Monday, August 10, 2015

Daily Crimes Reported as On 10/08/2015 at 07:00 Hrs


ಅಸ್ವಾಭಾವಿಕ ಮರಣ ಪ್ರಕರಣಗಳು

  • ಬ್ರಹ್ಮಾವರ: ಪಿರ್ಯಾದಿದಾರರಾದ ವಿಠಲ ಆಚಾರ್ಯ ತಂದೆ: ರುಕ್ಮಯ್ಯ ಆಚಾರ್ಯ, ವಾಸ: ನೀಲಾವರ ಕ್ರಾಸ್‌ ನೀಲಾವರ ಗ್ರಾಮ, ಉಡುಪಿ ತಾಲೂಕು ಇವರ  ಮಗ ಪ್ರಜ್ವಲ್‌ (15) ಎಂಬುವವರು ದಿನಾಂಕ 09/08/2015 ರಂದು 08:00 ಗಂಟೆಯಿಂದ 09:00 ಗಂಟೆಯ ಮಧ್ಯದ ಅವಧಿಯಲ್ಲಿ ಉಡುಪಿ ತಾಲೂಕು ನೀಲಾವರ ಗ್ರಾಮದ ಕುಂಜಾಲು ಜಡ್ಡು ಸರಸು ಬಾಯಿಯವರ ಹಾಡಿ ಜಾಗದಲ್ಲಿರುವ ನೇರಳೆ ಗಿಡಕ್ಕೆ ಶಾಲೆ ಬ್ಯಾಗಿನ ನೈಲಾನ್‌ ಬೆಲ್ಟ್‌ ಕಟ್ಟಿ ಕುತ್ತಿಗೆಗೆ ಉರುಳು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆ ಯುಡಿಆರ್ ಕ್ರಮಾಂಕ ನಂಬ್ರ 46/2015 ಕಲಂ:174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಬೈಂದೂರು: ಪಿರ್ಯಾದಿದಾರರಾದ ಮಂಜುನಾಥ (38) ತಂದೆ: ಬಾಲಕೃಷ್ಣ ವಾಸ: ಶಿವಮ್ಮ ನಿಲಯ ಹಾಡಿ ಮನೆ ಕಾಲ್ತೋಡು ಗ್ರಾಮ ಕುಂದಾಪುರ ತಾಲೂಕು ಇವರ ತಂದೆ ಬಾಲಕೃಷ್ಣ (68) ರವರು ಮನೆಯ ಪಕ್ಕದ ರಸ್ತೆಯ ಬೀದಿಯಲ್ಲಿ ಇರುವ ಒಂದು ಗೇರು ಮರದ ಕೊಂಬೆಗೆ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಬೈಂದೂರು ಪೋಲಿಸ್ ಠಾಣೆ ಯುಡಿಆರ್ ಕ್ರಮಾಂಕ 29/2015  ಕಲಂ: 174 ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಉಡುಪಿ: ಪಿರ್ಯಾದಿದಾರರಾದ ಬಾಲಕೃಷ್ಣ ಶೆಟ್ಟಿ (45) ತಂದೆ: ಸುಂದರ ಶೆಟ್ಟಿ, ವಾಸ: ಶ್ರೀದೇವಿ ಎಂಟ್ಟ್ರಪೈಸೆಸ್‌‌ ನಿಟ್ಟೂರು ಪುತ್ತೂರು ಗ್ರಾಮ ಇವರು ದಿನಾಂಕ 09/08/2015 ರಂದು ರಾತ್ರಿ 09:15 ಗಂಟೆಗೆ ನಿಟ್ಟೂರು ಸ್ಟೇಟ್‌ ಹೂಂ ಬಳಿ ರಸ್ತೆ ಬದಿ ಅಪರಿಚಿತ ಮೃತ ದೇಹ ಇರುವ ಬಗ್ಗೆ ಮಾಹಿತಿ ದೊರೆತ ಪ್ರಕಾರ ಅವರು ಸ್ಧಳಕ್ಕೆ ಹೋಗಿ ನೋಡಿದಲ್ಲಿ ಸುಮಾರು 40-45 ವರ್ಷ ಪ್ರಾಯದ ಅಪರಿಚಿತ ಗಂಡಸು ರಸ್ತೆ ಬದಿಯಲ್ಲಿ ಬಿದ್ದಿದ್ದು, ಸ್ಧಳೀಯರಲ್ಲಿ ವಿಚಾರ ತಿಳಿಯಾಲಾಗಿ ಅಪರಿಚಿತನು ತಿಮ್ಮೇಶ ಎಂಬುವವನಾಗಿದ್ದು ಅವನಿಗೆ ಎರಡು ದಿನಗಳಿಂದ ಜ್ವರವಿದ್ದು ಕೆಲಸಕ್ಕೆ ಹೋಗದೇ ಇದ್ದವನು ಈ ದಿನ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವಾಗ ಯಾವುದೋ ಖಾಯಿಲೆ ಉಲ್ಬಣಿಸಿ ರಸ್ತೆ ಬದಿ ಬಿದ್ದು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಉಡುಪಿ ಪೋಲಿಸ್ ಠಾಣೆ ಯುಡಿಆರ್ ಕ್ರಮಾಂಕ 39/2015 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

No comments: