Thursday, August 13, 2015

Daily Crimes Reported as On 13/08/2015 at 17:00 Hrs

ಅಪಘಾತ ಪ್ರಕರಣ
  • ಉಡುಪಿ: ದಿನಾಂಕ 13/08/2015 ರಂದು ಅಜಿತ್ ಕುಲಾಲ್‌ ಎಂಬುವವರು ಮೂಡುಬೆಳ್ಳೆಯ ತನ್ನ ಮನೆಯಿಂದ ಉಡುಪಿಗೆ ತನ್ನ ಮೋಟಾರು ಸೈಕಲ್ ನಂಬ್ರ ಕೆಎ 01 ಹೆಚ್‌ಜೆ 5473 ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಉಡುಪಿಯ ಗುಂಡಿಬೈಲ್ ಡಾಮಾರು ರಸ್ತೆಯ ಬಳಿ ರಮಾನಂದ ಹೆಗ್ಡೆಯವರ ಮನೆಯ ಬಳಿ ರಸ್ತೆ ವಿಭಾಜಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎದೆಗೆ, ತಲೆಗೆ ಗಂಭೀರ ಗಾಯವಾಗಿ ಅಜಿತ್ ಕುಲಾಲ್‌ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 84/2015 ಕಲಂ. 279,304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ
  • ಕೋಟ: ಪಿರ್ಯಾದಿದಾರರಾದ ಎಸ್.ವಿಕ್ರಮ್‌ರಾಜ್ ಶೆಟ್ಟಿ (35) ತಂದೆ: ಎಮ್.ನಾಗಯ್ಯ ಶೆಟ್ಟಿ ವಾಸ:ವೈಶಾಲಿ,ಹಂಗಳೂರು ಕುಂದಾಪುರ ಇವರು ಕೋಟ ರಾಷ್ಟ್ರೀಯ ಹೆದ್ದಾರಿ 66 ರ ಬಳಿ S.S.S ಟ್ರೇಡರ್ಸ್ ಎಂಬ ಕಟ್ಟಡ ಸಾಮಾಗ್ರಿ ಅಂಗಡಿಯನ್ನು ಹೊಂದಿದ್ದು ಅಂಗಡಿಯ ಬಳಿ ನಿಲ್ಲಿಸಿದ ಕೆಎ 19 ಡಿ 4631 ನೇ ನಂಬ್ರದ ಟಾಟಾ ಕಂಪೆನಿಯ 207EXBSIII ಟೆಂಪೂವನ್ನು ದಿನಾಂಕ 01/08/2015 ಮಧ್ಯಾಹ್ನ 3:30 ಗಂಟೆಯಿಂದ ದಿನಾಂಕ:03/08/2015 ರ ಬೆಳಿಗ್ಗೆ 9:00 ಗಂಟೆ ಮಧ್ಯಾವಧಿಯಲ್ಲಿ  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಟೆಂಪೊದ ಅಂದಾಜು ಮೌಲ್ಯ 2,00,000/-ರೂಪಾಯಿ ಆಗಿರುತ್ತದೆ. ಈ ಬಗ್ಗೆ ಕೋಟ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 180/2015 ಕಲಂ:379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ
  • ಕೋಟ: ಪಿರ್ಯಾದಿದಾರಾದ ಗುರುರಾಜ್ (34) ತಂದೆ: ಮಹಾದೇವ, ವಾಸ: ಜನ್ ಕಾರ್ನರ್ ಕಟ್ಟಡದ ಬಳಿ ಇಂಡಸ್ಟ್ರಿಯಲ್ ಏರಿಯಾ, ಮಣಿಪಾಲ ಇವರು ಕೆಎ 20 ಡಿ 4464 ನೇ ನಂಬ್ರದ ಭಾರತಿ ಎಕ್ಸ್ ಪ್ರೆಸ್ ಬಸ್‌ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 12/08/2015 ರಂದು ಕುಂದಾಪುರದಿಂದ ಉಡುಪಿ ಕಡೆಗೆ ಬಸ್ ಹೊರಡುವಾಗ .ಕುಂದಾಪುರ ಹಳೆ ಬಸ್‌ ನಿಲ್ಧಾಣದ ಬಳಿ ಆಪಾದಿತ ಸಂದೇಶ  ಬಸ್‌ನ್ನು ಹತ್ತಿ ಬಸ್ರೂರು ಮೂರುಕೈ ಗೆ ಟಿಕೇಟ್ ಮಾಡಲು 8 ರೂ ನೀಡಿದ್ದು ಆಗ ಗುರುರಾಜ್ ರವರು 10 ರೂ ಕೊಟ್ಟರೆ ಟಿಕೇಟ್ ಕೊಡುವುದಾಗಿ ಹೇಳಿದಾಗ ಆ ವ್ಯಕ್ತಿ 10 ರೂ ನೀಡಿ ಟಿಕೇಟ್ ಪಡೆದು ಬಸ್ರೂರು ಮೂರುಕೈಯಲ್ಲಿ ಇಳಿದು ಹೋದವನು, ಗುರುರಾಜ್ ರವರ ಬಸ್ ಕೋಟ ಹೈಸ್ಕೂಲ್ ಬಳಿ ತಲುಪುವಾಗ ಆಪಾದಿತ ಸಂದೇಶನು ವಿಕ್ಕಿ ಎಂಬುವನೊಂದಿಗೆ ಬಂದು ಟಿಕೇಟ್ ಹಣದ ವಿಚಾರದಲ್ಲಿ ಬಸ್‌ನ್ನು ತಡೆದು ನಿಲ್ಲಿಸಿ ಬಸ್ಸಿನ ಒಳಗೆ ಬಂದು ಗುರುರಾಜ್ ರವರನ್ನು ಕೈಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದಿದ್ದು, ಆಪಾದಿತರಿಬ್ಬರು ಗುರುರಾಜ್ ರವರಿಗೆ ಹೊಡೆಯುವಾಗ ಅವರ ಕೈಯಲ್ಲಿದ್ದ 5,100/- ರೂ ಬಸ್ಸಿನ ಹೊರಗೆ ಹಾರಿ ಹೋಗಿರುವುದಾಗಿದೆ. ಈ ಬಗ್ಗೆ ಕೋಟ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 181/2015 ಕಲಂ:341,323,504,34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಉಡುಪಿ: ಪಿರ್ಯಾದಿದಾರರಾದ ಬಿ ಜಯಂತ್‌ ಕಾಮತ್‌ (55) ತಂದೆ:ಪುಂಡಲೀಕ ಕಾಮತ್‌, ವಾಸ: ಮಹಾಮಾಯಿ ನಿಲಯ, ಸುಬ್ರಹ್ಮಣ್ಯ ನಗರ, ಪುತ್ತೂರು ಗ್ರಾಮ ಉಡುಪಿ ಇವರ ತಾಯಿ ಶ್ರೀಮತಿ ರುಕುಮ ಬಾಯಿ (80) ಇವರು ದಿನಾಂಕ 12/08/2015 ರಂದು ರಾತ್ರಿ  ವೇಳೆಯಲ್ಲಿ ಮನೆಯ ಮುಂದೆ ಇರುವ ಸುಕುರ್‌ ಎಂಬವರ ಜಾಗದಲ್ಲಿನ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೋಲಿಸ್ ಠಾಣೆ ಯುಡಿಆರ್‌ ಕ್ರಮಾಂಕ 40/2015 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತಾರೆ.No comments: