Monday, August 10, 2015

Daily Crimes Reported as On 10/08/2015 at 19:30 Hrs



ಅಫಘಾತ ಪ್ರಕರಣಗಳು

  • ಕಾಪು: ದಿನಾಂಕ 10/08/2015 ರಂದು ಪಿರ್ಯಾದಿ ಪ್ರಾನ್ಸಿಸ್ ಕುಲಾಸೋ (54) ತಂದೆ: ದಿವಂಗತ ಸಂತನ್ ಕುಲಾಸೋ ವಾಸ: ಜಾಜಿ ಗಾರ್ಡನ್ ಉದ್ಯಾವರ ಪೊಸ್ಟ್ ಉಡುಪಿ ಇವರು ಸೈಕಲ್‌‌ನಲ್ಲಿ ಉದ್ಯಾವರ ಪೆಟ್ರೋಲ್ ಪಂಪ್ ಹತ್ತಿರವಿದ್ದ ಹೋಟೆಲಗೆ ಹೋಗಿ ವಾಪಾಸು ರಾಷ್ಟ್ರೀಯ ಹೆದ್ದಾರಿ 66 ರ ಪೂರ್ವ ಬದಿಯ ಮಣ್ಣು ರಸ್ತೆಯಲ್ಲಿ ಬರುತ್ತಾ ಬೆಳಿಗ್ಗೆ ಸುಮಾರು 11:30 ಗಂಟೆಗೆ ಉದ್ಯಾವರ ಗ್ರಾಮದ ಕ್ಲಾಸಿಕ್ ಆಟೋ ಗ್ಯಾರೇಜ್ ಹತ್ತಿರ ತಲುಪುವಾಗ ಎದುರುನಿಂದ ಅಂದರೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಆರೋಪಿ ಕೆ.ಎ.-20 ಎನ್ 6064 ನೇ ಕಾರು ಚಾಲಕನು ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪ್ರಾನ್ಸಿಸ್ ಕುಲಾಸೋರವರ ಸೈಕಲ್‌ಗೆ ಎದುರಿನಿಂದ ಡಿಕ್ಕಿ ಹೊಡೆದು, ನಂತರ ಎದುರಿಗಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುತ್ತಾನೆ. ಪರಿಣಾಮ ಪ್ರಾನ್ಸಿಸ್ ಕುಲಾಸೋರವರು ರಸ್ತೆಗೆ ಬಿದ್ದು, ರಕ್ತಗಾಯ ಉಂಟಾದವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ ದಾಖಲಾಗಿರುತ್ತದೆ, ಈ ಬಗ್ಗೆ ಕಾಪು ಠಾಣೆ ಅಪರಾಧ ಕ್ರಮಾಂಕ 153/2015 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಮಣಿಪಾಲ: ದಿನಾಂಕ 10/08/2015ರಂದು ಪಿರ್ಯಾದಿ ಎಸ್‌. ನಾರಯಣ ನಾಯಕ್‌, ತಂದೆ: ಹರಿಯಪ್ಪ ನಾಯಕ್‌, ವಾಸ: ಮೂಡುಸಗ್ರಿ, ಕುಂಜಿಬೆಟ್ಟು ಅಂಚೆ, ಶಿವಳ್ಳೀ ಗ್ರಾಮ, ಉಡುಪಿರರು ಆಟೋರಿಕ್ಷಾ ನಂಬ್ರ ಕೆಎ 20 ಬಿ 6974 ನೇದರಲ್ಲಿ ಇಬ್ಬರು ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಡಿ.ಸಿ ಅಫೀಸ್ ರಸ್ತೆಯಿಂದ ಪೊಲೀಸ್ ಠಾಣಾ ಬಳಿ ರಸ್ತೆಗೆ 10:30 ಗಂಟೆಗೆ ತಲುಪುವಾಗ ಹಿಂದಿನಿಂದ ಕೆಎ 19 ಎಮ್‌ಸಿ 4293 ನೇದರ ಕಾರು ಚಾಲಕನು ಹಿಂದಿನಿಂದ ತಾನು ಚಲಾಯಿಸಿಕೊಂಡು ಬಂದ ಕಾರನ್ನು ಅತೀ  ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎಸ್‌. ನಾರಯಣ ನಾಯಕ್‌ರರ ಆಟೋರಿಕ್ಷಾಕ್ಕೆ ಢಿಕ್ಕಿ ಹೊಡೆದು ನಂತರ ಪಕ್ಕದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದನು. ಪರಿಣಾಮ ಆಟೋರಿಕ್ಷಾದಲ್ಲಿದ್ದ ಇಬ್ಬರು ಪ್ರಯಾಣಿಕರಿಗೆ ಗಾಯವಾಗಿದ್ದು, ಪಿರ್ಯಾದಿದಾರರಿಗೆ ಹಣೆಗೆ ತರಚಿದ ಗಾಯವಾಗಿರುತ್ತದೆ ಈ ಬಗ್ಗೆ ಮಣಿಪಾಲ ಠಾಣೆ ಅಪರಾಧ ಕ್ರಮಾಂಕ 161/15 ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾರ್ಕಳ: ದಿನಾಂಕ: 10/08/2015  ರಂದು 2:45 ಗಂಟೆಗೆ  ಕಾರ್ಕಳ ತಾಲೂಕು   ಬೆಳ್ಮಣ್  ಗ್ರಾಮದ ಕಾರ್ಕಳ ಪಡುಬಿದ್ರೆ  ರಾಜ್ಯ ಹೆದ್ದಾರಿಯಲ್ಲಿ  ಲಾರಿ ನಂಬ್ರ  KA20C 1157  ನೇಯದನ್ನು ಅದರ ಚಾಲಕ  ಕಾರ್ಕಳ ಕಡೆಯಿಂದ  ಪಡುಬಿದ್ರೆ ಕಡೆಗೆ ಅತೀವೇಗ ಮತ್ತು   ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ಬೆಳ್ಮಣ್ ಶ್ರೀ ಕೃಷ್ಣ ಪೆಟ್ರೋಲ್  ಬಂಕ್ ನ ಮುಂಭಾಗ ರಸ್ತೆ ದಾಟುತ್ತಿದ್ದ   ಜಗ್ಗು ಎಂಬವರಿಗೆ  ಡಿಕ್ಕಿ ಹೊಡೆದ ಪರಿಣಾಮ   ಅವರಿಗೆ ತಲೆಗೆ ತೀವ್ರ ಸ್ವರೂಪದ  ರಕ್ತಗಾಯವಾಗಿರುತ್ತದೆ. ಗಾಯಾಳು  ಜಗ್ಗುರವರನ್ನು 108 ಅಂಬ್ಯುಲೆನ್ಸ್ ರಲ್ಲಿ  ಬೆಳ್ಮಣ್  ಪ್ರಾಥಮಿಕ  ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು  ಹೋಗುವ ದಾರಿ ಮಧ್ಯೆ  ಮೃತಪಟ್ಟಿದ್ದಾಗಿದೆ, ಎಂಬುದಾಗಿ ಸನಿಲ್ ಆರ್  ಉಚಿಲ್ (34), ತಂದೆ: ರಾಮಚಂದ್ರ ಎಂ ಉಚಿಲ್, ವಾಸ: ಡೋರ್ ನಂ  1818 ಉಚಿಲ್   ಹೌಸ್, ಕಲ್ಪನೆ, ಕುಲಶೇಖರ ಅಂಚೆ ಮತ್ತು ಗ್ರಾಮ, ಮಂಗಳೂರು ಇವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ: 134/2015 ಕಲಂ 279,  304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಬ್ರಹ್ಮಾವರ:  ಪಿರ್ಯಾದಿ ಶರಣ್ಯ ಎನ್ ಭಂಡಾರಿ (19), ತಂದೆ: ಹೆಚ್‌.ಪಿ ನಾಗರಾಜ ಭಂಡಾರಿ, ವಾಸ: ವಿಘ್ನೇಶ್ ನಿಲಯ, ಭನ್ನೇರ್‌ಕಟ್ಟೆ , ಮಂದಾರ್ತಿ ಅಂಚೆ, ಹೆಗ್ಗುಂಜೆ ಗ್ರಾಮ, ಉಡುಪಿ ತಾಲೂಕುರವರು ದಿನಾಂಕ: 10/08/2015 ರಂದು ಬೆಳಿಗ್ಗೆ 08:40 ಗಂಟೆಗೆ ಉಡುಪಿ ತಾಲೂಕು, ಹೇರಾಡಿ ಗ್ರಾಮದ , ಹೇರಾಡಿ ಚಂಡೆ ಎಂಬಲ್ಲಿ ಆರೋಪಿ ಕೆಎ 20 ಬಿ 5747 ನೇ ಬಸ್ಸನ್ನು ಸಾಹೆಬರಕಟ್ಟೆ ಕಡೆಯಿಂದ ಬ್ರಹ್ಮಾವರ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ತಾಯಿ ಚಂಪಾ ಎನ್ ಭಂಡಾರಿಯವರು ಬ್ತು ಕೆಎ 20 ಇಎ 9735 ನೇ ಸ್ಕೂಟಿಯಲ್ಲಿ ಪಿರ್ಯಾದಿದಾರರನ್ನು ಕುಳ್ಳಿರಿಸಿಕೊಂಡು  ಮನೆಯಿಂದ  ಬ್ರಹ್ಮಾವರ ಕಡೆಗೆ ಹೋಗುತ್ತಿರುವಾಗ ಹಿಂದಿನಿಂದ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಅವರ ತಾಯಿ  ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ತಾಯಿಗೆ ತಲೆಗೆ ರಕ್ತ ಗಾಯವಾಗಿದ್ದು ಹಾಗೂ ಪಿರ್ಯಾದಿದಾರರ ಬಲಕೈ ಮಣಿಗಂಟಿಗೆ ತರಚಿದ ಗಾಯ, ಬಲಕಾಲಿಗೆ ಪಾದದ ಬಳಿ ಮಣಿಗಂಟಿನ ಹತ್ತಿರ ರಕ್ತಗಾಯವಾಗಿರುತ್ತದೆ ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ 154/15 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಹುಡುಗಿ ಕಾಣೆ ಪ್ರಕರಣ

  • ಬ್ರಹ್ಮಾವರ: ದಿನಾಂಕ: 08/08/2015 ರಂದು ಬೆಳಿಗ್ಗೆ 10:00 ಗಂಟೆಗೆ ಪಿರ್ಯಾದಿ ಸೂರ್ಯನಾರಯಣ ಆಚಾರ್ಯ (42) , ತಂದೆ: ಕಾಳಿಂಗ ಆಚಾರ್ಯ, ವಾಸ: ರಂಗನಕೆರೆ, ಬಾರ್ಕೂರು ಹಾರಾಡಿ ಗ್ರಾಮ, ಉಡುಪಿ ತಾಲೂಕು ಇವರ ಮಗಳಾದ ರಾಧಿಕ (18 ವರ್ಷ) ಎಂಬುವರು ಮನೆಯಿಂದ ಕಾಲೇಜಿಗೆ ಹೋಗುತ್ತೇನೆಂದು ಹೇಳಿ ಹೋದವರು ಸಂಜೆ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ, ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ 154/15 ಕಲಂ:ಹುಡುಗಿ ಕಾಣೆ  ಪ್ರಕರಣದಂತೆ ದಾಖಲಾಗಿರುತ್ತದೆ.

No comments: