ಕಳವು ಪ್ರಕರಣಗಳು
- ಕೋಟ: ಪಿರ್ಯಾದಿದಾರರಾದ ಶ್ರೀಮತಿ ತಾರಾ (50), ಗಂಡ:ಬಿಳಿಯ, ವಾಸ; ಕಾರ್ಕಡ ಅಂಗನವಾಡಿ ಹತ್ತಿರ,ಸಾಲಿಗ್ರಾಮ ಅಂಚೆ ಕಾರ್ಕಡ ಗ್ರಾಮ,ಉಡುಪಿ ತಾಲೂಕು ಇವರು ದಿನಾಂಕ 01/08/2015 ರಂದು 16:00 ಗಂಟೆಗೆ ಉಡುಪಿ ತಾಲೂಕು ಕಾರ್ಕಡ ಗ್ರಾಮದ ಅಂಗನವಾಡಿ ಬಳಿ ಇರುವ ಅವರ ಮನೆಗೆ ಬೀಗ ಹಾಕಿ ತಾಯಿ ಮನೆಯಾದ ಮಧುವನಕ್ಕೆ ಹೋಗಿದ್ದು ದಿನಾಂಕ 15/08/2015 ರಂದು 10:00 ಗಂಟೆಗೆ ಮನೆಗೆ ಬಂದು ನೋಡುವಾಗ ಯಾರೋ ಕಳ್ಳರು ಮನೆಯ ಪೂರ್ವದಿಕ್ಕಿನಲ್ಲಿರುವ ಬಾಗಿಲಿನ ಬೀಗ ಮುರಿದು ಮನೆಯ ಒಳಗೆ ಪ್ರವೇಶಿಸಿ ಮಲಗುವ ಕೋಣೆಯ ಬೆಂಚಿನ ಮೇಲೆ ಒಂದು ಬ್ಯಾಗ್‌ನ ಒಳಗೆ ಪರ್ಸ್‌ನಲ್ಲಿ ಇಟ್ಟಿದ್ದ 1 ½ ಗ್ರಾಂ ತೂಕದ ಬಂಗಾರದ ಚೈನ್-2, 3 ಗ್ರಾಂ ತೂಕದ ಬಂಗಾರದ ಕೆಂಪು ಹರಳಿನ ಮಾಟಿ ಇರುವ ಬೆಂಡೋಲೆ-2, 2 ಗ್ರಾಂ ತೂಕದ ಬಂಗಾರದ ಉಂಗುರ-2, 3 ಗ್ರಾಂ ತೂಕದ ಬಂಗಾರದ ಕರಿಮಣಿ ಸರ-1 ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಚಿನ್ನಾಭರಣಗಳ ಅಂದಾಜು ಮೌಲ್ಯ 24,000/-ರೂಪಾಯಿ ಆಗಿರುತ್ತದೆ. ಈ ಬಗ್ಗೆ ಕೋಟ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 183/2015 ಕಲಂ:454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
- ಕುಂದಾಪುರ: ಪಿರ್ಯಾದಿದಾರರಾದ ನಂದೀಶ ಶೆಟ್ಟಿ (25), ತಂದೆ: ದೇವೇಂದ್ರ ಶೆಟ್ಟಿ, ವಾಸ: ಶ್ರೀ ದುರ್ಗಾ ನಿಲಯ, ಮ್ಯಾಕೇರಿ, ಗುಲ್ವಾಡಿ ಗ್ರಾಮ, ಕುಂದಾಪುರ ತಾಲೂಕು ಇವರು ಗುಲ್ವಾಡಿ ಗ್ರಾಮದ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪಕರಾಗಿದ್ದು, ದಿನಾಂಕ 14/08/2015 ರಂದು ರಾತ್ರಿ 8:15 ಗಂಟೆಗೆ ದೇವಸ್ಥಾನದ ಸಿಬ್ಬಂದಿ ಮಹೇಶ ಭಟ್ಟರು ದೇವಸ್ಥಾನದ ಗರ್ಭಗುಡಿ ಮತ್ತು ಹೊರ ಪೌಳಿಗೆ ಬೀಗ ಹಾಕಿ ಹೋಗಿದ್ದು, ದಿನಾಂಕ 15/08/2015 ರಂದು ಬೆಳಿಗ್ಗೆ 06:20 ಗಂಟೆಗೆ ಬಂದು ದೇವಸ್ಥಾನದ ಬೀಗ ತೆಗೆದಾಗ ರಾತ್ರಿ ವೇಳೆ ಯಾರೋ ಕಳ್ಳರು ದೇವಸ್ಥಾನದ ಬೀಗ ಮುರಿದು ದೇವಸ್ಥಾನದ ಗರ್ಭಗುಡಿಯಲ್ಲಿದ್ದ 1½ ಕೆ.ಜಿ ತೂಕದ ರೂಪಾಯಿ 10 ಲಕ್ಷ ಬೆಲೆಬಾಳುವ ಅಮ್ಮನವರ ಚಿನ್ನದ ಉತ್ಸವ ಮೂರ್ತಿ, 1½ ಕೆ.ಜಿ ತೂಕದ ರೂಪಾಯಿ 30,000/- ಬೆಲೆಬಾಳುವ ಬೆಳ್ಳಿಯ ವೀರಭದ್ರ ದೇವರ ಮುಖವಾಡ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂಪಾಯಿ 10,30,000/- ಆಗಿರುತ್ತದೆ. ಈ ಬಗ್ಗೆ ಕುಂದಾಪುರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 288/2015 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
- ಅಜೆಕಾರು: ಪಿರ್ಯಾದಿದಾರರಾದ ಶೇಖರ ಗೌಡ (49) ತಂದೆ: ದಿ.ಶೇಷು ಗೌಡ, ವಾಸ: ಪಯ್ಯಂದೆ ಪಲ್ಕೆ 5 ಸೆಂಟ್ಸ, ಶಿರ್ಲಾಲು ಗ್ರಾಮ ಕಾರ್ಕಳ ತಾಲೂಕು ಇವರ ಭಾವ ಜಯಂತ್ ಗೌಡ(35) ಎಂಬುವವರು ಮುದ್ರಾಡಿಯ ಬಲ್ಲಾಡಿಯಲ್ಲಿ ವಾಸವಾಗಿದ್ದು ದಿನಾಂಕ 14/08/2015 ರಂದು ಶೇಖರ ಗೌಡ ರವರ ಮನೆಗೆ ಬಂದಿದ್ದು ಬೆಳಿಗ್ಗೆ 08:00 ಗಂಟೆಯ ಸುಮಾರಿಗೆ ಮನೆಯ ಬಲಬದಿಯ ಹಾಲ್‌ನಲ್ಲಿ ಗೇರು ಬೀಜದ ಸಿಪ್ಪೆ ತೆಗೆಯಲು ಕುಳಿತಿದ್ದು ಗೇರು ಬೀಜ ಸಿಪ್ಪೆ ತೆಗೆಯುತ್ತಿದ್ದಲ್ಲಿಯೇ ಮಗುಚಿ ಬಿದ್ದಿರುತ್ತಾರೆ. ಇದನ್ನು ಕಂಡು ಶೇಖರ ಗೌಡ ರವರು ಕೂಡಲೇ ಅವರನ್ನು ಆರೈಕೆ ಮಾಡಿ ಹೆಬ್ರಿಯ ರಾಘವೇಂದ್ರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿನ ವೈಧ್ಯರಲ್ಲಿ ತೋರಿಸಿದಲ್ಲಿ ಜಯಂತ್ ಗೌಡ ರವರನ್ನು ಪರೀಕ್ಷಿಸಿದ ವೈಧ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಅಜೆಕಾರು ಪೋಲಿಸ್ ಠಾಣೆ ಯುಡಿಆರ್ ಕ್ರಮಾಂಕ 11/2015 ಕಲಂ: 174 ಸಿ.ಆರ್. ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment