Sunday, August 16, 2015

Daily Crime Reports As on 16/08/2015 at 07:00 Hrs

ಅಪಘಾತ ಪ್ರಕರಣಗಳು  
  • ಶಂಕರನಾರಾಯಣ:ದಿನಾಂಕ 15/08/2015 ರಂದು 17:30 ಗಂಟೆಗೆ ಪಿರ್ಯಾದಿದಾರರಾದ ರಮೇಶ ಆಚಾರಿ (33), ತಂದೆ:ಕೃಷ್ಣಯ್ಯ ಆಚಾರಿ, ತುಮ್ಕೋಡು ಚಕ್ರ ನಗರ, ಕರಿನಗರ ಗ್ರಾಮ, ಹೊಸನಗರ ತಾಲೂಕು, ಶಿವಮೊಗ್ಗ ಜಿಲ್ಲೆರವರು ಶಂಕರನಾರಾಯಣ-ಸಿದ್ದಾಪುರ ರಸ್ತೆಯಲ್ಲಿ ತನ್ನ ಕೆಎ 20 ಇಇ 4023 ನೇ ಮೋಟಾರು ಸೈಕಲಿನಲ್ಲಿ ಕುಂದಾಪುರ  ತಾಲೂಕು ಸಿದ್ದಾಪುರ ಗ್ರಾಮದ ಸಿದ್ದಾಪುರ ಕೆಳಪೇಟೆ ಎಂಬಲ್ಲಿ ಹೋಗುತ್ತಿರುವಾಗ ರಮೇಶ ಆಚಾರಿರವರ ಬೈಕಿನ ಹಿಂದುಗಡೆಯಿಂದ ಆರೋಪಿಯು ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಮೇಶ ಆಚಾರಿರವರ ಬೈಕಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ರಮೇಶ ಆಚಾರಿರವರ ಬಲ ಬದಿಯ ಹಣೆಗೆ, ಎಡಕೈ ಹಾಗೂ ಬಲ ಕೈ ರಕ್ತಗಾಯ ಹಾಗೂ ಬಲ ಭುಜಕ್ಕೆ ಗುದ್ದಿದ ನೋವಾಗಿದ್ದು, ಆರೋಪಿಯು ತನ್ನ ಕಾರನ್ನು ನಿಲ್ಲಿಸದೆ ಹಾಗೂ ಪೊಲೀಸರಿಗೆ ಮಾಹಿತಿ ನೀಡದೆ ಪರಾರಿಯಾಗಿರುತ್ತಾನೆ ಎಂಬುದಾಗಿ ರಮೇಶ ಆಚಾರಿ ರವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 17/15 ಕಲಂ: 279, 337 ಐಪಿಸಿ & 134 (ಎ & ಬಿ) ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 15.08.2015 ರಂದು ಸಂಜೆ 17:30 ಗಂಟೆಗೆ ಕಾರ್ಕಳ ತಾಲೂಕು ಸಾಣೂರು ಗ್ರಾಮದ ಮುರತ್ತಂಗಡಿ ಎಂಬಲ್ಲಿ  ರಾಷ್ಷ್ರೀಯ ಹೆದ್ದಾರಿಯಲ್ಲಿ ಪಿರ್ಯಾದಿದಾರರಾದ ನಜಿಮ್ ರಿಜ್ವಿ ಖಾನ್ (32), ತಂದೆ:ಹಯಾತ್ ಖಾನ್ ವಾಸ:ಬಿಸ್ಮಿಲ್ಲಾ ಮಂಜಿಲ್, ಕಡಲಕೆರೆ ಮೂಡಬಿದ್ರೆ ಮಂಗಳೂರುರವರು ತನ್ನ ಸಂಬಂದಿಕರೊಂದಿಗೆ ಕೆಎ 19 ಎಮ್‌ಇ 4072 ನೇ ಸ್ವಿಪ್ಟ್ ಡಿಸೈರ್ ಕಾರಿನಲ್ಲಿ ಮೂಡಬಿದ್ರೆಯಿಂದ ಕಾರ್ಕಳಕ್ಕೆ ಬರುತ್ತಿರುವಾಗ ಕಾರ್ಕಳ ಕಡೆಯಿಂದ ಮೂಡುಬಿದ್ರೆ ಕಡೆಗೆ ಹೋಗುತ್ತಿದ್ದ ಕೆಎ 18 ಬಿ 5881 ನೇ  ಸ್ವಿಪ್ಟ್ ಡಿಸೈರ್ ಕಾರನ್ನು ಅದರ ಚಾಲಕ ಪ್ರಕಾಶ ಎಂಬಾತನು ಅತೀ ವೇಗ ಹಾಗೂ ಆಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಆತನ  ಮುಂಭಾಗದಲ್ಲಿ ಹೋಗುತ್ತಿದ್ದ ಬಸ್ಸನ್ನು ಓವರ್ ಟೇಕ್ ಮಾಡಿ ರಸ್ತೆಯ ತೀರಾ ಬಲ ಬದಿಗೆ ಬಂದು ನಜಿಮ್ ರಿಜ್ವಿ ಖಾನ್‌ರವರಿಗೆ ಢಿಕ್ಕಿ ಹೊಡೆದ ಪರಿಣಾಮ ಎರಡು ಕಾರುಗಳು ಜಖಂಗೊಂಡಿದ್ದು, ನಜಿಮ್ ರಿಜ್ವಿ ಖಾನ್‌ರಿಗೆ ಹಾಗೂ ಅವರ ಸಂಬಂಧಿಕರಾದ ಮಹಮ್ಮದ್ ಸಿಮ್ರಾನ್, ಆಪ್ರಾಜ್ ಎಂಬವರಿಗೆ ತರಚಿದ ಗಾಯವಾಗಿದ್ದು, ಆರೋಪಿಯ ಕಾರಿನಲ್ಲಿ ಪ್ರಯಾಣಿಸುತಿದ್ದ ಶ್ರೀಮತಿ ಪವಿತ್ರ ಎಂಬವರಿಗೆ ಮುಂಭಾಗದ ಎರಡು ಹಲ್ಲುಗಳು ಮುರಿದು ಹೋಗಿದ್ದು, ರಾಘವೇಂದ್ರ ಎಂಬವರಿಗೆ ಹಣೆಯ ಬಲ ಭಾಗ ಹಾಗೂ ಬಲ ಭುಜಕ್ಕೆ ರಕ್ತ ಗಾಯವಾಗಿರುತ್ತದೆ ಎಂಬುದಾಗಿ ನಜಿಮ್ ರಿಜ್ವಿ ಖಾನ್‌ರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 116/15 ಕಲಂ: 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: