Friday, August 14, 2015

Daily Crimes Reported as On 14/08/2015 at 17:00 Hrsಅಪಘಾತ ಪ್ರಕರಣ
  • ಬೈಂದೂರು : ದಿನಾಂಕ: 14/08/2015 ರಂದು ಬೆಳಿಗ್ಗೆ 3:30 ಗಂಟೆಯ ಸಮಯಕ್ಕೆ ಫಿರ್ಯಾದಿ ಪ್ರವೀಣ್ ಲೋಬೋ ಇವರ ಮಾವನಾದ ರೇಮಂಡ್ ನಜ್ರತ್ ರವರು ಉಪ್ಪುಂದದಿಂದ ನಿತ್ಯಾಧರ ನಗರಕ್ಕೆ ತನ್ನ ಬಾಬ್ತು ಕೆಎ 20 ಎಕ್ಸ್ 1114ನೇ ದ್ವಿ ಚಕ್ರ ವಾಹನದಲ್ಲಿ ರಾಹೆ 66ರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಬೈಂದೂರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಎದುರುಗಡೆ ರಾಹೆ 66 ರಲ್ಲಿ ಕುಂದಾಪುರ ಕಡೆಯಿಂದ ಭಟ್ಕಳ ಡೆಗೆ ಒಂದು ಲಾರಿಯನ್ನು ಅದರ ಚಾಲಕನು  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರೇಮಂಡ್ ನಜ್ರತ್ ರವರು ಸವಾರಿ ಮಾಡಿಕೊಂಡಿದ್ದ  ದ್ವಿಚಕ್ರ ವಾಹನದ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ರೆಮಾಂಡ್ ನಜ್ರತ್ ರವರು ರಸ್ತೆಗೆ ಬಿದ್ದು ತಲೆಯ ಹಿಂಬದಿಗೆ ತೀವ್ರ ರೀತಿಯ ಪೆಟ್ಟಾಗಿ ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಯಿಂದ ಮಣಿಪಾಲ ಕೆಎಂಸಿಗೆ ಕೊಂಡೊಯ್ಯುವಾಗ ದಾರಿ ಮದ್ಯೆ ಬೆಳಿಗ್ಗೆ 7:30 ಗಂಟೆಗೆ ಮೃತ ಪಟ್ಟಿರುವುದಾಗಿದೆ. ಅಪಘಾತವಾದ ಬಳಿಕ ಲಾರಿಯ ಚಾಲಕನು ಲಾರಿಯನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಈ ಬಗ್ಗೆ ಬೈಂದೂರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 219//2015 ಕಲಂ  279, 304(ಎ) ಐಪಿಸಿ ಮತ್ತು ಕಲಂ 134(ಎ)(ಬಿ)ಮ ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: