Tuesday, August 11, 2015

Daily Crimes Reported as On 11/08/2015 at 07:00 Hrsಅಸ್ವಾಭಾವಿಕ ಮರಣ ಪ್ರಕರಣಗಳು
  • ಕುಂದಾಪುರ: ಪಿರ್ಯಾದಿದಾರರಾದ ನಾರಾಯಣ ಕಾಂಚನ್‌ (52) ತಂದೆ: ದಿ. ಬಸವ ಮೊಗವೀರ ವಾಸ: ಕರಿಯಣ್ಣನ ಮನೆ, ಕೊರವಾಡಿ, ಕುಂಭಾಶಿ ಗ್ರಾಮ, ಕುಂದಾಪುರ ತಾಲೂಕು ಇವರ ತಮ್ಮ ಅಶೋಕ (36) ರವರು ದಿನಾಂಕ 09/08/2015 ರಂದು ಮಧ್ಯಾಹ್ನ 1:00 ರಿಂದ ದಿನಾಂಕ 10/08/2015 ರ ಮಧ್ಯಾಹ್ನ 3:00 ಗಂಟೆ ನಡುವಿನ ಸಮಯದಲ್ಲಿ ಕುಂದಾಪುರ ತಾಲೂಕು ಕುಂಭಾಶಿ ಗ್ರಾಮದ ಕೊರವಾಡಿ ಎಂಬಲ್ಲಿ ಚಂದು ಮೊಗೇರ್ತಿ ರವರ ಜಾಗದಲ್ಲಿರುವ ಬಾವಿಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೋಲಿಸ್ ಠಾಣೆ ಯುಡಿಆರ್ ಕ್ರಮಾಂಕ 35/2015  ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ:ಪಿರ್ಯಾದಿದಾರರಾದ ಯಶವಂತ ಕಾಮತ್ (47) ತಂದೆ: ಮಾಧವ್ ಕಾಮತ್, ವಾಸ: ಅಣ್ನಪ್ಪ ನಿವಾಸ ಕೆದಿಂಜೆ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಇವರ ತಮ್ಮ   ಸುರೇಶ ಕಾಮತ್ (38) ಎಂಬುವವರು ದಿನಾಂಕ 10/08/2015 ರಂದು ಮದ್ಯಾಹ್ನ 1:20 ಗಂಟೆಯಿಂದ ಸಂಜೆ 4:30 ಗಂಟೆಯ ನಡುವಿನ ಮದ್ಯಾವಧಿಯಲ್ಲಿ ಕೆದಿಂಜೆ ಗ್ರಾಮದ ತನ್ನ ವಾಸದ ಮನೆಯ ಹಿಂದುಗಡೆ ಇರುವ ಗೋಡಾನ್ ಕೋಣೆಯಲ್ಲಿ ಪಕ್ಕಸಿಗೆ ನೈಲಾನ್ ಹಗ್ಗದಿಂದ ಸುತ್ತಿ  ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣೆ ಯುಡಿಆರ್ ಕ್ರಮಾಂಕ 21/2015 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತಾರೆ.      
ಇತರೇ ಪ್ರಕರಣಗಳು 
  • ಕೊಲ್ಲೂರು: ದಿನಾಂಕ 10/08/2015 ರಂದು ಕೊಲ್ಲೂರು ಬಸ್ಸು ನಿಲ್ದಾಣದ ಗ್ಯಾರೆಜ್‌ ಹತ್ತಿರ ಆರೋಪಿತ ನಾಗರಾಜ ಶೇರಿಗಾರ್‌ (52) ತಂದೆ: ಗೋವಿಂದ ಶೇರಿಗಾರ್‌ ವಾಸ: ಕಲ್ಯಾಣಿಗುಡ್ಡೆ ಕೊಲ್ಲೂರು ಗ್ರಾಮ ಕುಂದಾಪುರ ತಾಲೂಕು ಇವರು ಯಾವುದೇ ಪರವಾನಿಗೆ ಇಲ್ಲದೇ ಸ್ವಂತ ಲಾಭಕೋಸ್ಕರ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ವರ್ತಮಾನದಂತೆ ಶ್ರೀ ಜಯಂತ ಎಮ್‌ ಪಿಎಸ್‌ಐ ಕೊಲ್ಲೂರು ಠಾಣೆ ಇವರು ಸಿಬ್ಬಂದಿಯವರೊಂದಿಗೆ ಸಮಯ 16:00 ಗಂಟೆಗೆ ದಾಳಿ ನಡೆಸಿ ಆರೋಪಿತನನ್ನು ದಸ್ತಗಿರಿ ಮಾಡಿ ಆತನ ವಶದಲ್ಲಿದ್ದ ಸುಮಾರು 2,480/- ರೂಪಾಯಿ ಮೌಲ್ಯದ 180 ML ನ 40 ಮದ್ಯ ತುಂಬಿದ ಪ್ಯಾಕೆಟ್‌ಗಳನ್ನು ಹಾಗೂ ಆತನ ವಶದಲ್ಲಿದ್ದ 340/- ರೂಪಾಯಿಗಳನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 95/2015 ಕಲಂ: 32, 34 KE ACT ನಂತೆ ಪ್ರಕರಣ ದಾಖಲಾಗಿರುತ್ತದೆ.

No comments: