Tuesday, August 25, 2015

Daily Crime Reports As on 25/08/2015 at 07:00 Hrs

ಅಪಘಾತ ಪ್ರಕರಣ
  • ಉಡುಪಿ: ದಿನಾಂಕ 24/08/2015 ರಂದು ಪಿರ್ಯಾದಿದಾರರಾದ ಶೇಖ್ ತಾಹಿರ್, ತಂದೆ: ಶೇಖ್ ಅಬ್ದುಲ್ ವಹಾಬ್, ವಾಸ:ಬೈತುಲ್ ಮೌಸ್ ಪೀರು ಮಂಜಿಲ್ ಬಳಿ ಕೊಳಂಬೆ ಉಡುಪಿ ಇವರ ಹೆಂಡತಿಯ ತಮ್ಮನಾದ ಮೋಹಿಬ್‌ರವರು ಸಂಜೆ 07:30 ಗಂಟೆಗೆ ಕೆಎ 20 ಇಎಫ್ 1064 ನೇ ಹೊಂಡಾ ಆಕ್ಟೀವಾದಲ್ಲಿ ಮೊಹಮ್ಮದ್ ಮುನಾಫ್‌ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಕೊಳಂಬೆ ಕಡೆಗೆ ಬರುತ್ತಿರುವಾಗ ಅವರ ಎದುರಿನಿಂದ ಚಿಟ್ಪಾಡಿ ಕಡೆಯಿಂದ ಕೆಎ 20 ಝಡ್ 877 ನೇ ಕಾರು ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ಹೊಂಡಾ ಆಕ್ಟೀವಾಗೆ ಡಿಕ್ಕಿ ಹೊಡೆದ ಪರಿಣಾಮ ಮೊಹಿಬ್ ಮತ್ತು ಮೊಹಮ್ಮದ್ ಮುನಾಫ್ ರವರು ರಸ್ತೆಗೆ ಬಿದ್ದು ತಲೆ,ಕೈಕಾಲುಗಳಿಗೆ ರಕ್ತಗಾಯಳಾಗಿದ್ದು ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಕಾರು ಚಾಲಕ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾನೆ. ಈ ಬಗ್ಗೆ ಉಡುಪಿ ಸಂಚಾರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 91/2015 ಕಲಂ: 279,337 ಐಪಿಸಿ ಮತ್ತು 134(ಎ&ಬಿ) ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
ಗಂಡಸು ಕಾಣೆ ಪ್ರಕರಣ 
  • ಮಲ್ಪೆ: ಪಿರ್ಯಾದಿದಾರರಾದ ರಾಜೇಶ (36), ತಂದೆ; ದಿ ಸ್ಯಾಮ ಕೋಟ್ಯಾನ್, ವಾಸ: ಲಕ್ಷ್ಮೀ ನಿವಾಸ ಬಲ ಮಾರುತಿ ವ್ಯಾಯಾಮ ಶಾಲೆಯ ಹಿಂದೆ ಕಿದಿಯೂರು ಗ್ರಾಮ ಉಡುಪಿ ತಾಲೂಕು ಇವರ  ತಮ್ಮನಾದ ಯೋಗೀಶ (34) ದಿನಾಂಕ 17/08/2015 ರಂದು 14:30 ಗಂಟೆಗೆ ತಮ್ಮ ಮನೆಗೆ ಬಂದು ಹೋದವರು ಇದುವರೆಗೂ ಮನೆಗೂ ಬಾರದೇ ಸಂಬಂಧಿಕರ ಮನೆಗೆಳಿಗೂ ಹೋಗದೇ ಕಾಣೆಯಾಗಿರುತ್ತಾರೆ, ಯೋಗೀಶನು ಮನೆಯಿಂದ ಹೋಗುವಾಗ ತಮ್ಮ ಸಂಬಂಧಿ ರತ್ನಾಕರವರ ಬಜಾಜ್ ಪಲ್ಸರ್ ಬೈಕ್ ನಂಬ್ರ ಕೆಎ 20ವೈ 8248 ನೇ ಮೋಟಾರ್ ಸೈಕಲ್ ನ್ನು ತೆಗೆದುಕೊಂಡು ಹೋಗಿರುತ್ತಾನೆ. ಈ ಬಗ್ಗೆ ಮಲ್ಪೆ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ ಕ್ರ 126/2015 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣಗಳು
  • ಹೆಬ್ರಿ: ಪಿರ್ಯಾದಿದಾರರಾದ ಶ್ರೀಮತಿ ಶಾಂತ ಶೆಟ್ಟಿ (55), ಗಂಡ: ದಿವಂಗತ ಗೋಪಾಲ್‌ ಶೆಟ್ಟಿ, ವಾಸ: ಶ್ರೀ ಹರಿಕೃಪಾ ದರ್ಖಾಸು, ಮುದ್ರಾಡಿ ಗ್ರಾಮ, ಕಾರ್ಕಳ ತಾಲೂಕು ಇವರ ಮಗಳು ರೋಹಿಣಿ ಶೆಟ್ಟಿ (25) ಇವರು ದಿನಾಂಕ 24/08/15 ರಂದು ಮಧ್ಯಾಹ್ನ 3:30 ಗಂಟೆಯಿಂದ 4:15 ಗಂಟೆಯ ಮಧ್ಯಾವಧಿಯಲ್ಲಿ ತನ್ನ ತಾಯಿ ಮನೆಯಾದ ಮುದ್ರಾಡಿ ಗ್ರಾಮದ, ದರ್ಖಾಸು ಎಂಬಲ್ಲಿರುವ ಶ್ರೀ ಹರಿ ಕೃಪಾ ಮನೆಯ ಒಳಗಿನ ಕೋಣೆಯಲ್ಲಿ ಮರದ ಜಂತಿಗೆ ಸೀರೆಯ  ಜೋಲಿಗೆಯ ಸೆರಗನ್ನು ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೋಲಿಸ್ ಠಾಣೆ ಯುಡಿಆರ್ ಕ್ರಮಾಂಕ 32/2015 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  •  ಮಲ್ಪೆ: ಪಿರ್ಯಾದಿದಾರರಾದ ಪರಮೇಶ ಲಮಾಣಿ(37) ತಂದೆ: ಗೇಮ್ಯಪ್ಪ ಲಮಾಣಿ, ವಾಸ: ಮೇಡ್ಲೆರಿ ತಾಂಡಾ. ಮೇಡ್ಲೆರಿ, ರಾಣೆಬೆನ್ನೂರು ತಾಲೂಕು ಹಾವೇರಿ ಜಿಲ್ಲೆ ಇವರ ಮಗಳಾದ ಲಲಿತ (9) ಇವಳು ಮಲ್ಪೆ ಪಿಶರಿಷ ಶಾಲೆಯಲ್ಲಿ 3 ನೇ ತರಗತಿಯಲ್ಲಿ ಓದುತ್ತಿದ್ದಳು, ರಾತ್ರಿ ಎಲ್ಲರೂ ಮನೆಯ ಹಾಲ್ ನಲ್ಲಿ ಮಲಗಿಕೊಂಡಿದ್ದು ದಿನಾಂಕ 24/08/2015 ರಂದು ಬೆಳಿಗ್ಗೆ 07:30 ಗಂಟೆಯ ಸಮಯಕ್ಕೆ ಎದ್ದು ನೋಡುವಾಗ ಲಲಿತಾಳು ಮನೆಯ ರೂಮಿನ ಪಕ್ಕಾಸಿಗೆ ನೈಲಾನ್ ಶಾಲನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುತ್ತಿರುವುದನ್ನು ಕಂಡು, ಕೂಡಲೇ ಒಂದು ವಾಹನದಲ್ಲಿ ಚಿಕೆತ್ಸೆಯ ಬಗ್ಗೆ ಉಡುಪಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, 10:15 ಗಂಟೆಗೆ ಚಿಕೆತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೋಲಿಸ್ ಠಾಣೆ ಯುಡಿಆರ್ ಕ್ರಮಾಂಕ 36/2015, ಕಲಂ: 174(3)(iv) ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: