Monday, August 24, 2015

Daily Crime Reports As on 24/08/2015 at 19:30 Hrs

ಅಪಘಾತ ಪ್ರಕರಣ
  • ಶಂಕರನಾರಾಯಣ:  ಯೋಗೀಶ ಇವರು ಪೋಲಿಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ದಿನಾಂಕ 23/08/2015 ರಂದು 19:00 ಗಂಟೆಗೆ ಕರ್ತವ್ಯದ ಬಗ್ಗೆ ಕೆಎ 20 ಇಜೆ 4431 ನೇ ಮೋಟಾರ್ ಸೈಕಲ್ ನಲ್ಲಿ ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ಶಿಂಗಿನಕೊಡ್ಲು ಬಸ್‌ನಿಲ್ದಾಣದ ಬಳಿ ಶಂಕರನಾರಾಯಣ ಕಡೆಗೆ ಬರುತ್ತಿರುವಾಗ ಆರೋಪಿ ಅಪರಿಚಿತ ಮೋಟಾರ್ ಸೈಕಲ್ ಸವಾರನು ತನ್ನ ಮೋಟಾರ್ ಸೈಕಲ್‌ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಾಂಗ್‌ ಸೈಡಿನಲ್ಲಿ ಚಲಾಯಿಸಿ ಯೋಗೀಶ ಇವರು ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದು ಇದರ ಪರಿಣಾಮ ಯೋಗೀಶ ಇವರು ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ  174/2015 ಕಲಂ: 279, 338 ಐಪಿಸಿ ಜೊತೆಗೆ 134(a)(b)  IMV ACT ನಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೇ ಪ್ರಕರಣ
  • ಬೈಂದೂರು: ದಿನಾಂಕ 24/08/2015 ರಂದು ಬೆಳಿಗ್ಗೆ 11:45 ಗಂಟೆಗೆ ಪಿರ್ಯಾದಿದಾರರಾದ ಕರಾಣಿ ಮೊಹಿದಿನ್‌ ಸಾಹೇಬ್‌, ತಂದೆ:ಮೀರಾ ಸಾಹೇಬ್‌, ವಾಸ: ಮುಸ್ಲಿಂ ಮೊಹಲ್ಲಾ ಶಿರೂರು ಗ್ರಾಮ ಕುಂದಾಪುರ ತಾಲೂಕು ಇವರು ಡಾಕ್ಟರ್ ಬಳಿ ಹೋಗಿ ವಾಪಾಸ್ಸು ಮನೆಯ ಕಡೆಗೆ ಶಿರೂರು ಗ್ರಾಮದ ಸೋನಾರ್‌ಕೇರಿಯಲ್ಲಿನ ಕಮ್ಟಿಗೌಸ್‌ ಮನೆಯ ಎದುರು ನಡೆದುಕೊಂಡು ಹೋಗುತ್ತಿರುವ ಸಮಯ ಮೌಲಾನಾ ಮೊಹಮ್ಮದ್‌ ಗೌಸ್‌, ತಂದೆ:ಮೌಲಾನಾ ಹಸನ್‌ ಸಾಹೇಬ, ವಾಸ:ಸೋನಾರ್ ಕೇರಿ ಶಿರೂರು ಗ್ರಾಮ ಎಂಬುವವರು ವಿನಾ ಕಾರಣ ಕರಾಣಿ ಮೊಹಿದಿನ್‌ ಸಾಹೇಬ್‌ ರವರನ್ನು ಏಕಾಏಕಿ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಹೊಡೆಯಲು ಬಂದು ಮುಂದಕ್ಕೆ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಬೈಂದೂರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 229/2015 ಕಲಂ: 341, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.


No comments: