Thursday, August 13, 2015

Daily Crimes Reported as On 13/08/2015 at 19:30 Hrs


ಅಸ್ವಾಭಾವಿಕ ಮರಣ ಪ್ರಕರಣ 
  • ಬೈಂದೂರು: ಪಿರ್ಯಾದಿದಾರರಾದ ಸೀತು ಪೂಜಾರ್ತಿ (55) ಗಂಡ: ದಿ| ರಾಮ ಪೂಜಾರಿ ವಾಸ: ಕಾಪಿನಮನೆ ಉಪ್ರಳ್ಳಿ, ಉಳ್ಳೂರು 11 ಗ್ರಾಮ ಕುಂದಾಪುರ ತಾಲೂಕು ಇವರ ಮಗ ನಾಗರಾಜ (27) ಎಂಬುವವರು ದಿನಾಂಕ 12/08/2015 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ 13/08/2015 ರಂದು ಬೆಳಿಗ್ಗಿನ ಜಾವ 02:30 ಗಂಟೆಯ ನಡುವಿನ ಅವಧಿಯಲ್ಲಿ 11 ನೇ ಉಳ್ಳೂರು ಗ್ರಾಮದ ಉಪ್ರಳ್ಳಿಯ ಕಾಪಿನ ಮನೆ ಎಂಬಲ್ಲಿರುವ ಸೀತು ಪೂಜಾರ್ತಿ ಯವರ ಮನೆಯ ರೂಮಿನ ಮಾಡಿನ ಪಕಾಸೆಗೆ ನೈಲಾನ್‌ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೋಲಿಸ್ ಠಾಣೆ ಯುಡಿಆರ್ ಕ್ರಮಾಂಕ 30/2015 ಕಲಂ:174  ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.   
ಇತರೇ ಪ್ರಕರಣ 
  • ಉಡುಪಿ: ಪಿರ್ಯಾದಿದಾರರಾದ ಕೆ ಜನಾರ್ಥನ್‌ ನಾಯಕ್‌, ತಂದೆ: ದಿವಂಗತ ಕೆ ದೇವದಾಸ ನಾಯಕ್‌‌ ವಾಸ: ಪೋಸ್ಟ್‌ ಆಪೀಸ್‌ ಬಳಿ ಅಂಬಲಪಾಡಿ ಉಡುಪಿ ಇವರು ದಿನಾಂಕ 13/08/2015 ರಂದು ಕೆಎ 20 ಎನ್‌ 3688 ನೇ ಕಾರಿನಲ್ಲಿ ಅಂಬಲಪಾಡಿಯಿಂದ ಸಿಟಿ ಬಸ್‌‌‌ ಸ್ಟಾಂಡ್‌ಗೆ ಹೋಗುವಾಗ ರೋಯಲ್‌ ಇನ್‌ಪೀಲ್ಡ್‌ ಬೈಕ್‌‌ ಕೆಎ 20 ಎಡಿ 8079 ರ ಚಾಲಕನು ಬನ್ನಂಜೆಯ ನಾರಾಯಣ ಗುರು ಸಭಾ ಭವನದ ಸಮೀಪದ ರಸ್ತೆಯಲ್ಲಿ ಅಡ್ಡವಾಗಿ ಇನ್ನೊಂದು ನಂಬರ್‌  ಪ್ಲೇಟ್‌ ಇಲ್ಲದ ಬೈಕನ್ನು ಅವನ ಬಲಕಾಲಿನಿಂದ ತಳ್ಳಿಕೊಂಡು ಮಧ್ಯ ರಸ್ತೆಯಲ್ಲಿ ಚಲಾಯಿಸುತ್ತಾ ಇದ್ದು ಕೆ. ಜನಾರ್ಥನ್‌ ನಾಯಕ್‌ರವರು ಅವನಲ್ಲಿ ಸ್ವಲ್ಪ ಬದಿಯಲ್ಲಿ ಹೋಗುವಂತೆ ಹೇಳಿ ಮುಂದೆ ಹೋಗುತ್ತಿದ್ದಾಗ ಬನ್ನಂಜೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕಿನ ಬಳಿ ತಲುಪುವಾಗ 10:20 ಗಂಟೆಗೆ ಪುನ: ಕೆ. ಜನಾರ್ಥನ್‌ ನಾಯಕ್‌ರವರ ಕಾರಿಗೆ ಮೋಟಾರ್‌ ಸೈಕಲ್‌ನ್ನು ಅಡ್ಡವಾಗಿ ಕಾರನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 180/2015 ಕಲಂ 341, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: