Thursday, August 27, 2015

Daily Crime Reports As on 27/08/2015 at 07:00 Hrs

ಅಪಘಾತ ಪ್ರಕರಣಗಳು
  • ಉಡುಪಿ: ಪಿರ್ಯಾದಿದಾರರಾದ ವಿಜಯ ಬಲ್ಲಾಳ (60), ತಂದೆ:ಕೃಷ್ಣರಾಜ, ವಾಸ: ಸುದರ್ಮ ಮೂಡನಿಡಂಬೂರು ಉಡುಪಿ ಇವರು ದಿನಾಂಕ 26/08/2015 ರಂದು ಸ್ಯಾಮಸಂಗ್ ಮೋಬೈಲ್ ಸರ್ವಿಸಿಂಗ್‌ಗೆ ಹೋಗುತ್ತಿರುವಾಗ 12:45 ಗಂಟೆ ಸಮಯಕ್ಕೆ ಶಾರದಾ ಕಲ್ಯಾಣ ಮಂಟಪ ಜಂಕ್ಷನ್‌ ಬಳಿ ಉಡುಪಿ ಕಡೆಯಿಂದ ಕೆಎ 20 ಪಿ 5383 ನೇ ಕಾರು ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿಕೊಂಡು ಬಂದು ಒಮ್ಮೇಲೆ ಬಲಕ್ಕೆ ತಿರುಗಿಸಿ ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಕೆಎ 20 ಯು 9342 ನೇ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್‌ ಸವಾರ ಅಭಯ ಬಲ್ಲಾಳರವರು ರಸ್ತೆಗೆ ಬಿದ್ದ ಪರಿಣಾಮ ತಲೆಗೆ, ಮುಖಕ್ಕೆ ಮತ್ತು ಕಾಲಿಗೆ ತೀವ್ರ ರಕ್ತಗಾಯವಾಗಿರುತ್ತದೆ. ಈ ಅಪಘಾತಕ್ಕೆ ಕಾರಣವಾದ ಕೆಎ 20 ಪಿ 5383 ನೇ ಕಾರು ಚಾಲಕ ನಿಲ್ಲಿಸದೇ ಪರಾರಿಯಾಗಿರುತ್ತಾನೆ. ನಂತರ ವಿಜಯ ಬಲ್ಲಾಳರವರು ಹಾಗೂ ಅಲ್ಲಿ ಸೇರಿದವರು ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಉಡುಪಿ ಸಂಚಾರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 92/2015 ಕಲಂ:279, 338 ಐಪಿಸಿ ಮತ್ತು  134(ಎ&ಬಿ) ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ದಿನಾಂಕ 25/08/2015 ರಂದು ರಾತ್ರಿ 9:00 ಗಂಟೆಗೆ ಪಿರ್ಯಾದಿದಾರರಾದ ಮೆಹಬೂಬ್ ಹಸನ್ (41), ತಂದೆ: ಎಮ್.ಹೆಚ್. ಮಯ್ಯದ್ದಿ, ವಾಸ:-7ನೇ ಬ್ಲಾಕ್, ಕೃಷ್ಣಪುರ, ಮನೆ ನಂಬ್ರ ಜಿಎಲ್-69, ಹಿಲ್ ಸೈಡ್, ಸುರತ್ಕಲ್, ಮಂಗಳೂರು ತಾಲೂಕು ಇವರು ತನ್ನ ಆಕ್ಟಿವ್ ಹೋಂಡಾ ನಂಬ್ರ ಕೆಎ 19 ಇಪಿ 8986 ನೇದರಲ್ಲಿ ತನ್ನ ಪತ್ಮಿ ರೆಹನಾರವರನ್ನು ಕುಳ್ಳಿರಿಸಿಕೊಂಡು ಮಣಿಪಾಲ ಆಸ್ಪತ್ರೆಗೆ ಹೋಗಿ ವಾಪಾಸ್ಸು ಮಣಿಪಾಲದಿಂದ ಸುರತ್ಕಲ್ ಕಡೆಗೆ ಚಲಾಯಿಸಿಕೊಂಡು ಬರುತ್ತಿರುವಾಗ ನಡ್ಸಾಲು ಗ್ರಾಮದ ಸಾಸ್ ಹೋಟೆಲ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕೆಎ 41 ಎ 1723 ನೇ ಕಂಟೈನರ್ ಲಾರಿಯ ಚಾಲಕನಾದ ಜೋಗಿಂದರ್ ಸಿಂಗ್ ಎಂಬುವವರು ಕಂಟೈನರ್ ಲಾರಿಯನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿ ಕೊಂಡು ಬಂದು ಕೆಎ 19 ಇಪಿ 8986 ನೇ ಆಕ್ಟಿವ್ ಹೋಂಡಾದ ಬಲ ಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೆಹಬೂಬ್ ಹಸನ್ ರವರಿಗೆ ಬಲಕಾಲಿನ ಪಾದದ ಮೂಳೆ ಮುರಿತ, ಬಲಕಾಲಿನ ಗಂಟಿಗೆ ಹಾಗೂ ಬಲಕೈಗೆ ತರಚಿದ ಹಾಗೂ ಗುದ್ದಿದ ಗಾಯವಾಗಿರುತ್ತದೆ ಹಾಗೂ ರೆಹನಾ ರವರಿಗೆ ತರಚಿದ ಗಾಯವಾಗಿ ಮುಕ್ಕಾ ಶ್ರೀನಿವಾಸ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 110/2015 ಕಲಂ; 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
ಜುಗಾರಿ ಪ್ರಕರಣ
  • ಶಂಕರನಾರಾಯಣ: ದಿನಾಂಕ 25/08/2015 ರಂದು 21:15 ಗಂಟೆಗೆ ಕುಂದಾಪುರ ತಾಲೂಕಿನ ಉಳ್ಳೂರು 74 ಗ್ರಾಮದ ಕಾರೆಬೈಲ್ಲು ಕ್ರಾಸ್‌ ಬಳಿ  ಶಂಕರನಾರಾಯಣ ಜನರಲ್ ಸ್ಟೋರ್ ಬಳಿ ಆರೋಪಿಗಳಾದ 1) ಅಶೋಕ, 2) ಕಿರಣ, 3) ಸುರೇಶ, 4) ರಾಜು, 5) ಸಂತೋಷ ಇವರು ಅಕ್ರಮವಾಗಿ ಹಣವನ್ನು ಪಣವಾಗಿರಿಸಿ ಅಂದರ್-ಬಾಹರ್ ಇಸ್ಟೀಟ್ ಜುಗಾರಿ ಆಟ ಆಡುತ್ತಿರುವುದಾಗಿ ದೇಜಪ್ಪ ಪಿಎಸ್‌ಐ ಶಂಕರನಾರಾಯಣ ಪೊಲೀಸ್ ಠಾಣೆ ಇವರಿಗೆ ದೊರೆತ  ಖಚಿತ ಮಾಹಿತಿಯಂತೆ ದಾಳಿ ನಡೆಯಿಸಿ ಇಸ್ಟೀಟ್‌ ಜುಗಾರಿ ಆಟಕ್ಕೆ ಬಳಸಿದ 3,660/- ರೂಪಾಯಿ ನಗದು ಹಣ ಹಾಗೂ ಇಸ್ಪೀಟ್ ಎಲೆ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 175 /2015 ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೇ ಪ್ರಕರಣ
  • ಶಿರ್ವಾ: ಪಿರ್ಯಾದಿದಾರರಾದ ಮರಿಯಮ್ಮ (38), ಗಂಡ: ಅಬ್ದುಲ್‌ ಮಜೀದ್‌, ವಾಸ: ಶಮಹಾ ಮನ್ಜಿಲ್‌, ಚಂದ್ರನಗರ, ಕಳತ್ತೂರು ಗ್ರಾಮ ಇವರ ಮನೆಗೆ ದಿನಾಂಕ 26/08/2015 ರಂದು ಸಂಜೆ 05:00 ಗಂಟೆ ಸಮಯಕ್ಕೆ ಆರೋಪಿತ ಅಕ್ಬರ್ ಎಂಬಾತನು ತನ್ನ ಸ್ನೇಹಿತನೊಂದಿಗೆ ಆಕ್ಟಿವಾ ಹೊಂಡಾ ದ್ವಿಚಕ್ರ ವಾಹನದಲ್ಲಿ ಬಂದು ಇಬ್ಬರೂ ಮರಿಯಮ್ಮ ರವರ ಮನೆಯ ಕಂಪೌಂಡ್ ಒಳಗೆ ಅಕ್ರಮ ಪ್ರವೇಶ ಮಾಡಿ ಆ ಪೈಕಿ ಆರೋಪಿತ ಅಕ್ಬರ್ ಎಂಬಾತನು ತನ್ನ ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಅವಾಚ್ಯ ಶಬ್ದದಿಂದ ಬೈದು ಬೆದರಿಕೆ ಹಾಕಿ ಮರಿಯಮ್ಮ ರವರ ಮನೆಯ ಮುಖ್ಯ ಬಾಗಿಲಿಗೆ ಕೈಯಿಂದ ಹಾಗೂ ಕತ್ತಿಯಿಂದ ಬಡಿದು, ಅಲ್ಲದೆ ಮನೆಯ ಎದುರಿನ ಕಿಟಕಿಯ ಗ್ಲಾಸಿಗೆ ಕೈಯಿಂದ ಹಾಗೂ ಕತ್ತಿಯಿಂದ ಗುದ್ದಿದ್ದು, ಕಿಟಕಿಯ ನಾಲ್ಕು ಗ್ಲಾಸು ಪುಡಿಯಾಗಿರುತ್ತದೆ. ಈ ಬಗ್ಗೆ ಶಿರ್ವಾ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 66/2015  ಕಲಂ: 447, 427, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: