೆಯವರಾದ ಕರುಣಾಕರ ಶೆಟ್ಟಿ (62)ರವರು ಹೃದಯ ಸಂಬಂಧಿ ಕಾಯಿಲೆಯಿಂದ ಮತ್ತು ಡಯಾಬಿಟಿಸ್ ಇನ್ನಿತರ ಕಾಯಿಲೆಯಿಂದ ಬಳಲುತ್ತಿದ್ದು, ದಿನಾಂಕ 30/08/2015 ರಂದು ಬೆಳಗ್ಗೆ 04:30 ಗಂಟೆಗೆ ಉಡುಪಿಯ ಮಿತ್ರ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋಗಿ ದಾಖಲು ಮಾಡಿರುತ್ತಾರೆ. ಆದರೆ ಚಿಕಿತ್ಸೆಯಲ್ಲಿರುವಾಗ ಶ್ವಾಸಕೋಶ ಮತ್ತು ಉಸಿರಾಟದ ತೊಂದರೆ ಹೆಚ್ಚಾದ್ದರಿಂದ ಟಿಎಮ್‌ಎ ಪೈ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸಲಹೆ ನೀಡಿದ್ದು ಅದರಂತೆ ಟಿಎಮ್‌ಎ ಪೈ ಆಸ್ಪತ್ರೆಗೆ ಸಮಯ ಸುಮಾರು ಬೆಳಗ್ಗೆ 06:00 ಗಂಟೆಗೆ ಕರೆದುಕೊಂಡು ಬಂದು ದಾಖಲು ಮಾಡಿದ್ದು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯು.ಡಿ.ಆರ್‌ ನಂಬ್ರ 45/2015 ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: