Wednesday, August 12, 2015

Daily Crimes Reported as On 12/08/2015 at 17:00 Hrs

ಇತರೇ ಪ್ರಕರಣ
  • ಗಂಗೊಳ್ಳಿ: ದಿನಾಂಕ 12/08/2015  ರಂದು ಗಂಗೊಳ್ಳಿ ಪೊಲೀಸ್ ಠಾಣಾ ಹೆಚ್.ಸಿ ರವೀಶ್  ಹೊಳ್ಳರವರು ಗಂಗೊಳ್ಳಿ ಹೊರ ಠಾಣೆಯಲ್ಲಿ ಕರ್ತವ್ಯದಲ್ಲಿ  ಇರುವಾಗ ಬೆಳಿಗ್ಗೆ  11-00 ಗಂಟೆಗೆ  ಗಂಗೊಳ್ಳಿ  ಬಂದರ್ ನಿಂದ  ಒಬ್ಬರು  ಫೋನ್  ಮಾಡಿ  ಗಂಗೊಳ್ಳಿ ಗ್ರಾಮದ  ಗಂಗೊಳ್ಳಿ  ಬಂದರ್  ಬಸ್  ನಿಲ್ದಾಣದಲ್ಲಿ  ಎರಡು ಬಸ್ಸುಗಳನ್ನು ಸಾರ್ವಜನಿಕ ರಸ್ತೆಯಲ್ಲಿ ನಿಲ್ಲಿಸಿಕೊಂಡು ಚಾಲಕ ಮತ್ತು ನಿರ್ವಾಹಕರು ಗಲಾಟೆ ಮಾಡಿಕೊಳ್ಳುತ್ತಿರುವುದಾಗಿ  ಮಾಹಿತಿ ನೀಡಿದ್ದು  ಕೂಡಲೇ  ನಾನು ಮೇಲ್ಕಾಣಿಸಿದ  ಸ್ಥಳಕ್ಕೆ  ಬೆಳಿಗ್ಗೆ   11-15 ಗಂಟೆಗೆ  ತಲುಪಿದ್ದು  ಆ ಸಮಯದಲ್ಲಿ ಗಂಗೊಳ್ಳಿ ಗ್ರಾಮದ  ಗಂಗೊಳ್ಳಿ  ಬಂದರ್  ಬಸ್  ನಿಲ್ದಾಣಕ್ಕೆ ಹೋದಾಗ  ಬಸ್‌  ನಿಲ್ದಾಣದ  ಬಳಿ ಸಾರ್ವಜನಿಕ ರಸ್ತೆಯಲ್ಲಿ  ಕೆಎ 20 ಸಿ 1711 ಮತ್ತು  ಕೆಎ 20 ಸಿ  3309 ನೇದನ್ನು  ನಿಲ್ಲಿಸಿಕೊಂಡು ಮೂವರು  ವ್ಯಕ್ತಿಗಳು  ಅವರೊಳಗೆ ಅವಾಚ್ಯ ಶಬ್ದಗಳಿಂದ ಬೈದಾಡುತ್ತ ದೂಡಾಡಿಕೊಂಡು ಜಗಳಮಾಡಿಕೊಳ್ಳುತ್ತಿದ್ದರು. ಅವರನ್ನು ವಿಚಾರಣೆಯ ಬಗ್ಗೆ ಕರೆದಾಗ ಮೂವರು  ಪರಸ್ಪರ ಬೈದಾಡುತ್ತಾ  ಕೈಗಳಿಂದ ಹೊಡೆದಾಡಲು ಪ್ರಾರಂಭಿಸಿದರು. ಇವರನ್ನು  ವಶಕ್ಕೆ  ತೆಗೆದುಕೊಂಡು  ಅವರ  ಹೆಸರು  ವಿಳಾಸ  ವಿಚಾರಿಸಲಾಗಿ ಕೆಎ 20 ಸಿ 1711     ಬಸ್ಸಿನ  ಚಾಲಕರಾದ  1.ಗಿರೀಶ  (28)  ತಂದೆ. ಹನುಮಂತ  ಖಾರ್ವಿ,  ವಾಸ. ತ್ರಾಸಿ ಬೀಚ್  ಬಳಿ, ತ್ರಾಸಿ ಗ್ರಾಮ ಕುಂದಾಪುರ  ತಾಲೂಕು  ಮತ್ತು ಸದ್ರಿ ಬಸ್ಸಿನ ನಿರ್ವಾಹಕರಾದ  2. ಜಯರಾಮ (25)  ತಂದೆ. ಬಾಬು ಪೂಜಾರಿ, ವಾಸ.  ಏರುಕೋಣೆ,  ಹೇರೂರು ಗ್ರಾಮ,  ಕುಂದಾಪುರ ತಾಲೂಕು  ಮತ್ತು  ಕೆಎ 20 ಸಿ  3309 ನೇ  ಬಸ್ಸಿನ  ಚಾಲಕ  3.  ಗೋವಿಂದರಾಯ (25)  ತಂದೆ. ಅಣ್ಣಪ್ಪ, ವಾಸ. ಸೋಮನ ಮನೆ, ಮಯ್ಯಾಡಿ  ಅಂಚೆ,  ಬೈಂದೂರು. ಕುಂದಾಪುರ ತಾಲೂಕು.  ಎಂಬುವುದಾಗಿ  ತಿಳಿಸಿರುತ್ತಾರೆ. ಇವರುಗಳು ಸಾರ್ವಜನಿಕ ಸ್ಥಳದಲ್ಲಿ  ಹೊಡೆದಾಡಿ ಸಾರ್ವಜನಿಕ ಶಾಂತಿ  ಕದಡಿ ಶಾಂತಿಭಂಗವನ್ನುಂಟು ಮಾಡಿದ್ದು,  ಎರಡೂ ಬಸ್ಸುಗಳನ್ನು  ಹಾಗೂ  ಮೂವರನ್ನು   ವಶಕ್ಕೆ  ತೆಗೆದುಕೊಂಡು  ಈ ಬಗ್ಗೆ ಗಂಗೊಳ್ಳಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 106/2015  ಕಲಂ:160 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: