Saturday, August 15, 2015

Daily Crimes Reported as On 15/08/2015 at 17:00 Hrs

ಅಪಘಾತ ಪ್ರಕರಣ
  • ಕಾರ್ಕಳ: ದಿನಾಂಕ 15/08/2015 ರಂದು 08:15 ಗಂಟೆಗೆ ಪಿರ್ಯಾದಿದಾರರಾದ ಪ್ರಕಾಶ್ ಡಿಸೋಜ (29), ತಂದೆ: ಕ್ಷೇವಿಯರ್ ಡಿಸೋಜಾ, ವಾಸ: ಮರಿಯಾ ವಿಲ್ಲಾ, ಉಗ್ಗೇಲ್ಬೆಟ್‌ಟು, ಬ್ರಹ್ಮಾವರ, ಉಪ್ಪೂರು ಗ್ರಾಮ,ಉಡುಪಿ ತಾಲೂಕು ಇವರು KA 20 P 0364 ನೇ ಆಲ್ಟೋ ಕಾರನ್ನು ಕಾರ್ಕಳ ತಾಲೂಕು ಕಸಬಾ ಗ್ರಾಮದ ಗೊಮ್ಮಟ ಬೆಟ್ಟದ ಹತ್ತಿರ ದಾನಶಾಲೆ ಎಂಬಲ್ಲಿ ಸಾರ್ವಜನಿಕ ರಸ್ತೆಯಲ್ಲಿ  ಕಾರ್ಕಳ ಕಡೆಯಿಂದ ಬಜಗೋಳಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಗೊಮ್ಮಟಬೆಟ್ಟ ಕಡೆಯಿಂದ ಕಾರ್ಕಳ ಕಡೆಗೆ KA 20 EB 6478 ನೇ ನಂಬ್ರದ ಸ್ಕೂಟರನ್ನು ಅದರ ಸವಾರ ಮಂಜುನಾಥ ನಾಯಕ್ ಎಂಬುವವರು ಕೆ.ನರಸಿಂಹ ನಾಯಕ್ ಎಂಬುವವರನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ಪ್ರಕಾಶ್ ಡಿಸೋಜ ರವರ ಕಾರಿಗೆ ಡಿಕ್ಕಿ ಹೊಡೆದು ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಮೋಟಾರ್ ಸೈಕಲ್‌ ಸವಾರರಾದ ಮಂಜುನಾಥ ನಾಯಕ್ ಹಾಗೂ ಸಹ ಸವಾರ ಕೆ.ನರಸಿಂಹ ನಾಯಕ್ ರವರಿಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 115/2015 ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಜುಗಾರಿ ಪ್ರಕರಣ
  • ಕೋಟ: ದಿನಾಂಕ 14/08/2015 ರಂದು 23:15 ಗಂಟೆಗೆ ಕಬ್ಬಳ್‌ರಾಜ್ ಹೆಚ್.ಡಿ ಪೊಲೀಸ್ ಉಪನಿರೀಕ್ಷಕರು ಕೋಟ ಪೊಲೀಸ್ ಠಾಣೆ ಇವರಿಗೆ ಕುಂದಾಪುರ ತಾಲೂಕು ಮೊಳ್ಳಹಳ್ಳಿ ಗ್ರಾಮದ ಮಾಸ್ತಿಕಟ್ಟೆ ಎಂಬಲ್ಲಿರುವ ನಂದಿಕೇಶ್ವರ ದೇವಸ್ಥಾನದ ಹಿಂಬದಿಯ ಕೆರೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪಿಟ್ ಜುಗಾರಿ ಆಟ ಆಡುತ್ತಿರುವುದಾಗಿ ದೊರೆತ ಖಚಿತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ 00:15 ಗಂಟೆಗೆ ದಾಳಿ ನಡೆಸಿ ಇಸ್ಪಿಟ್ ಜುಗಾರಿ ಆಟ ಆಡುತ್ತಿದ್ದ 1) ಕೀರ್ತನ, 2) ವಸಂತ, 3) ಚಂದ್ರ, 4) ಭಾಸ್ಕರ, 5)ರಾಘವೇಂದ್ರ, 6) ಶ್ರೀನಿವಾಸ, 7) ತಿಮ್ಮಪ್ಪ, 8) ಗೋಪಾಲ, 9) ದಯಾನಂದ, 10) ನರಸಿಂಹ, 11) ಮಾಲಿಂಗ, 12) ಅಶೋಕ, 13) ನಾರಾಯಣ, 14) ಅರವಿಂದ, 15) ಭೋಜು ಮೊಗವೀರ, 16) ಸಂಜೀವ,17) ಸಂತೋಷ ಕುಮಾರ್ ಶೆಟ್ಟಿ, 18) ಸುರೇಂದ್ರ ಮೊಗವೀರ, 19) ನರಸಿಂಹ ಮೊಗವೀರ, 20) ವಿನಯ ನಾಯ್ಕ್ ಎಂಬುವವರನ್ನು ದಸ್ತಗಿರಿ ಮಾಡಿ ಆಪಾದಿತರಿಂದ ಇಸ್ಪಿಟ್ ಜುಗಾರಿ ಆಟಕ್ಕೆ ಬಳಸುತ್ತಿದ್ದ ಇಸ್ಪಿಟ್ ಎಲೆ-52, ಚಾಪೆ-1, ಮೊಬೈಲ್ ಪೋನ್-14, ಮೇಣದ ಬತ್ತಿ-2, ನಗದು ರೂಪಾಯಿ 16,320/- ನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 182/2015 ಕಲಂ:87 ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಕಾರ್ಕಳ: ದಿನಾಂಕ 14/08/2015 ರಂದು ರಾತ್ರಿ 9:30 ಗಂಟೆಯಿಂದ 10:30 ಗಂಟೆಯ ಮಧ್ಯಾವಧಿಯಲ್ಲಿ ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಕುಡಲೊಟ್ಟು ಮನೆ ಎಂಬಲ್ಲಿ ಪಿರ್ಯಾದಿದಾರರಾದ ಸುರೇಶ್ ಕಾಮತ್ (42), ತಂದೆ: ವಾಮನ್ ಕಾಮತ್, ವಾಸ: ಕುಡಲೊಟ್ಟು ಮನೆ, ಗುರುಕೃಪಾ, ನಲ್ಲೂರುಗ್ರಾಮ, ಬಜಗೋಳಿ ಇವರ ಹೆಂಡತಿ ಶ್ರೀಮತಿ ಸ್ವಾತಿ(32) ಎಂಬುವವರು ಯಾವುದೋ ವಿಷ ಪದಾರ್ಥವನ್ನು ಸೇವಿಸಿ  ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣೆ ಯುಡಿಆರ್ ಕ್ರಮಾಂಕ 22/2015 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: