Thursday, August 27, 2015

Daily Crime Reports As on 27/08/2015 at 17:00 Hrs

ಅಪಘಾತ ಪ್ರಕರಣ
  • ಕುಂದಾಪುರ: ದಿನಾಂಕ 27/08/2015 ರಂದು ಬೆಳಿಗ್ಗೆ 10:45 ಗಂಟೆಗೆ ಕುಂದಾಪುರ ತಾಲೂಕು ಕುಂಭಾಶಿ ಸ್ವಾಗತ  ಗೋಪುರದ  ಎದುರುಗಡೆ ಪಶ್ಚಿಮ ಬದಿಯ  ರಾಷ್ಟ್ರೀಯ ಹೆದ್ದಾರಿ 66  ರಸ್ತೆಯಲ್ಲಿ ಆಪಾದಿತ ವೀರಭದ್ರ  ವಿ ಮಾಟೊಳ್ಳಿ  ಎಂಬವರು  KA 15 F- 3080 ನೇ KSRTC  ಬಸ್‌‌‌ ನ್ನು ತೆಕ್ಕಟ್ಟೆ  ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕುಂಭಾಶಿ ಸ್ವಾಗತ  ಗೋಪುರದ  ಎದುರುಗಡೆಯ ಡಿವೈಡರ್ ಕಡೆಯಿಂದ ಪಿರ್ಯಾದಿ ರಾಘವೇಂದ್ರ  35  ವರ್ಷ  ತಂದೆ ಮಹಾಬಲ ಪೂಜಾರಿ ವಾಸ: ಕೆಳಬೆಟ್ಟು  ಹಲ್ತೂರು ಒಳ್ತೂರು ಗ್ರಾಮ &ಅಂಚೆ ಕುಂದಾಪುರ ತಾಲೂಕು ರವರು ಅದೇ ದಿಕ್ಕಿನಲ್ಲಿ ಚಲಾಯಿಸಿಕೊಂಡಿದ್ದ KA20 C  9735 ನೇ ಮಹೀಂದ್ರ ಪಿಕಪ್  ಗೂಡ್ಸ್  ವಾಹನಕ್ಕೆ ಹಿಂದಿನಿಂದ  ಡಿಕ್ಕಿಹೊಡೆದ ಪರಿಣಾಮ  ವಾಹನಗಳು ಜಖಂಗೊಂಡಿದ್ದು ಮೆಸ್ಕಾಂ ಸಂಸ್ಥೆಗೆ  ಸೇರಿದ ವಿದ್ಯುತ್  ಕಂಬ ತುಂಡಾಗಿರುತ್ತದೆ, ಈ ಬಗ್ಗೆ ಕುಂದಾಪುರ ಸಂಚಾರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ  103/ 15  ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೇ ಪ್ರಕರಣ
  • ಬ್ರಹ್ಮಾವರ: ದಿನಾಂಕ: 27/08/2015  ರಂದು  ಬೆಳಗಿನ ಜಾವ 06:15 ಗಂಟೆಗೆ ಉಡುಪಿ ತಾಲೂಕು, ಕಚ್ಚೂರು ಗ್ರಾಮದ , ಬಾರ್ಕೂರಿನ ಸ್ನೇಹ ಬಾರ್‌ ಎದುರು ರಸ್ತೆಯಲ್ಲಿ ಆರೋಪಿಗಳು ಕೋಕ್ಕರ್ಣೆ ಕಡೆಯಿಂದ ಕೇರಳ ರಾಜ್ಯಕ್ಕೆ ಮಾಂಸಕ್ಕಾಗಿ 16 ಕೋಣಗಳನ್ನು  ಕೆಎ 21   9290 ನೇ 909 ಗೂಡ್ಸ್ ವಾಹನದಲ್ಲಿ ಕೋಣಗಳಿಗೆ ಹಿಂಸೆ ಆಗುವ ರೀತಿಯಲ್ಲಿ ತುಂಬಿಸಿಕೊಂಡು ಸಾಗಿಸುತ್ತಿರುವಾಗ ಅನಂತಪದ್ಮನಾಭ ಕೆ.ವಿ. ಪೊಲೀಸ್ ಉಪ ನಿರೀಕ್ಷಕರು ಬ್ರಹ್ಮಾವರ ಪೊಲೀಸ್ ಠಾಣೆರವರು ಠಾಣಾಸಿಬ್ಬಂದಿಯವರೊಂದಿಗೆ ಖಚಿತ ಮಾಹಿತಿಯಂತೆ ರೂ 2,10,000/- ಮೌಲ್ಯದ 16 ಕೋಣಗಳನ್ನು , ರೂ 8,00,000/- ಮೌಲ್ಯದ ಗೂಡ್ಸ್  ವಾಹನವನ್ನು ಸ್ವಾಧೀನ ಪಡಿಸಿಕೊಂಡು ಆರೋಪಿಗಳಾದ 1) ಜೈನುಲ್ಲಾ ಅಬೀದ್, (27), ತಂದೆ: ದಿ||  ಇಬ್ರಾಹಿಂ, ವಾಸ: ಬೇಬಿಂಜ, ಚಂಗಳ ತಾಲೂಕು, ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ,2) ಅಬ್ದುಲ್ ಎ. (41), ತಂದೆ: ದಿ. ಅಬುಬಕ್ಕರ್, ವಾಸ: ಮೈನ್‌ಹೌಸ್, ಅಲಂಬಾಡಿ, ಕಾರಗೋಡು, ಕೇರಳ ಇವರನ್ನು ವಶಕ್ಕೆ ತೆಗೆದುಕೊಂಡಿದ್ದಾಗಿದೆ, ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ  169/15 ಕಲಂ: KARNTAKA PREVENTION OF COW SLANGHTER & CATTLE PREVENTION ACT-1964 (U/s-8,9,11); PREVENTION OF CRUELTY TO ANIMALS ACT, 1960 (U/s-11(1 ) (D)); INDIAN MOTOR VEHICLES ACT, 1988 (U/s-192); IPC 1860 (U/s-379; CODE OF CRIMINAL PROCEDURE, 1973 (U/s-41(D) &-102);)  ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: