Friday, August 14, 2015

Daily Crimes Reported as On 14/08/2015 at 07:00 Hrs

ಅಪಘಾತ ಪ್ರಕರಣ
  • ಬ್ರಹ್ಮಾವರ: ದಿನಾಂಕ 13/08/2015 ರಂದು ಸಂಜೆ 4:15 ಗಂಟೆಗೆ ಉಡುಪಿ ತಾಲೂಕು, ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಆಕಾಶವಾಣಿ ಜಂಕ್ಷನ್ ಬಳಿ ಆರೋಪಿ ಪ್ರೀತಂ ತನ್ನ ಕೆಎ 20 ಸಿ 2665 ನೇ ಟೆಂಪೊವನ್ನು ಬ್ರಹ್ಮಾವರ ರಥಬೀದಿ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 66 ರ ಕುಂದಾಪುರ ಕಡೆಗೆ ವೇಗವಾಗಿ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಾದ ಮನೋಹರ್ ಬಿಜೆ (31) ತಂದೆ: ಜನಾರ್ಧನ ದೇವಾಡಿಗ, ವಾಸ: ಕೆಳಬೆಟ್ಟು, ಕಚ್ಚೂರು ಗ್ರಾಮ, ಬಾರ್ಕೂರು, ಉಡುಪಿ ತಾಲೂಕು ಇವರು ಬಾರ್ಕೂರು ಕಡೆಯಿಂದ ಉಡುಪಿ ಕಡೆಗೆ ಚಲಾಯಿಸುತ್ತಿದ್ದ ಕೆಎ 02 ಎಮ್‌ಎಫ್ 5142 ನೇ ಕಾರಿನ ಎದುರುಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಎದುರು ಭಾಗ , ಬಂಪರ್, ಹೆಡ್‌ ಲೈಟ್ಸ್‌ ಜಖಂ ಗೊಂಡಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 158/2015 ಕಲಂ: 279  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ಈಣಕಿ ಗೌಡ (28), ತಂದೆ: ಕರಿ ಗೌಡ, ವಾಸ: ಜಿಗಲೂರು ಗ್ರಾಮ, ರೋಣ ತಾಲೂಕು, ಗದಗ ಜಿಲ್ಲೆ ಇವರು ದುರ್ಗಾಂಬಾ ಕಂಪೆನಿಯ ಕೆಎ 20 ಬಿ 6981 ನೇ ಬಸ್ಸಿನಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 13/08/2015 ರಂದು ಬೆಳಿಗ್ಗೆ 08:25 ಗಂಟೆಗೆ ಪಡುಕೋಣೆಯಿಂದ ಕುಂದಾಫುರಕ್ಕೆ ಟ್ರೀಪ್‌ ಮಾಡಿಕೊಂಡು ಬರುವಾಗ ಗುಡ್ಡಮ್ಮಾಡಿ ಬಳಿ ಬಸ್ಸು ನಿಲ್ಲಿಸುವಂತೆ ಕೆಲವು ಹುಡುಗರು ಸೂಚನೆ ನೀಡಿದ್ದು, ಬಸ್ಸಿನಲ್ಲಿ ಪ್ರಯಾಣಿಕರು ತುಂಬಾ ಇರುವುದರಿಂದ ಈಣಕಿ ಗೌಡ ರವರು ಬಸ್ಸನ್ನು ನಿಲ್ಲಿಸದೇ ಹೋಗಿದ್ದು, ಸಂಜೆ 6:30 ಗಂಟೆಗೆ ಕುಂದಾಫುರ ತಾಲೂಕು ಪಡುಕೋಣೆ ಎಂಬಲ್ಲಿ ಬಸ್ಸನ್ನು ನಿಲ್ಲಿಸಿ ತನ್ನ ರೂಮಿನ ಕಡೆಗೆ ನಡೆದುಕೊಂಡು ಹೋಗುವಾಗ 4 ಜನ ಯುವಕರು ಈಣಕಿ ಗೌಡ ರವರ ಬಳಿ ಬಂದು ಅವರ ಪೈಕಿ ಈಣಕಿ ಗೌಡರವರಿಗೆ ಪರಿಚಯವಿರುವ ಜೀವನ್‌ ಶೆಟ್ಟಿ ಎಂಬುವವನು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಕೈಯಿಂದ ಕೆನ್ನೆಗೆ ಹೊಡೆದು ಅವಾಚ್ಯ ಶಬ್ಧದಿಂದ ಬೈದು ಮುಂದಕ್ಕೆ ಚಾಲಕನಾಗಿ ಬಂದಲ್ಲಿ ಕೊಲ್ಲದೇ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 107/2015 ಕಲಂ: 341, 323, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಕಳವು ಪ್ರಕರಣ
  • ಬ್ರಹ್ಮಾವರ: ದಿನಾಂಕ 31/07/2015 ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ 01/08/2015 ರ ಬೆಳಿಗ್ಗೆ 05:00 ಗಂಟೆಯ ಮಧ್ಯದ ಅವಧಿಯಲ್ಲಿ ಉಡುಪಿ ತಾಲೂಕು, 34ನೇ ಕುದಿ ಗ್ರಾಮದ, ಚೆಗ್ರಿಬೆಟ್ಟು ಎಂಬಲ್ಲಿರುವ ಪಿರ್ಯಾದಿದಾರರಾದ ಕೆ. ಸತೀಶ್ ನಾಯಕ್, ತಂದೆ: ದಿ. ಕೆ ಗಣಪತಿ ನಾಯಕ್, ವಾಸ: ಚೆಗ್ರಿಬೆಟ್ಟು, 34ನೇ ಕುದಿ ಉಡುಪಿ ತಾಲೂಕು ಇವರ ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಿರುವ ಜರ್ಸಿ ದನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಜರ್ಸಿ ದನದ ಮೌಲ್ಯವು ರೂಪಾಯಿ 24,000/-  ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 157/2015 ಕಲಂ: 457,380  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

No comments: