Monday, August 10, 2015

Daily Crimes Reported as On 10/08/2015 at 17:00 Hrsಕಳವು ಪ್ರಕರಣಗಳು

  • ಬೈಂದೂರು: ಪಿರ್ಯಾದಿದಾರರಾದ ಕೆ.ಉಮೇಶ್‌ ಶ್ಯಾನುಬೋಗ್‌ (57) ತಂದೆ: ದಿ.ಕೆ ನಾರಾಯಣ ಶ್ಯಾನುಬೋಗ್‌ ವಾಸ: ಶ್ರೀ ಸಿದ್ದಿ ಕಿರಿಮಂಜೇಶ್ವರ ಅಂಚೆ ಮತ್ತು ಗ್ರಾಮ ಕುಂದಾಪುರ ತಾಲೂಕು ಇವರು ಕಿರಿಮಂಜೇಶ್ವರ ಗ್ರಾಮದ ಕಿರಿಮಂಜೇಶ್ವರ ಶ್ರೀ ಅಗಸ್ತೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರರಾಗಿರುತ್ತಾರೆ ಹಾಗೂ ರಾಮಚಂದ್ರ ಕಾರಂತ್‌ರವರು ದೇವಸ್ಥಾನದ ಅರ್ಚಕರಾಗಿರುತ್ತಾರೆ. ಎಂದಿನಂತೆ ದಿನಾಂಕ 09/08/2015 ರಂದು ಸಂಜೆ 07:30 ಗಂಟೆಗೆ ದೇವಸ್ಥಾನದಲ್ಲಿ ಪೂಜೆ ಮುಗಿದ ಬಳಿಕ ದೇವಸ್ಥಾನದ ಕಛೇರಿಯ ಸಹಾಯಕಿ ವಿಶಾಲಾಕ್ಷಿ ಜೋಯಿಸರು ದೇವಸ್ಥಾನದ ಬಾಗಿಲಿಗೆ ಬೀಗ ಹಾಕಿ ಮನೆಗೆ ಹೋಗಿರುತ್ತಾರೆ.  ದಿನಾಂಕ 10/08/2015 ರಂದು ಬೆಳಿಗ್ಗೆ 07:00 ಗಂಟೆಗೆ ವಿಶಾಲಾಕ್ಷಿ ಜೋಯಿಸರು ದೇವಸ್ಥಾನಕ್ಕೆ ಬಂದು ದೇವಸ್ಥಾನದ ಬಾಗಿಲಿನ ಬೀಗವನ್ನು ತೆಗೆದು ಬಾಗಿಲನ್ನು ದೂಡುವಾಗ ಅದರ ಬಾಗಿಲು ತೆರೆಯದೇ ಇದ್ದು ಬಳಿಕ ದೇವಸ್ಥಾನದ ಉತ್ತರ ದಿಕ್ಕಿಗೆ ಇರುವ ಮತ್ತೊಂದು ಬಾಗಿಲ ಬಳಿ ಹೋಗಿ ನೋಡಿದಾಗ ಆ ಬಾಗಿಲನ್ನು ತೆರೆದಿರುವುದು ಕಂಡು ಬಂದಿದ್ದು ವಿಶಾಲಾಕ್ಷಿಯವರು ವಿಷಯವನ್ನು ಕೆ.ಉಮೇಶ್‌ ಶ್ಯಾನುಬೋಗ್‌ ರವರಿಗೆ ತಿಳಿಸಿದ್ದು ಅವರು ಬಂದು ನೋಡಿದಾಗ ದೇವಸ್ಥಾನದ ಉತ್ತರದ ಬಾಗಿಲು ತೆರೆದಿದ್ದು ಒಳಗೆ ಹೋಗಿ ನೋಡಿದಾಗ ದೇವಸ್ಥಾನದ ಮುಖ್ಯ ದ್ವಾರಕ್ಕೆ ಒಳಗಿನಿಂದ ಲಾಕ್‌ ಮಾಡಿದ್ದು ದೇವಸ್ಥಾನದ ಉತ್ತರ ದಿಕ್ಕಿನ ಮಾಡಿನ ರಾಡಿಗೆ ಹಗ್ಗವನ್ನು ಕಟ್ಟಿ ಕೆಳಗೆ ಇಳಿದು ಗರ್ಭಗುಡಿಯ ಬಾಗಿಲಿನ ಬೀಗವನ್ನು ಮೀಟಿ ತೆಗೆದು ಒಳಹೊಕ್ಕಿ ಗರ್ಭಗುಡಿಯ ಒಳಗೆ ಇದ್ದ ದೇವರ ಬೆಳ್ಳಿಯ ಸಣ್ಣ ಮುಖವಾಡ, ಬೆಳ್ಳಿಯ ತ್ರಿನೇತೃ ಕಣ್ಣನ್ನು ಕಳವು ಮಾಡಿ ಬಳಿಕ ದೇವಸ್ಥಾನದ ತೀರ್ಥಮಂಟಪದ ಹತ್ತಿರ ಇರುವ ಕಾಣಿಕೆ ಡಬ್ಬಿಯ ಬಾಗಿಲನ್ನು ಒಡೆದು ಅದರೊಳಗಿದ್ದ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಸ್ವತ್ತಿನ ಮೌಲ್ಯ ಸುಮಾರು 20,000/- ರೂಪಾಯಿ ಆಗಬಹುದು. ಈ ಬಗ್ಗೆ ಬೈಂದೂರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 216/2015 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ : ಪಿರ್ಯಾದಿದಾರರಾದ ಆದಿತ್ಯ ಕಿಣಿ, ತಂದೆ: ನಂದ ಕಿಶೋರ್‌ ಕಿಣಿ, ವಾಸ: ನಾರಾಯಣಿ, ಹಯಗ್ರೀವನಗರ, 1ನೇ ಮುಖ್ಯ ರಸ್ತೆ, 2ನೇ ಅಡ್ಡರಸ್ತೆ, ಇಂದ್ರಾಳಿ, ಕುಂಜಿಬೆಟ್ಟು, ಶಿವಳ್ಳಿ ಗ್ರಾಮ, ಉಡುಪಿ ದಿನಾಂಕ 09/08/2015 ರಂದು ಮಧ್ಯಾಹ್ನ 2:00 ಗಂಟೆಗೆ ತನ್ನ ಹೊಂಡಾ ಆಕ್ಟಿವಾ ಸ್ಕೂಟರ್ ನಂಬ್ರ KA 20 W 6424 ನೇದನ್ನು ಇಂದ್ರಾಳಿ ಬಸ್ಸು ನಿಲ್ದಾಣದ ಬಳಿಯ ಹೊಟೇಲ್‌ನ ಎದುರು ನಿಲ್ಲಿಸಿ ಹೊಟೇಲ್‌ಗೆ ಊಟಕ್ಕೆ ಹೋಗಿದ್ದು, ಊಟ ಮುಗಿಸಿ ವಾಪಸ್ಸು ಬಂದು ನೋಡಿದಾಗ ಸ್ಕೂಟರ್ ನಿಲ್ಲಿಸಿದ್ದ ಜಾಗದಲ್ಲಿ ಇಲ್ಲದೇ ಇದ್ದು, ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಆದಿತ್ಯ ಕಿಣಿ ರವರ ಹೊಂಡಾ ಆಕ್ಟಿವಾ ಸ್ಕೂಟರ್ ನಂಬ್ರ KA 20 W 6424 ನೇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಸ್ಕೂಟರ್‌ನ ಅಂದಾಜು ಮೌಲ್ಯ ಸುಮಾರು ರೂಪಾಯಿ 15,000/- ಆಗಿರುತ್ತದೆ.ಈ ಬಗ್ಗೆ ಮಣಿಪಾಲ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 160/2015 ಕಲಂ: 379 ಐಪಿಸಿಯಂತೆ ಪ್ರಕರಣದ ದಾಖಲಾಗಿರುತ್ತದೆ.

     


No comments: