Monday, August 24, 2015

Daily Crime Reports As on 24/08/2015 at 07:00 Hrsಮನುಷ್ಯ ಕಾಣೆ ಪ್ರಕರಣ
  • ಮಲ್ಪೆ: ಪಿರ್ಯಾದಿದಾರರಾದ ನಾಗರಾಜ (28), ತಂದೆ: ಶಂಕರ ಹರಿಜನ, ವಾಸ: ಮನೆ ನಂಬ್ರ 4-294, ಲಕ್ಷ್ಮೀನಗರ, 9 ನೇ ಕ್ರಾಸ್, ತೆಂಕನಿಡಿಯೂರು ಗ್ರಾಮ ಉಡುಪಿ ತಾಲೂಕು ಇವರ ತಂದೆ ಶಂಕರ ಹರಿಜನ (60) ಇವರು ದಿನಾಂಕ 22/08/2015 ರಂದು ರಾತ್ರಿ 8;00  ಗಂಟೆಗೆ ಊಟ ಮಾಡಿ ಮಲಗದೇ ಎಚ್ಚರದಿಂದ ಇದ್ದು ರಾತ್ರಿ 12:00 ಗಂಟೆಗೆ ನಾಗರಾಜ ರವರು ಮತ್ತು ಮನೆಯವರು ಎದ್ದು ನೋಡುವಾಗ ಶಂಕರ ಹರಿಜನ ರವರು ಎಲ್ಲಿಯೂ ಕಾಣದೆ ಇದ್ದು ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿರುತ್ತಾರೆ. ಈ ಬಗ್ಗೆ ಮಲ್ಪೆ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 125/2015 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರೇ ಪ್ರಕರಣ 
  • ಮಲ್ಪೆ : ದಿನಾಂಕ 22/08/2015 ರಂದು ರವಿಕುಮಾರ ಎ ಪೊಲೀಸ್ ಉಪನಿರೀಕ್ಷಕರು ಮಲ್ಪೆ ಪೊಲೀಸ್ ಇವರು ರಾತ್ರಿ ರೌಂಡ್ಸ ಕರ್ತವ್ಯದಲ್ಲಿರುವಾಗ ದಿನಾಂಕ 23/08/2015 ರಂದು ಬೆಳಿಗ್ಗೆ 04:00 ಗಂಟೆಗೆ ಮೂಡುತೋನ್ಸೆ ಗ್ರಾಮದ ಕಡೆಗೆ ರೌಂಡ್ಸ್ ನಲ್ಲಿರುವಾಗ ಸಿಬ್ಬಂದಿಗಳೊಂದಿಗೆ ಮೂಡುತೋನ್ಸೆ ಗ್ರಾಮದ ನೇಜಾರು ಜಂಕ್ಷನ್ ಬಳಿ ಹೋಗಿ ವಾಹನ ತಪಾಸಣೆ ಮಾಡುತ್ತಿರುವಾಗ 4:15 ಗಂಟೆಗೆ ಸಂತೆಕಟ್ಟೆ ಕಡೆಯಿಂದ ಒಂದು ವಾಹನ ಬರುತ್ತಿದ್ದು ಅದಕ್ಕೆ ಸಿಬ್ಬಂದಿಯವರು ತಮ್ಮ ಬಳಿ ಇರುವ ಬ್ಯಾಟನ ಮೂಲಕ ವಾಹನವನ್ನು ನಿಲ್ಲಿಸಲು ಕೆಂಪು ಸನ್ನೆ ಮಾಡಿದಾಗ ವಾಹನದ ಚಾಲಕನು ತನ್ನ ವಾಹನವನ್ನು ನಿಲ್ಲಿಸದೇ ಬ್ಯಾಟನ್ ಹಿಡಿದಿದ್ದ ಪೊಲೀಸ್ ಸಿಬ್ಬಂದಿಯವರ ಮೇಲೆ ದೈಹಿಕ ಸುರಕ್ಷತೆಗೆ ದಕ್ಕೆ ಬರುವ ರೀತಿಯಲ್ಲಿ ವಾಹನವನ್ನು ಚಲಾಯಿಸಿ ಹೂಡೆ ಕಡೆಗೆ ಅತಿ ವೇಗವಾಗಿ ಚಲಾಯಿಸಿಕೊಂಡು ಹೋಗಿರುತ್ತಾನೆ, ಕೂಡಲೇ ಆ ವಾಹನವನ್ನು ಸಿಬ್ಬಂದಿಗಳ ಜೊತೆ ಇಲಾಖಾ ವಾಹನದಲ್ಲಿ ಬೆನ್ನಟ್ಟಿದಾಗ ವಾಹನವು ಮೂಡುತೋನ್ಸೆ ಗ್ರಾಮದ ನೇಜಾರು ಪ್ರಗತಿ ನಗರದ 1 ನೇ ಅಡ್ಡ ರಸ್ತೆಯಲ್ಲಿ ಹೋಗಿ, ಮುಂದೆ ಹೋಗಲು ರಸ್ತೆ ಇಲ್ಲದ ಕಾರಣ ಆರೋಪಿತರು ವಾಹನವನ್ನು ಅಲ್ಲಿಯೇ ನಿಲ್ಲಿಸಿ ಓಡಿ ಹೋಗಿರುತ್ತಾರೆ, ನಂತರ ವಾಹನದ ಬಳಿ ಬಂದು ತಪಾಸಣೆ ಮಾಡಲಾಗಿ ವಾಹನ ಕೆಎ 20 ಎನ್ 130 ಇಂಡಿಕಾ ಕಾರು ಬೂದು ಬಣ್ಣದಾಗಿರುತ್ತದೆ, ವಾಹನದ ಒಳಗೆ ಟಾರ್ಚ ಹಾಕಿ ನೋಡಿದಾಗ ಅದರಲ್ಲಿ 1 ಹಸು 2 ಹೆಣ್ಣು ಕರುಗಳಿದ್ದು ಅವುಗಳ ಕಾಲುಗಳನ್ನು ಹಗ್ಗದಿಂದ ಹಿಂಸಾತ್ಮಕವಾಗಿ ಕಟ್ಟಿ ಕಾರಿನ ಇಕ್ಕಟ್ಟಾದ ಜಾಗದಲ್ಲಿ ತುಂಬಿಸಿದ್ದು ಕಂಡುಬಂದಿರುತ್ತದೆ, ಅರೋಪಿತರು ಜಾನುವಾರುಗಳನ್ನು ಅಕ್ರಮವಾಗಿ ವಧೆಗಾಗಿ ಎಲ್ಲಿಂದಲೋ ಕಳವು ಮಾಡಿಕೊಂಡು ಹಿಂಸೆಯಾಗುವ ರೀತಿಯಲ್ಲಿ ಕಾಲುಗಳನ್ನು ಹಗ್ಗದಿಂದ ಕಟ್ಟಿ ಇಂಡಿಕಾ ವಾಹನದಲ್ಲಿ ತುಂಬಿಸಿ ಯಾವುದೇ ಪರವಾನಿಗೆ ಇಲ್ಲದೇ ವಧೆಗೆ ಕೊಂಡೊಯ್ಯುತ್ತಿದ್ದು ಪೊಲೀಸರು ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದರೂ ಕೂಡಾ ನಿಲ್ಲಿಸದೇ ಸಿಬ್ಬಂದಿಯ ಮೇಲೆ ದೈಹಿಕ ಸುರಕ್ಷತೆಗೆ ದಕ್ಕೆ ಬರುವ ರೀತಿಯಲ್ಲಿ ವಾಹನವನ್ನು ಅತೀ ವೇಗವಾಗಿ ಚಲಾಯಿಸಿಕೊಂಡು ಹೋಗಿರುತ್ತಾರೆ, ಈ ಬಗ್ಗೆ ಮಲ್ಪೆ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 124/2015 ಕಲಂ: 11 ಜೊತೆಗೆ 13 ಪ್ರಾಣಿ ಹಿಂಸಾ ತಡೆ ಕಾಯ್ದೆ 1960 ಹಾಗೂ ಕಲಂ: 8, 9, 11 ಕರ್ನಾಟಕ ಗೋವಧೆ ಪ್ರತಿಬಂಧಕ ಜಾನುವಾರು ಪರೀರಕ್ಷಣೆ ಅಧಿನಿಯಮ 1964   ಮತ್ತು ಕಲಂ: 379, 279, 336 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: