Saturday, August 15, 2015

Daily Crimes Reported as On 15/08/2015 at 07:00 Hrsಕಳ್ಳತನ ಪ್ರಕರಣ

  • ಉಡುಪಿ: ಪಿರ್ಯಾದಿ ಗಿರೀಶ್‌ ಎ (37) ತಂದೆ ಆನಂದ ನಾಯಕ್‌ ವಾಸ: ಅರಣ್ಯ ಕಛೇರಿ ಸಮೀಪ ಶಂಕರ ನಾರಾಯಣರವರು ಆಲರ್ಟ್‌ ಕಂಪನಿಯ ಸೆಕ್ಯೂರಿಟಿ ಕಛೇರಿಯಲ್ಲಿ  ಫೀಲ್ಡ್‌ ಆಫೀಸರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದು,  ಸದ್ರಿ ಕಂಪನಿಯ 76 ಬಡಗುಬೆಟ್ಟು ಗ್ರಾಮದ ಪದ್ಮಾನಾಭ ನಗರ ಎಂಬಲ್ಲಿ ಜಿಟಿಎಲ್‌ ಕಂಪನಿಯ ಟವರ್‌ ಕಾರ್ಯ ನಿರ್ವಹಿಸುತ್ತಿದ್ದು  ಸದ್ರಿ ಟವರ್ ನಲ್ಲಿ ಬಿಎಸ್‌ಎನ್‌ಎಲ್‌  ಆಪರೇಟ್‌ ಆಗುತ್ತಿದ್ದು ಅದಕ್ಕೆ ಸುಮಾರು 5 ವರ್ಷಗಳ ಹಿಂದೆ 515 ಕ್ಯಾಪಸಿಟಿಯ ಬ್ಯಾಟರಿಯನ್ನು  ಆಳವಡಿಸಿದ್ದು ಯಾರೋ ಕಳ್ಳರು ದಿನಾಂಕ: 11/08/2015 ರಂದು ರಾತ್ರಿಯಿಂದ ದಿನಾಂಕ: 12/08/2015ರ ಬೆಳಿಗ್ಗೆ 11:00ಗಂಟೆಯ ಮಧ್ಯಾವಧಿಯಲ್ಲಿ ಶೆಡ್‌ನ ಬಾಗಿಲಿನ ಬೀಗ ಮುರಿದು ಒಳ ಹೊಕ್ಕಿ ಅದರಲ್ಲಿರುವ  18 ಬ್ಯಾಟರಿಯನ್ನು ಕಳವು ಮಾಡಿಕೊಂಡು ಹೋಗಿದ್ದು  ಅದರ ಓಟ್ಟು ಅಂದಾಜು  ಮೌಲ್ಯ 22,500 ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಠಾಣೆ ಅಪರಾಧ ಕ್ರಮಾಂಕ: 181/2015 ಕಲಂ 454, 457, 380 ಐಪಿಸಿ ಯಂತೆ ಪ್ರಕ ರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿ ಬಾಬು ಪೂಜಾರಿ (50) ತಂದೆ:ಬೊಲ ಪೂಜಾರಿ ವಾಸ:ಪರಂಪಳ್ಳಿ ಗ್ರಾಮ ಸಾಲಿಗ್ರಾಮ ಕೋಟ,ಉಡುಪಿರವರು ದಿನಾಂಕ: 14/08/2015 ರಂದು ಕೆಲಸ ಮುಗಿಸಿ ಸಂಜೆ 06:00 ಗಂಟೆ ಸಮಯದಲ್ಲಿ ಕೆಎ 20 ಇಜೆ 1708 ನೇ ದ್ವಿಚಕ್ರ ವಾಹನದಲ್ಲಿ ಮನೆ ಕಡೆಗೆ ಹೋಗುತ್ತಿರುವಾಗ ಉಡುಪಿ ಸಂತೆಕಟ್ಟೆ ಸೇತುವೆಯ ಹತ್ತಿರ ತಲುಪುವಷ್ಟರಲ್ಲಿ ಹಿಂದಿನಿಂದ ಬಂದ ಕೆಎ 22 ಬಿ 717 ನೇ ಟ್ಯಾಂಕರ್ ಚಾಲಕ ಮನ್ಸೂರ್ ದಡ್ಡಿಕಾರ್ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಾಬು ಪೂಜಾರಿ ರವರು ಮತ್ತು ಸಹಸವಾರ ಗೋಪಾಲ ಮರಕಾಲರವರು ರಸ್ತೆಗೆ ಬಿದ್ದಿದ್ದು ಇಬ್ಬರಿಗೂ ಕೈ ಮತ್ತು ಕಾಲುಗಳಿಗೆ ತರಚಿದ ರಕ್ತಗಾಯಗಳಾಗಿರುತ್ತದೆ, ಈ ಬಗ್ಗೆ ಉಡುಪಿ ಸಂಚಾರ ಠಾಣೆ ಅಪರಾಧ ಕ್ರಮಾಂಕ: 85/2015 ಕಲಂ. 279,337, ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: