Wednesday, August 12, 2015

Daily Crimes Reported as On 12/08/2015 at 07:00 Hrsಅಪಘಾತ ಪ್ರಕರಣ 
  • ಕಾರ್ಕಳ: ದಿನಾಂಕ 11/08/2015 ರಂದು ಬೆಳಿಗ್ಗೆ 8:30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಟಿ ವೆಂಕಟೇಶ ಭಟ್‌ (30) ತಂದೆ: ಪಾಂಡುರಂಗ ಭಟ್‌ ವಾಸ: ಶ್ರೀ ವೆಂಕಟೇಶ ಗುದ್ದೇಲ್‌ಬಾಕ್ಯಾರ್‌, ಪೆರ್ವಾಜೆ ರಸ್ತೆ, ಕಾರ್ಕಳ ಕಸಬ ಗ್ರಾಮ ಇವರು ತನ್ನ ಎಪಿಎಮ್‌ಸಿ ಯಾರ್ಡ್‌  ಬಳಿ ಇರುವ ಶ್ರೀ ವೆಂಕಟೇಶ್ವರ  ಟ್ರೇಡರ್ಸ್ ಅಂಗಡಿಯ ಎದುರು ನಿಂತುಕೊಂಡಿರುವಾಗ ಸಾರ್ವಜನಿಕ ರಸ್ತೆಯಲ್ಲಿ  ಪಡುಬಿದ್ರಿ ಕಡೆಯಿಂದ ಕಾರ್ಕಳ ಕಡೆಗೆ ಕೆಎ 20 ಬಿ 8934 ನೇ ನಂಬ್ರದ ಟೆಂಪೋವನ್ನು ಅದರ ಚಾಲಕನು ಅಂಗಡಿಯ ಎದುರು ಟೆಂಫೊವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಯಾವುದೇ ಮೂನ್ಸೂಚನೆ ನೀಡದೇ ಒಮ್ಮೇಲೆ ಬಲ ಬದಿಗೆ ಅಂಗಡಿ ಕಡೆಗೆ ತಿರುಗಿಸಿದ ಪರಿಣಾಮ ಟೆಂಫೊದ ಹಿಂದುಗಡೆಯಿಂದ ಬರುತ್ತಿದ್ದ ಕೆಎ 20 ಇಜಿ 1177 ನೇ ನಂಬ್ರದ ಮೋಟಾರ್‌ ಸೈಕಲ್‌ ಟೆಂಫೋದ ಬಲ ಬದಿಯ ಚಕ್ರಕ್ಕೆ ತಾಗಿದ  ಪರಿಣಾಮ ಮೋಟಾರ್‌ ಸೈಕಲ್‌ ಸವಾರ ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು ಮೈ ಕೈಗೆ ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 114/2015 ಕಲಂ:279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಹಲ್ಲೆ ಪ್ರಕರಣ
  • ಪಡುಬಿದ್ರಿ: ದಿನಾಂಕ 11/08/2015 ರಂದು ಮದ್ಯಾಹ್ನ 13:00 ಗಂಟೆಗೆ ನಡ್ಸಾಲು ಗ್ರಾಮದ ಪಡುಬಿದ್ರಿ ನವಯುಗ ಕಂಪೆನಿಯ ಕಛೇರಿಯಲ್ಲಿ ಪಿರ್ಯಾದಿದಾರರಾದ ರಾಮಕೃಷ್ಣ (32) ತಂದೆ:ಮಾರ್ಕಂಡಯ್ಯ ವಾಸ: ಮನೆ ನಂಬ್ರ 6-67, ಕುಂಬರ ಪಾಳ್ಯ, ಕೊಡೂರು ಮಂಡಲಂ ಕಷ್ಣ ಜಿಲ್ಲೆ, ಆಂಧ್ರಪ್ರದೇಶ ಇವರು ಇರುವಾಗ  ಆರೋಪಿ ಚನ್ನಯ್ಯ ಹಿರೇಮಠ ಸ್ವಾಮಿಯವರು ಕಛೇರಿಗೆ ಬಂದು ರಾಮಕೃಷ್ಣ ರವರಲ್ಲಿ ಮೋಟಾರು ಸೈಕಲ್ ಗೆ  2 ಲೀಟರ್ ಪೆಟ್ರೋಲ್ ಬೇಕು ಎಂದು ಕೇಳಿದಕ್ಕೆ ನಿನ್ನೆ 2 ಲೀಟರ್ ಪೆಟ್ರೋಲ್ ಗೆ ನಿಮಗೆ ಹಣ ಕೊಟ್ಟಿದ್ದುಈಗ ಮಳೆಗಾಲವಾಗಿರುವುದರಿಂದ ಕಂಪೆನಿ ಯಾವುದೇ ಕೆಲಸ ನಡೆಯುತ್ತಿಲ್ಲ ಆಗಾಗಿ 1 ಲೀಟರ್ ಪೆಟ್ರೋಲ್ ಕೊಡುತ್ತೇನೆ ಎಂದು ತಿಳಿಸಿದಕ್ಕೆ ಆರೋಪಿ ಚನ್ನಯ್ಯ ಹಿರೇಮಠ ಸ್ವಾಮಿಯವರು ಅವಾಚ್ಯ ಶಬ್ದಗಳಿಂದ ಬೈದು ರಾಮಕೃಷ್ಣ ರವರನ್ನು ಎಳೆದಾಡಿ ಕೈಯಿಂದ ಮುಖಕ್ಕೆ ಹೊಡೆದು ಕೆಳಗೆ ಬೀಳಿಸಿ ಹಲ್ಲಿನಿಂದ ಕೆನ್ನೆಗೆ ಕಚ್ಚಿ ಕಾಲಿನಿಂದ ತುಳಿದಿದ್ದು, ಆ ವೇಳೆ ಆಫೀಸಿನಲ್ಲಿ ಇದ್ದ ನಾರಾಯಣರವರು ಬಿಡಿಸಿದ್ದು, ನಂತರ ಆರೋಪಿ ಚನ್ನಯ್ಯ ಹಿರೇಮಠ ಸ್ವಾಮಿಯವರು ಬೆದರಿಕೆ ಒಡ್ಡಿ ಹೋಗಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 105/2015 ಕಲಂ: 323, 324, 504, 506  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
ಇತರೇ ಪ್ರಕರಣ
  • ಪಡುಬಿದ್ರಿ: ದಿನಾಂಕ. 11/08/2015 ರಂದು  ಮದ್ಯಾಹ್ನ 2:30 ಗಂಟೆಯ ಸಮಯಕ್ಕೆ ಪಿರ್ಯಾದಿದಾರರಾದ ರಹೀಂ  ಕುಂಜೂರು (42), ವಾಸ:- ದುರ್ಗಾ ನಗರ, ಕುಂಜೂರು, ಎಲ್ಲೂರು ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರ ಮನೆಯೊಳಗೆ ಆರೋಪಿತನಾದ ರಂಜಿತ್ ಶೆಟ್ಟಿ ಎಂಬುವವನು ಕೈಯಲ್ಲಿ ಮರದ ಬ್ಯಾಟ್‌ನ್ನು ಹಿಡಿದುಕೊಂಡು ಮನೆಯ ಗೇಟ್‌ನ ಕಂಬದ ಲೈಟ್‌ನ್ನು ಪುಡಿಮಾಡಿ, ನಂತರ ಏಕಾಏಕಿ ಮನೆಯೊಳಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ಬೈದು ಕಿಟಕಿ ಬಾಗಿಲಿನ ಗಾಜುಗಳನ್ನು ಪುಡಿ ಮಾಡಿ ಜೀವ ಬೆದರಿಕೆ ಹಾಕಿ, ಬಳಿಕ ಈತನು ಪಕ್ಕದಲ್ಲಿರುವ ಮುಮ್ತಾಜ್‌ರವರ ಮನೆಯೊಳಗೆ ನುಗ್ಗಿ ಟಿವಿ ಶೋಕೇಸ್‌, ಅಕ್ವೇರಿಯಮ್‌, ಸ್ವಿಚ್‌ಬೋರ್ಡ್‌, ಕಪಾಟ್‌ನ ಕನ್ನಡಿ, ಬೊಬೈಲ್‌, ಟಾರ್ಚ್‌ನ್ನು ಹುಡಿ ಮಾಡಿ, ಬಳಿಕ ಪಕ್ಕದಲ್ಲಿರುವ ಕಿಶೋರ್‌ ಎಂಬವರ ಮನೆಗೆ ನುಗ್ಗಿ ಅವರ ಮನೆಯೊಳಗೆ ಇದ್ದ ಪೈಬರ್‌ ಕುರ್ಚಿಯನ್ನು ಪುಡಿ ಮಾಡಿ ನಷ್ಟವನ್ನುಂಟು ಮಾಡಿರುತ್ತಾನೆ. ಈ ಬಗ್ಗೆ ಪಡುಬಿದ್ರಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 106/2015 ಕಲಂ; 447, 448, 454, 427, 504, 506  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.No comments: