Tuesday, August 25, 2015

Daily Crime Reports As on 25/08/2015 at 17:00 Hrsಅಪಘಾತ ಪ್ರಕರಣ

  • ಹೆಬ್ರಿ: ಪಿರ್ಯಾದಿ ಸದಾನಂದ ಇವರು ದಿನಾಂಕ 23/08/2015 ರಂದು ತನ್ನ ಹೆಂಡತಿ ಮನೆಯಾದ ಕೊಲ್ಲೂರಿನಿಂದ  ಹೆಂಡತಿ ಅಂಬಿಕಾಳನ್ನು ತನ್ನ ಬಾಬ್ತು ಕೆ.ಎ.20ಇ 0621 ನೇ ಮೋಟಾರ್‌ ಸೈಕಲಿನಲ್ಲಿ ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ವಾಪಾಸ್ಸು  ತನ್ನ ಮನೆಯಾದ ಮುನಿಯಾಲ್‌ ಕಾಡುಹೊಳೆಗೆ ಬೇಳಂಜೆ-ಹೆಬ್ರಿ ಮುಖ್ಯ ರಸ್ತೆಯಲ್ಲಿ ಬರುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 11:00 ಗಂಟೆಗೆ ಕಾರ್ಕಳ ತಾಲೂಕು, ಕಚ್ಚೂರು ಗ್ರಾಮದ, ಸೊಳ್ಳೆಕಟ್ಟೆ ಎಂಬಲ್ಲಿ ತಲುಪುವಾಗ್ಯೆ ಎದುರುಗಡೆಯಿಂದ ಅಂದರೆ ಹೆಬ್ರಿ ಕಡೆಯಿಂದ ಬೇಳಂಜೆ ಕಡೆಗೆ ಕೆ.ಎ.20.ಇ.ಜಿ.0015 ನೇ ಟಿ,ವಿ.ಎಸ್‌ ಮೋಟಾರ್‌ ಸೈಕಲನ್ನು ಅದರ ಸವಾರ ಚಂದ್ರ ಎಂಬುವವರು ಅತಿ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರ್‌ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರ್‌ ಸೈಕಲ್‌  ಸಮೇತ ರಸ್ತೆಗೆ ಬಿದ್ದುದಲ್ಲದೇ ಅವರ ಹೆಂಡತಿಯೂ ಸಹ ರಸ್ತೆಗೆ ಬಿದ್ದು ಗಾಯಗೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 80/2015 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಹಲ್ಲೆ ಪ್ರಕರಣ

  • ಹಿರಿಯಡ್ಕ: ದಿನಾಂಕ: 19/08/2015 ರಂದು ಸುಮಾರು  16.30 ಗಂಟೆಗೆ ಪಿರ್ಯಾದಿ ಶ್ರೀಮತಿ ಇಂದಿರಾ ಇವರ ಮಗ ಶೈಲೇಶ್‌ ಎಂಬವರು ಹೇಮಾ ಶೆಟ್ಟಿಯವರ ಮನೆಯಲ್ಲಿರುವಾಗ್ಗೆ ಬುಕ್ಕಿಗುಡ್ಡೆ ಶಿವರಾಮ ಶೆಟ್ಟಿಯವರು ಹೇಮಾ ಶೆಟ್ಟಿಯವರ ಮನೆಗೆ ಬಂದಾಗ ಈ ಬಗ್ಗೆ ಪಿರ್ಯಾದಿದಾರರ ಮಗ ವಿಚಾರಿಸಿದಾಗ  ಆರೋಪಿ 1 ನೇ ಶಿವರಾಮ ಶೆಟ್ಟಿಯು ಶೈಲೇಶ್‌ ಎಂಬವನ ಕಾಲರ್‌ ಹಿಡಿದು ಕೆನ್ನೆಗೆ ಹೊಡೆದಿದ್ದು, ಹಾಗೂ ಇದೇ ವೇಳೆಗೆ  ಆರೋಪಿತೆ 2  ನೇ ಹೇಮಾ ಶೆಟ್ಟಿ ಎಂಬವರು ಹೊಡೆದು, ಕೈ ಕಾಲು ಮುರಿಯುವುದಾಗಿ ಇಬ್ಬರೂ ಆರೋಪಿತರು  ಶೈಲೇಶ್‌ಗೆ ಕೊಲೆ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಹಿರಿಯಡ್ಕಪೊಲೀಸ್ ಠಾಣೆ ಅಪರಾಧ ಕ್ರಮಾಂಕ 84/2015 ಕಲಂ: 323, 355, 506,  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಮನುಷ್ಯ ಕಾಣೆ ಪ್ರಕರಣ 

  • ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ Cardiology Deptನಲ್ಲಿ ಉದ್ಯೋಗ ಮಾಡಿಕೊಂಡಿರುವ Dr.Rajarajan Murugaiyan ಎಂಬವರು ದಿನಾಂಕ 24.08.15ರಂದು ರಾತ್ರಿ 10:30 ಗಂಟೆಗೆ ಮಣಿಪಾಲ ಯುನಿವರ್ಸಿಟಿ ಲೈಬ್ರರಿ ಹೋದವರು ನಂತರ ಕಾಣೆಯಾಗಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 169/15 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ. 

No comments: