Wednesday, August 26, 2015

Daily Crime Reports As on 26/08/2015 at 07:00 Hrs

ಅಪಘಾತ ಪ್ರಕರಣಗಳು
  • ಕುಂದಾಪುರ: ದಿನಾಂಕ 24/08/2015 ರಂದು ರಾತ್ರಿ ಸುಮಾರು 10:00 ಗಂಟೆಗೆ ಕುಂದಾಪುರ ತಾಲೂಕು ಕಸಬಾ ಗ್ರಾಮದ ವಿನಯ ಆಸ್ಪತ್ರೆಯ ಎದುರುಗಡೆ  ಪುರಸಭಾ ರಸ್ತೆಯಲ್ಲಿ ಆಪಾದಿತ ಮನ್‌‌‌‌‌‌ಹಾಲ್ ಎಂಬವರು KA 20 P 7056 ನೇ ಕಾರನ್ನು ಹೊಸ ಬಸ್‌ ನಿಲ್ದಾಣ ಕಡೆಯಿಂದ ಶಾಸ್ತ್ರಿ ಸರ್ಕಲ್ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ಎಡಬದಿಗೆ ಬಂದು ಪಿರ್ಯಾದಿದಾರರಾದ ಮಧುಶಂಕರ ಹೆಬ್ಬಾರ್ (36), ತಂದೆ: ಸಣ್ಣಯ್ಯ ಹೆಬ್ಬಾರ್, ವಾಸ: ಕೆ.ಜಿ ರಸ್ತೆ, ವಡೇರಹೋಬಳಿ ಗ್ರಾಮ ಕುಂದಾಪುರ ತಾಲೂಕು ಇವರು ನಿಲ್ಲಿಸಿಕೊಂಡಿದ್ದ ತನ್ನ KA 20 N 5992 ನೇ ಕಾರನ್ನು ಮುಂದಕ್ಕೆ ಚಲಾಯಿಸಿಕೊಂಡು ಹೋಗತ್ತಿರುವಾಗ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮಧುಶಂಕರ ಹೆಬ್ಬಾರ್ ಜೊತೆಯಲ್ಲಿ ಕಾರಿನ ಮುಂಭಾಗದಲ್ಲಿ ಪ್ರಯಾಣಿಸುತ್ತಿದ್ದ   ಕುಂದಾಪುರ ಪೊಲೀಸ್ ವೃತ್ತ ನಿರೀಕ್ಷಕರಾದ ಪಿ.ಎಂ.ದಿವಾಕರ್ ರವರ ತಲೆಗೆ ಒಳನೋವು ಹಾಗೂ ಆಪಾದಿತ ಮನ್‌‌‌‌‌‌ಹಾಲ್ ರವರ ಎದೆಗೆ ಒಳನೋವು ಉಂಟಾಗಿ ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 102/ 2015  ಕಲಂ: 279 , 337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಹಿರಿಯಡ್ಕ: ದಿನಾಂಕ 25/08/2015 ರಂದು ಪಿರ್ಯಾದಿದಾರರಾದ ಕಾರ್ತಿಕ್‌ ಎನ್‌ ಶೆಟ್ಟಿ(32), ತಂದೆ:ದಿ ಸುದಾಕರ್‌ ಶೆಟ್ಟಿ,  ವಾಸ: 1-51 ಎ, ಭಾಗಿ  ನಿಲಯ , ಪರೀಕ ಅತ್ರಾಡಿ,  ಉಡುಪಿ ತಾಲೂಕು ಇವರು ಕೆಎ 20 ಎಂಎ 234 ನೇ ಎಸ್ಟೀಮ್‌ ಕಾರಿನಲ್ಲಿ ತನ್ನ ಮನೆಯಾದ ಪರೀಕದಿಂದ ಮಣಿಪಾಲಕ್ಕೆ ಹೋಗಲು ಕಾರನ್ನು ಚಲಾಯಿಸುತ್ತಾ ಅತ್ರಾಡಿ ಗ್ರಾಮದ ಕೆಳ ಅತ್ರಾಡಿ ಸೈದ ಮಟನ್‌ ಅಂಗಡಿ ಬಳಿ ತಲುಪುವಾಗ  ಸಂಜೆ 5 ಗಂಟೆಗೆ ಆರೋಪಿ ಕಿರಣ್‌ ತನ್ನ KA 04 P 3427 ನೇ ಮಾರುತಿ ಜೆನ್‌ ಕಾರನ್ನು ಉಡುಪಿ ಕಡೆಯಿಂದ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ ಬಂದು ತನ್ನ ಮುಂದಿನಿಂದ ಹೋಗುತ್ತಿದ್ದ ವಾಹನವನ್ನು ಹಿಂದಿಕ್ಕುವ ಭರದಲ್ಲಿ ಓಮ್ಮೆಲೇ ಬಲಕ್ಕೆ ತಿರುಗಿಸಿದಾಗ ಕಾರು ಆತನ ನಿಯಂತ್ರಣ ತಪ್ಪಿ ಕಾರ್ತಿಕ್‌ ಎನ್‌ ಶೆಟ್ಟಿ ಯವರ ಕಾರಿನ ಎದುರು ಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿದ್ದು ಹಾಗೂ ಡಿಕ್ಕಿ ಹೊಡೆದ ಕಾರು ಜಖಂ ಗೊಂಡಿದ್ದು ಡಿಕ್ಕಿ ಹೊಡೆದ ಕಾರಿನಲ್ಲಿ ನಾಲ್ಕು ಜನ ಪ್ರಯಾಣಿಕರಿದ್ದು ಆ ಪೈಕಿ ಕೃಷ್ಣಮೂರ್ತಿ ಎಂಬುವವರಿಗೆ ತಲೆಯ ಬಲ ಬದಿ ಗುದ್ದಿದಂತಹ ಓಳ ಜಖಂ ಆಗಿದ್ದು ಗಾಯಾಳುವನ್ನು ಅಲ್ಲಿ ಸೇರಿದವರು ಹಾಗೂ ಡಿಕ್ಕಿ ಹೊಡೆದ ಕಾರಿನ ಚಾಲಕ ಕಿರಣ್‌ ಸೇರಿ ಯಾವುದೋ ಒಂದು ವಾಹನದಲ್ಲಿ ಮಣಿಪಾಲ ಆಸ್ಪತ್ರೆಗೆ ಸೇರಿಸಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 85/2015 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಹೆಂಗಸು ಕಾಣೆ ಪ್ರಕರಣ 


  • ಮಣಿಪಾಲ: ದಿನಾಂಕ 24/08/2015 ರಂದು ಮಧ್ಯಾಹ್ನ 2:00 ಗಂಟೆಯಿಂದ ಸಂಜೆ 5:00 ಗಂಟೆಯ ಮಧ್ಯಾವಧಿಯಲ್ಲಿ ಉಡುಪಿ ತಾಲೂಕು ಶಿವಳ್ಳೀ ಗ್ರಾಮದ ಎಮ್‌ಜಿಎಮ್‌ ಕಾಲೇಜ್‌ ಹಿಂದೆ, ಕುಸುಮ ಸೇರಿಗಾರ್‌ರವರ ಬಾಡಿಗೆ ಮನೆಯಿಂದ ಪಿರ್ಯಾದಿದಾರರಾದ ಪ್ರದೀಪ್‌ ಮಂಡಲ್‌, ತಂದೆ:ರೂಡಲ್‌ ಮಂಡಲ್‌, ವಾಸ: ದಿಲ್‌ದಾರ್‌ ಪುರ ಗ್ರಾಮ, ಭಾಗಲ್‌ಪುರ ಜಿಲ್ಲೆ, ಬಿಹಾರ ರಾಜ್ಯ ಇವರ ಹೆಂಡತಿ ಶ್ರೀಮತಿ ಸಂಗೀತಾದೇವಿ ಎಂಬುವವರು ಕಾಣೆಯಾಗಿರುತ್ತಾರೆ. ಈ ಬಗ್ಗೆ ಮಣಿಪಾಲ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 170/2015 ಕಲಂ: ಹೆಂಗಸು  ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ. 

No comments: