Wednesday, August 12, 2015

Daily Crimes Reported as On 12/08/2015 at 19:30 Hrs


ಅಪಘಾತ ಪ್ರಕರಣ
  • ಬ್ರಹ್ಮಾವರ:ದಿನಾಂಕ:12/08/2015 ರಂದು ಬೆಳಿಗ್ಗೆ 09:10 ಗಂಟೆಗೆ ಉಡುಪಿ ತಾಲೂಕು, ವಾರಂಬಳ್ಳಿ ಗ್ರಾಮದ, ಬ್ರಹ್ಮಾವರ ಆಕಾಶವಾಣಿ ಬಸ್ಸ್ ನಿಲ್ದಾಣ ಬಳಿ, ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪಿರ್ಯಾದಿದಾರರಾದ ಹೆಚ್‌. ರವೀಂದ್ರ ದಾಸ ಶೆಣೈ, (51), ತಂದೆ: ಹೆಚ್‌. ದೇವದಾಸ್ ಶೆಣೈ, ವಾಸ: “ರಮಾ ದೇವದಾಸ್”, ಆಕಾಶವಾಣಿ ಹತ್ತಿರ, ಕಲ್‌ಬೆಟ್ಟು, ಬ್ರಹ್ಮಾವರ, ಹಂದಾಡಿ ಗ್ರಾಮ, ಉಡುಪಿ ತಾಲೂಕುರವರು ಮತ್ತು ಅವರ ಅಂಗಡಿ ಮಾಲಿಕರಾದ ರಾಮಕೃಷ್ಣ ಕಲ್ಕೂರ್ (65) ಎಂಬವರು ಉಡುಪಿ ಕಡೆ ಹೊಗುವರೇ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಹೋಗುವ ಕೆಎ 19 ಸಿ 4529 ನೇ ಎಸ್.ಆರ್‌.ಕೆ.ಟಿ ಎಕ್ಸ್‌ಪ್ರೆಸ್ ಬಸ್ಸನ್ನು ಹೆಚ್‌. ರವೀಂದ್ರ ದಾಸ ಶೆಣೈರವರು ಹಿಂಬದಿ ಬಾಗಿಲಿನಿಂದ ಮೇಲಕ್ಕೆ ಹತ್ತಿ ಅವರ ಹಿಂದಿನಿಂದ ರಾಮಕೃಷ್ಣ ಕಲ್ಕೂರರವರು ಬಸ್ಸನ್ನು ಹತ್ತಲು, ಒಂದು ಕಾಲನ್ನು ಬಸ್ಸಿನ ಮೆಟ್ಟಿಲಿಗೆ ಇಟ್ಟು ಬಸ್ಸನ್ನು ಹತ್ತುತ್ತಿರುವಾಗ, ಆರೋಪಿ ಬಸ್ಸಿನ ಚಾಲಕ ರಾಜೀವ ಒಮ್ಮೇಲೆ ಬಸ್ಸನ್ನು ವೇಗವಾಗಿ ಅಜಾಗರೂಕತೆಯಿಂದ ಮುಂದಕ್ಕೆ ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಬಸ್‌ ಹತ್ತುತ್ತಿದ್ದ ರಾಮಕೃಷ್ಣ ಕಲ್ಕೂರ್‌ರವರು ಬಸ್ಸಿನಿಂದ ಕೆಳಗೆ ರಸ್ತೆಗೆ ಬಿದ್ದು ಅವರ ಸೊಂಟದ ಬಲಭಾಗಕ್ಕೆ ತೀವ್ರ ತರದ ಜಖಂ ಉಂಟಾಗಿ ರಕ್ತಸ್ರಾವವಾಗಿ ಪ್ರಜ್ಞೆ ಕಳೆದುಕೊಂಡ ಅವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ದಾಲಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಮ್‌.ಸಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಯಲ್ಲಿರುವಾಗ ಮಧ್ಯಾಹ್ನ 12:55 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.ಈ ಬಗ್ಗೆ ಹೆಚ್‌. ರವೀಂದ್ರ ದಾಸ ಶೆಣೈರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 156/15 ಕಲಂ:279,304(ಎ) ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: