Wednesday, August 26, 2015

Daily Crime Reports As on 26/08/2015 at 17:00 Hrs

ಹಲ್ಲೆ ಪ್ರಕರಣ
  • ಕುಂದಾಪುರ: ದಿನಾಂಕ 26.08.2015 ರಂದು ಆಪಾದಿತ ರಾಘವೇಂದ್ರ ನಾಯ್ಕ, ಸುಬ್ರಹ್ಮಣ್ಯ ಖಾರ್ವಿ, ನಾರಾಯಣ ಪಟೇಲ್‌, ಅರುಣ ಖಾರ್ವಿ, ಸದಾನಂದ, ಕಾಶೀನಾಥ್‌ ಮತ್ತು ಇತರರು ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿ 2 ಆಟೋ ರಿಕ್ಷಾ ಮತ್ತು 2 ಬೈಕ್‌ನಲ್ಲಿ ಕುಂದಾಪುರ ತಾಲೂಕು ಕಸಬಾ ಗ್ರಾಮದ ಕುಂದಾಪುರ ಪ್ರಭಾಕರ ಟೈಲ್ಸ್‌ ಫ್ಯಾಕ್ಟರಿಯ ಬಳಿ ಮರಳು ಸಂಗ್ರಹಿಸುವ ಸ್ಥಳಕ್ಕೆ ಬೆಳಿಗ್ಗೆ 07:45 ಗಂಟೆಗೆ ಬಂದು ಪಿರ್ಯಾದಿ ಶಿವರಾಜ್‌ ಹೆಗ್ಡೆ ಇವರ ಬಾಬ್ತು ಮರಳು ಕೆಲಸ ಮಾಡುವ ಕಾರ್ಮಿಕರಿಗೆ ಹೊಡೆಯಲು ಮುಂದಾದಾಗ ಪಿರ್ಯಾದುದಾರರು ತಡೆಯಲು ಪ್ರಯತ್ನಿಸಿದ ಸಮಯ ಆಪಾದಿತರು ಕಬ್ಬಿಣದ ವೀಲ್‌ ಲಿವರ್‌ನಿಂದ ಪಿರ್ಯಾದುದಾರರಿಗೆ ಹೊಡೆದು ದೂಡಿದ್ದು, ಪಿರ್ಯಾದುದಾರರನ್ನುದ್ದೇಶಿಸಿ ಕೊಲ್ಲುವುದಾಗಿ ಕೊಲೆ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 295/2015, ಕಲಂ: 143, 147, 148, 324, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಅಸ್ವಾಭಾವಿಕ ಮರಣ ಪ್ರಕರಣ
  • ಉಡುಪಿ: ದಿನಾಂಕ: 26/08/2015ರಂದು ಬೆಳಿಗ್ಗೆ ಸುಮಾರು 11:15ರ ಹೊತ್ತಿಗೆ ಫಿರ್ಯಾದಿ ಪಿ ಶ್ಯಾಮಪ್ರಸಾದ ಕುಡ್ವ ಇವರು ಉಡುಪಿ ಶ್ರೀ ವೆಂಕಟರಮಣ ದೇವಸ್ಧಾನ ದಲ್ಲಿ ನಡೆಯುವ ಆಖಂಡ ಭಜನಾ ಸಪ್ತಾಹ ಕಾರ್ಯಕ್ರಮದಲ್ಲಿರುವಾಗ ಯಾರೋ ಸಾರ್ವಜನಿಕರು ಬಂದು ಉಡುಪಿ ಶ್ರೀ ವೆಂಕಟರಮಣ ದೇವಸ್ದಾನದ  ಹತ್ತಿರದಲ್ಲಿರುವ ಜೋಗಪ್ಪ ಶ್ಯಾನುಭಾಗರ ಅಂಗಡಿಯ ಪಕ್ಕದಲ್ಲಿ ಮುಚ್ಚಲ್ಪಟ್ಟ ಅಂಗಡಿಯ ಜಗಲಿಯಲ್ಲಿ ಓರ್ವ ಅಪರಿಚಿತ ವ್ಯಕ್ತಿ ಸುಮಾರು 75 ವರ್ಷ ಪ್ರಾಯದ ಗಂಡಸು ಮಲಗಿದ್ದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿಸಿದ್ದು  ಫಿರ್ಯಾದಿದಾರರು ಹೋಗಿ ನೋಡಲಾಗಿ ಸದ್ರಿ  ಅಪರಿಚಿತ ವ್ಯಕ್ತಿಯು ಮೃತ ಪಟ್ಟಿರುವುದು ಕಂಡು ಬಂದಿದ್ದು ಸದ್ರಿ ವ್ಯಕ್ತಿಯು ಕೂಲಿ ಕೆಲಸ ಮಾಡಿಕೊಂಡು ಜಗಲಿಯಲ್ಲಿ ಮಲಗುತ್ತಿದ್ದು ಅವನು ಯಾವುದೋ ಖಾಯಿಲೆಯಿಂದಲೋ ವೃದ್ಯಾಪ್ಪದಿಂದಲೋ ಅಥವ ಇನ್ನಾವುದೋ ಕಾರಣದಿಂದ ಮೃತ ಪಟ್ಟಿರಬಹುದಾಗಿದೆ. ಈ ಬಗ್ಗೆ ಉಡುಪಿ ನಗರ ಪೋಲಿಸ್ ಠಾಣೆ ಯುಡಿಆರ್ ಕ್ರಮಾಂಕ 43/2015 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: