Monday, August 24, 2015

Daily Crime Reports As on 24/08/2015 at 17:00 Hrs

ಅಪಘಾತ ಪ್ರಕರಣ
  • ಕೋಟ: ದಿನಾಂಕ:23/08/2015 ರಂದು ರಾತ್ರಿ 10:00 ಗಂಟೆ ಸಮಯಕ್ಕೆ  ಪಿರ್ಯಾದಿ ಮಹೇಶ ಶೆಟ್ಟಿ ಇವರು ಅವರ ಸ್ನೇಹಿತ ಅಶೋಕ  ಶೆಟ್ಟಿಯವರೊಂದಿಗೆ ಮಣೂರು ಗ್ರಾಮದ ನಂದಿಕೇಶ್ವರ ದೇವಸ್ಥಾನದ ಕ್ರಾಸ್ ಬಳಿ ರಾ.ಹೆ-66 ರ ರಸ್ತೆಯ ಬದಿಯಲ್ಲಿ ನಿಂತು ಮಾತನಾಡುತ್ತಿರುವಾಗ ಕೆಎ 20 ಇಜಿ2724 ನೇ ನಂಬ್ರದ ಮೋಟಾರ್ ಸೈಕಲ್‌ ಸವಾರ ಸುರೇಶ ಎಂಬುವರು ಪ್ರದೀಪ ಶೆಟ್ಟಿ ಎಂಬುವರನ್ನು ಸಹಸವಾರನ್ನಾಗಿ  ಕುಳ್ಳಿರಿಸಿಕೊಂಡು ತೆಕ್ಕಟ್ಟೆ ಕಡೆಯಿಂದ ಕೋಟ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ಕೆ.ಗೋವಿಂದ ಭಟ್ ಎಂಬುವರಿಗೆ  ಢಿಕ್ಕಿ ಹೊಡೆದು ಮೋಟಾರ್ ಸೈಕಲ್‌  ಸಮೇತ ತಾರು ರಸ್ತೆಯ ಮೇಲೆ ಬಿದ್ದ ಪರಿಣಾಮ ಪ್ರದೀಪ ಶೆಟ್ಟಿ ಯವರ ತಲೆಗೆ ತೀವ್ರ ರಕ್ತಗಾಯ ಹಾಗೂ ಪಾದಚಾರಿ ಕೆ.ಗೋವಿಂದ ಭಟ್ ರವರ ತಲೆ, ಮುಖ ಕೈಕಾಲಿಗೆ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದು ರಾತ್ರಿ  11:30 ಗಂಟೆ ಸುಮಾರಿಗೆ ಪ್ರದೀಪ ಶೆಟ್ಟಿಯವರು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ  192/2015 ಕಲಂ:279,337,304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ
  • ಕಾರ್ಕಳ: ದಿನಾಂಕ 28/05/2015 ರಂದು 12:30 ಗಂಟೆಗೆ ಸಾಣೂರು ಗ್ರಾಮದ ಪುಲ್ಕೇರಿ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ವಿವಾಹ ಸಂದರ್ಭದಲ್ಲಿ ಅಪಾದಿತರಾದ ವಿಜಯ ಶೆಟ್ಟಿ, ತಂದೆ: ಭೋಜ ಶೆಟ್ಟಿ, 2. ಶೇಖರ ಶೆಟ್ಟಿ, ತಂದೆ: ಭೋಜ ಶೆಟ್ಟಿ, 3. ಶೇಖರ ಶೆಟ್ಟಿ, ತಂದೆ: ಬಾಬು ಶೆಟ್ಟಿ ಇವರು ಸಮಾನ ಉದ್ದೇಶದಿಂದ ಪಿರ್ಯಾದಿ ಬಾಲಕೃಷ್ಣ ಶೆಟ್ಟಿ ಇವರನ್ನು ಸಾರ್ವಜನಿಕರ ಸಮಕ್ಷಮದಲ್ಲಿ ಅವಮಾನಿಸಿ ಹಲ್ಲೆ ನಡೆಸಿ ಜೀವಬೆದರಿಕೆಯನ್ನು ಹಾಕಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ  119/2015 ಕಲಂ 323, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಬೈಂದೂರು: ದಿನಾಂಕ 24/08/2015 ರಂದು ಬೆಳಿಗ್ಗೆ 08:30 ಗಂಟೆಯ ಸಮಾರಿಗೆ ಪಿರ್ಯಾದಿ ಶ್ರೀಮತಿ ಗಿರಿಜಾ ಪೂಜಾರ್ತಿ ಇವರು ಕುಂದಾಪುರ ತಾಲೂಕು ಕಾಲ್ತೋಡು ಗ್ರಾಮದ ಕಪ್ಪಾಡಿ ಮಂಜರಬೆಟ್ಟು ಎಂಬಲ್ಲಿರುವ ಅವರ ಮನೆಯಲ್ಲಿ ಇರುವ ಸಮಯ ಪಿರ್ಯಾದಿದಾರರ ಅಕ್ಕನ ಮಕ್ಕಳಾದ ಜೋಗೇಶ್‌, ಜಗದೀಶ ಹಾಗೂ ಅಕ್ಕನ ಮಗಳ ಗಂಡ ಸುಧಾಕರ ಎಂಬುವವರು ಅಲ್ಲಿಗೆ ಬಂದು ಜಾಗದ ತಕರಾರು ವಿಚಾರದಲ್ಲಿ ಜಗದೀಶ ಹಾಗೂ ಜೋಗೇಶ ರವರು ಪಿರ್ಯಾದಿದಾರಿಗೆ ಹಲ್ಲೆ ನಡೆಸಿದ್ದು, ಸುಧಾಕರನು ದೊಣ್ಣೆಯಿಂದ ರಟ್ಟೆಗೆ ಹೊಡೆದಿರುತ್ತಾನೆ, ಮತ್ತು ಕೊಲ್ಲುವುದಾಗಿ ಜೀವಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಬೈಂದೂರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ  228/2015 ಕಲಂ 323, 324, 506, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾರ್ಕಳ: ದಿನಾಂಕ: 18/08/2015  ರಂದು ಬೆಳಿಗ್ಗೆ 9:30 ಗಂಟೆಗೆ ಆರೋಪಿತರಾದ ನವೀನ್  ಕೊಂಡೆಲ್, ಕಟೀಲ್ ಸೋಮು ಯಾನೆ ಸೋಮನಾಥ ಸಂಕಲಕರಿಯ ದಿನೇಶ್ ಕಡಂದಲೆ, ತ್ರಿವೇಣಿ ಮಹೇಶ್ ಮೂಡುಬಿದಿರೆ, ಶಿಶಿಕಾಂತ ಸಚ್ಚರಿಪೇಟೆ, ಕಿಟ್ಟ ಬಿನ್ ಶ್ರೀನಿವಾಸ  ಗುತ್ತಕಾಡು, ಕಿನ್ನಿಗೋಳಿ, ಸುನೀಲ ಕೆ ಆರ್, ಗುರುಪ್ರಸಾದ್ ಶೆಟ್ಟಿ,ನವೀನ ಮೂರು ಕಾವೇರಿ ಕಿನ್ನಿ ಗೋಳಿ, ಉಮೇಶ್ ಸೂಡ, ನವೀನ್ ಬೆಳ್ಮ ಣ್, ಸೂರಜ್  ಕಟೀಲ್, ಸನತ್ ಕುಮಾರ್ ಕಿನ್ನಿಗೋಳಿ, ಪ್ರಸಾದ್ ಸಚ್ಚರಿಪೇಟೆ, ಸುಜಿತ್  ಸಚ್ಚರಿಪೇಟೆ ಇವರೆಲ್ಲರೂ ಸಮಾನ ಉದ್ದೇಶದಿಂದ ವಿವಿಧ ವಾಹನಗಳಲ್ಲಿ ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ದೊಡ್ಡಮನೆ ರಾಮಣ್ಣ ಶೆಟ್ಟಿ ಎಂಬವರ ಜಾಗಕ್ಕೆ ಬಂದು ಅಲ್ಲಿ ಪಿರ್ಯಾದಿ ಇಬ್ರಾಹಿಂ ಪರವಾನಿಗೆ ಹೊಂದಿ ಮಾರಾಟ ಮಾಡಲು ಕಟ್ಟಿದ್ದ 30  ಉಳುಮೆ ಕೋಣಗಳನ್ನು ಬಲತ್ಕಾರವಾಗಿ ಕೊಂಡು ಹೋಗಿದ್ದಲ್ಲದೆ, ಪಿರ್ಯಾಧಿದಾರರ ತಮ್ಮಂದಿರಾದ ಇಲಿಯಾಸ್ ಮತ್ತು ರಹೀಂ ರವರನ್ನು ಮರಕ್ಕೆ ಕಟ್ಟಿ ಹಾಕಿ ಕಾಲಿನಿಂದ ತುಳಿದು  ಹಿಂಸೆ ನೀಡಿರುತ್ತಾರೆ, ಹಾಗೂ ಪಿರ್ಯಾಧಿದಾರರಿಗೆ ಮತ್ತು ನೆರೆಕರೆಯವರಿಗೆ ಅವಾಚ್ಯವಾಗಿ ಬೈದು ದೊಣ್ಣೆಯಿಂದ ಹೊಡೆದಿರುತ್ತಾರೆ. ಪಿರ್ಯಾದಿದಾರರ ಟೆಂಪೋ ಚಾಲಕ ಗುಣಪಾಲ ಯಾನೆ ಅಶ್ವಥ್ ಅವರಿಗೂ ಕರೆಸಿ ಹಿಗ್ಗಾ ಮುಗ್ಗಾ ಥಳಿಸಿ ಪಿರ್ಯಾಧಿದಾರರ ಮನೆಗೆ ಪೆಟ್ರೋಲ್  ಹಾಕಿ ಬೆಂಕಿ ಕೊಡುವುದಾಗಿ ಬೆದರಿಸಿರುತ್ತಾರೆ. ಆರೋಪಿತರು  ತಾವು ಬಂದಿದ್ದ  ಅಟೋ ರಿಕ್ಷಾ ದಲ್ಲಿ ಪಿರ್ಯಾದಿದಾರರ  ಮನೆಯ ಒಂದು ದನದ  ಕರು ಮತ್ತು ಒಂದು ಎಮ್ಮೆ ಕರುವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 142/2015 ಕಲಂ 143,147,148,342,323,324,504,506,379, ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಗಂಗೊಳ್ಳಿ: ವಿಘ್ನೇಶ್ ಖಾರ್ವಿ (21 ವರ್ಷ)  ಎಂಬಾತನು ಕೋಟೇಶ್ವರ  ಸರ್ಕಾರಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ ಕಾಂ ಓದುತ್ತಿದ್ದು, ಈತನಿಗೆ ಆರೋಗ್ಯ ಸರಿ ಇಲ್ಲದೇ ಇದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ವಿಘ್ನೇಶ ಖಾರ್ವಿಯು ದಿನಾಂಕ:23/08/15  ರಂದು ಸಂಜೆ  7:00 ಗಂಟೆಗೆ ತನ್ನ ಮನೆಯಲ್ಲಿ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಠಾಣೆ ಯು.ಡಿ.ಆರ್‌ ನಂಬ್ರ 13/2015  ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: