Sunday, August 09, 2015

Daily Crimes Reported as On 09/08/2015 at 19:30 Hrs


ಅಪಘಾತ ಪ್ರಕರಣಗಳು
  • ಶಂಕರನಾರಾಯಣ:ದಿನಾಂಕ:08/08/2015 ರಂದು ರಾತ್ರಿ ಸುಮಾರು 21:00 ಗಂಟೆಗೆ ಕುಂದಾಪುರ ತಾಲೂಕು ಅಂಪಾರು ಗ್ರಾಮದ ನೆಲ್ಲಿಕಟ್ಟೆಯಿಂದ ಪಿರ್ಯಾದಿದಾರರಾದ ಬಾಬಣ್ಣ ಕುಲಾಲ (43) ತಂದೆ:ಕರಿಯ ಕುಲಾಲ, ಚಾರ್ಮಕ್ಕಿ, ಶಂಕರನಾರಯಣ ಗ್ರಾಮ, ಕುಂದಾಪುರ  ತಾಲೂಕುರ ಬಾವನೆಂಟ ಉದಯ ಎಂಬವರು ತನ್ನ ಮೋಟಾರ್‌ ಸೈಕಲ್ ನಂಬ್ರ KA 18 EC 1544 ನೇದರಲ್ಲಿ ತಿಮ್ಮಪ್ಪನನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಶಂಕರನಾರಾಯಣ ಕಡೆಗೆ ಅಂಪಾರು ಶಂಕರನಾರಾಯಣ ರಸ್ತೆಯಲ್ಲಿ ಬರುತ್ತಿರುವಾಗ ಕಲ್ಲೋಳೆ ಫ್ಯಾಕ್ಟರಿಯ ಬಳಿ ಅಡ್ಡ ಬಂದ ದನವನ್ನು ತಪ್ಪಿಸಲು ಹೋಗಿ  ಬೈಕ್ ಸವಾರ ತನ್ನ ನಿಯಂತ್ರಣ ತಪ್ಪಿ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಇದರ ಪರಿಣಾಮ ಸಹಸವಾರ ತಿಮ್ಮಪ್ಪ ನ ತಲೆಗೆ ಒಳಜಖಂ ಆಗಿದ್ದು ಚಿಕಿತ್ಸೆಯ ಬಗ್ಗೆ ಉಡುಪಿ  ಆದರ್ಶ ಆಸ್ಪತ್ರೆಗೆ ದಾಖಲಾಗಿದ್ದಾಗಿದೆ. ಈ ಅಪಘಾತಕ್ಕೆ ಮೊಟಾರ್ ಸೈಕಲ್ ಸವಾರ ಉದಯರವರ ಅತೀವೇಗ ಹಾಗೂ ನಿಷ್ಕಾಳಿಜಿತನದ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಬಾಬಣ್ಣ ಕುಲಾಲರವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣಾ ಅಪರಾಧ ಕ್ರಮಾಂಕ 170/15 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.   
  • ಕಾರ್ಕಳ ಗ್ರಾಮಾಂತರ:ದಿನಾಂಕ:09/08/2015 ರಂದು 11:00 ಗಂಟೆಗೆ ಕಾರ್ಕಳ ತಾಲೂಕು ಕೆದಿಂಜೆ ಗ್ರಾಮದ ಬಿ.ಎಸ್.ಕೆ ಫ್ಯಾಕ್ಟರಿ ಬಳಿ ಪಿರ್ಯಾದಿದಾರರಾದ ಧನಂಜಯ ಕುಲಾಲ್ (28), ತಂದೆ:ಕುಟ್ಟಿ ಮೂಲ್ಯ ವಾಸ:ವನದುರ್ಗಾ  ನಿಲಯ, ವಂಜಾರಕಟ್ಟೆ  ಅಂಚೆ,  ಬೋಳ ಗ್ರಾಮ,  ಕಾರ್ಕಳ ತಾಲೂಕುರವರ ಜಿನಿಸು ಅಂಗಡಿ ಬಳಿ ನಿಲ್ಲಿಸಿದ ಧನಂಜಯ ಕುಲಾಲ್‌ರವರ ಮೋಟಾರ್ ಸೈಕಲ್ ನಂಬ್ರ KA 20 EB 8104  ನೇದಕ್ಕೆ ಆರೋಪಿ ಆಶ್ಪಕ್ ತನ್ನ ಸ್ವಿಪ್ಟ್ ಕಾರು ನಂಬ್ರ KA 20 Z 6400 ನೇಯದನ್ನು ಕಾರ್ಕಳ ಕಡೆಯಿಂದ ಪಡುಬಿದ್ರೆ ಕಡೆಗೆ ರಾಜ್ಯ ಹೆದ್ದಾರಿಯಲ್ಲಿ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ನಿಲ್ಲಿಸಿದ ಮೋಟಾರ್ ಸೈಕಲಿಗೆ  ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಜಖಂ ಆಗಿರುತ್ತದೆ. ಈ ಬಗ್ಗೆ ಧನಂಜಯ ಕುಲಾಲ್‌ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 133/2015 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ಕುಂದಾಪುರ ಸಂಚಾರ:ದಿನಾಂಕ:04/08/2015 ರಂದು ಸಂಜೆ ಸುಮಾರು 5:00 ಗಂಟೆಗೆ  ಕುಂದಾಪುರ ತಾಲೂಕು ಕಸಬಾ ಗ್ರಾಮದ ಚರ್ಚ್‌ರಸ್ತೆಯ ಸುಭಾಸ್ ಶೆಟ್ಟಿಯವರ ಇಂಪಿರಿಯಲ್‌  ರೆಸಿಡೆನ್ಸಿ ಅಪಾರ್ಟ್‌ಮೆಂಟ್ ಬಳಿ ರಸ್ತೆಯಲ್ಲಿ ಆಪಾದಿತ ಸುಬ್ರಾಯ ಆಚಾರಿ ಅಲಿಯಾಸ್‌ ಸುಬ್ರಾಯ ಮೇಸ್ತ ಎಂಬವರು KA 20 W 3479ನೇ ಸ್ಕೂಟರನ್ನು ಕೋಡಿ  ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಸ್ತೆಯ ಎಡಬದಿಗೆ ಬಂದು ಪಿರ್ಯಾದಿದಾರರಾದ ವಿನಯ  ಆಚಾರಿ (33) ತಂದೆ:ರತ್ನಾಕರ  ಆಚಾರಿ, ವಾಸ:ಚರ್ಚ್ ರಸ್ತೆ, ಕನ್ವೆಂಟ್ ಕಸಬಾ ಗ್ರಾಮ, ಕುಂದಾಪುರ ತಾಲೂಕುರವರ ಪಕ್ಕದಲ್ಲಿ ನಿಂತುಕೊಂಡಿದ್ದ ವಿನಯ  ಆಚಾರಿರವರ ತಾಯಿ ಸುಶೀಲ ಆಚಾರಿಯವರಿಗೆ  ಡಿಕ್ಕಿ ಹೊಡೆದು, ಸ್ಕೂಟರ್‌  ಸಮೇತ ರಸ್ತೆಯಲ್ಲಿ  ಬಿದ್ದ ಪರಿಣಾಮ ಸುಬ್ರಾಯ ಆಚಾರಿರವರ ತಲೆಗೆ ಹಾಗೂ ಮೈ ಕೈಗೆ ಗಾಯ ನೋವು ಉಂಟಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ. ಸುಶೀಲ ಆಚಾರಿಯವರ ತಲೆಗೆ ಹಾಗೂ ಮೈ ಕೈಗೆ ಸ್ವಲ್ಪ ಒಳ ನೋವು ಆಗಿದ್ದು ಅವರು ಯಾವುದೇ  ಚಿಕಿತ್ಸೆ  ಪಡೆದಿರುವುದಿಲ್ಲ.ಈ ಬಗ್ಗೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 96/2015 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣಗಳು
  • ಹೆಬ್ರಿ:ಪಿರ್ಯಾದಿದಾರರಾದ ಅಕ್ಷಯ್ (22) ತಂದೆ:ನಾರಾಯಣ ಕುಲಾಲ ವಾಸ:ರಾಜರಾಜೇಶ್ವರಿ ನಿಲಯ, ಹುಣ್ಸೆಗುಡ್ಡೆ, ಕುಚ್ಚೂರು ಗ್ರಾಮ, ಕಾರ್ಕಳ ತಾಲೂಕು ಉಡುಪಿ ಜಿಲ್ಲೆರವರ ಮನೆಯ ಎದುರು ಒಂದು ಒಣಗಿದ ಬೋಗಿ ಮರ ಇದ್ದು. ಅದು ಮಳೆಗಾಲದ ಸಮಯ ಮನೆಗೆ ಬೀಳುವ ಸಾದ್ಯತೆ ಇರುವುದರಿಂದ ಅದನ್ನು ಈ ದಿನ ದಿನಾಂಕ:09/08/15 ರಂದು ಕಡಿಯಲು ನಿರ್ದರಿಸಿದ್ದು. ಅದರಂತೆ ವಸಂತ ಗೌಡರವರು ಮರವನ್ನು ಬುಡದಿಂದ ಕಡಿಯುತ್ತಿದ್ದು, ಅಕ್ಷಯ್ ಹಾಗೂ ಅವರ ತಂದೆ ನಾರಾಯಣ ಪೂಜಾರಿ (56) ರವರು ಹಾಗೂ ಇತರರು ಮರವು ಮನೆಗೆ ಬೀಳದಂತೆ ಹಗ್ಗವನ್ನು ಎಳೆದುಕೊಂಡು ಹಿಡಿದಿದ್ದು, ಬೆಳಿಗ್ಗೆ ಸುಮಾರು 11:00 ಗಂಟೆಗೆ ಮರವು ಬೀಳುತ್ತಿದ್ದಂತೆ ಎಲ್ಲರೂ ಹಗ್ಗವನ್ನು ಬಿಟ್ಟಿದ್ದು. ಆಗ ಹಗ್ಗವು ಅಕ್ಷಯ್‌ರವರ ತಂದೆಯವರ ಕಾಲಿಗೆ ಅಕಸ್ಮಿಕವಾಗಿ ಸುತ್ತಿಕೊಂಡು ಎಳೆದುಕೊಂಡು ಹೋದ ಪರಿಣಾಮ ಅವರು ಆಯತಪ್ಪಿ ಮರದ ಬೇರಿನ ಮೇಲೆ ಬಿದ್ದು, ಅವರಿಗೆ ಎಡದವಡೆ ಬಳಿ ಜಜ್ಜಿ ರಕ್ತಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಮಣಿಪಾಲ ಅಸ್ಪತ್ರೆಗೆ ಮದ್ಯಾಹ್ನ 12:15 ಗಂಟೆಗೆ ಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿರುವುದಾಗಿದೆ.ಈ ಬಗ್ಗೆ ಅಕ್ಷಯ್‌ರವರು ನೀಡಿದ ದೂರಿನಂತೆ ಹೆಬ್ರಿ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 30/15, ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕಾರ್ಕಳ ಗ್ರಾಮಾಂತರ:ದಿನಾಂಕ:06/08/2015 ರಂದು ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಸುಬ್ಯಾಯ ಬೆಟ್ಟು ಇಂದಾರು ಎಂಬಲ್ಲಿರುವ ಪಿರ್ಯಾದಿದಾರರಾದ ತೇಜಸ್ ಶೆಟ್ಟಿ (20), ತಂದೆ:ದಿವಂಗತ ದಯಾನಂದ ಶೆಟ್ಟಿ, ವಾಸ: ಸುಬ್ಯಾಯ ಬೆಟ್ಟು  ಇಂದಾರು ಬೆಳ್ಮಣ್ ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು ಉಡುಪಿ ಜಿಲ್ಲೆರವರು ಕುಟುಂಬದವರೊಂದಿಗೆ ವಾಸ್ತವ್ಯವಿರುವ ಮನೆಯಲ್ಲಿ ರಾತ್ರಿ 10:00 ಗಂಟೆಗೆ ತೇಜಸ್ ಶೆಟ್ಟಿರವರ ಅಣ್ಣ ಸುಮಾರು 21 ವರ್ಷದ ಮನಮೋಹನ್ ಇವರು ಮಲಗುವ ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಉಸಿರಾಡಲು ಆಗದೇ ನರಳುತ್ತಿದ್ದವನನ್ನು ಚಿಕಿತ್ಸೆ ಬಗ್ಗೆ ಮನೆ ಸಮೀಪದ ವೈದ್ಯರಲ್ಲಿ ತೋರಿಸಿದ್ದು ಅವರ ಸಲಹೆಯಂತೆ  ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲದ ಕೆ ಎಂ ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಒಳ ರೋಗಿಯಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದವನನ್ನು ಈ ದಿನ ದಿನಾಂಕ:09/08/2015 ರಂದು ಹೆಚ್ಚಿನ ಚಿಕಿತ್ಸೆಗೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ಈ ದಿನ ಮದ್ಯಾಹ್ನ 1:30 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿದ್ದಾಗಿದೆ.ಈ ಬಗ್ಗೆ ತೇಜಸ್ ಶೆಟ್ಟಿರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 20/15 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: