Sunday, August 23, 2015

Daily Crime Reports As on 23/08/2015 at 19:30 Hrsಕಳ್ಳತನ ಪ್ರಕರಣ

  • ಬ್ರಹ್ಮಾವರ: ದಿನಾಂಕ: 22/08/2015  ರಂದು 18:00 ಗಂಟೆಯಿಂದ ದಿನಾಂಕ: 23/08/2015 ರ ಬೆಳಿಗ್ಗೆ 04:30 ಗಂಟೆಯ ಮಧ್ಯದ ಅವಧಿಯಲ್ಲಿ  ಪಿರ್ಯಾದಿ ಪೀಟರ್ ಡಿಸೋಜ (65) ತಂದೆ: ದಿ. ಸಲ್ವೊದರ್ ಡಿಸೋಜ ವಾಸ: ಜಾನ್ಗುಳಿ ಕಾರ್ತಿಬೈಲು, ಹಾವಂಜೆ ಗ್ರಾಮ, ಉಡುಪಿ ತಾಲೂಕು  ಇವರ ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಿರುವ 3  ದನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ 3  ದನದ ಮೌಲ್ಯವು ಸುಮಾರು ರೂ 30.000/-  ಆಗಿರುತ್ತದೆ, ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ  168/15 ಕಲಂ: 457,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಹೆಂಗಸು ಕಾಣೆ ಪ್ರಕರಣ

  • ಬೈಂದೂರು: ಪಿರ್ಯಾದಿ ವಿಶ್ವನಾಥ ಕೆ ಭಟ್‌ (41)  ತಂದೆ: ಕೇಶವ ಭಟ್‌ ವಾಸ: ಮಹಲಿಂಗೇಶ್ವರ ದೇವಸ್ಥಾನದ ಹತ್ತಿರ ತಲ್ಲೂರು ಕುಂದಾಪುರ ತಾಲೂಕು ರರ ಅಕ್ಕ ಕಾವೇರಿ ಭಟ್‌ (49) ಎಂಬುವವರನ್ನು ಹಲವು ವರ್ಷಗಳ ಹಿಂದೆ ಕಂಬದ ಕೋಣೆಯ ಗೋವಿಂದ ದೇವಸ್ಥಾನ ಎಂಬಲ್ಲಿರುವ ದತ್ತಾತ್ರೇಯ ಭಟ್‌ ಎಂಬುವವರಿಗೆ ಮದುವೆ ಮಾಡಿಕೊಟ್ಟಿರುವುದಾಗಿದೆ ಕಾವೇರಿ ಭಟ್‌ ರವರು ಆಗಾಗ ವಿಶ್ವನಾಥ ಕೆ ಭಟ್‌ ರರ ಮನೆಗೆ ಬಂದು ಹೋಗುತ್ತಿದ್ದರು, ದಿನಾಂಕ:17/08/2015 ರಂದು ಕಾವೇರಿ ಭಟ್‌ರವರ ಗಂಡನ ತಮ್ಮ ಶ್ರೀಪಾದ ಭಟ್‌ ಎಂಬುವವರು ವಿಶ್ವನಾಥ ಕೆ ಭಟ್‌ ರರಿಗೆ ಕರೆ ಮಾಡಿ ಕಾವೇರಿಯವರು ಮನೆ ಬಿಟ್ಟು ಹೋಗಿರುವುದಾಗಿ ತಿಳಿಸಿರುತ್ತಾರೆ,  ಕಾವೇರಿಯವರು ಅವರ ಗಂಡನ ಮನೆಯಲ್ಲು ಇರದೇ  ಮನೆಗೆ ಬಾರದೇ, ಸಂಬಂದಿಕರ ಮನೆಗೂ ಹೋಗದೆ ಕಾಣೆಯಾಗಿರುತ್ತಾರೆ. ಈ ಬಗ್ಗೆ ಬೈಂದೂರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ   227/2015 ಕಲಂ ಹೆಂಗಸು ಕಾಣೆ ಪ್ರಕರಣದಂತೆ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

  • ಉಡುಪಿ: ದಿನಾಂಕ: 23/08/2015 ರಂದು ಪಿರ್ಯಾದಿ ಕೀತ್ ಗೆಬ್ರಿಯಲ್ ಪೊರ್ಟಾಡೊ(19) ತಂದೆ: ಕೀನತ್ ಪೊರ್ಟಾಡೊ ವಾಸ: ಪ್ಲಾಮ್ ಗ್ರೋ ವಿಲ್ಲಾ .ಉಡುಪಿರವರು ತನ್ನ ಮಹೀಂದ್ರ ಡ್ಯೂರೋ ದ್ವಿಚಕ್ರ ವಾಹನ ಕೆಎ 19 ಇಸಿ 2761 ನೇದನ್ನು ಚಲಾಯಿಸುತ್ತಾ ಸ್ನೇಹಿತ ರಾಘವನನ್ನು ಸಹಸವಾರನನ್ನಾಗಿ ಕುಳ್ಳಿರಿಸಿ  ದೇವಸ್ಥಾನಕ್ಕೆಂದು ಬಂದು ಅಲ್ಲಿಂದ ವಾಪಾಸು ಮಣಿಪಾಲಕ್ಕೆ ಹೊಗುತ್ತಿರುವಾಗ 10:45 ಗಂಟೆಗೆ ಶಾರಾದ ಕಲ್ಯಾಣ ಮಂಟಪದ ಬಳಿಯ ಮೊರ್ ಸುಪರ್ ಮಾರ್ಕೆಟ್ ಶಾಪ್‌ನ ಎದುರಿನಲ್ಲಿ ಸಗ್ರಿರಸ್ತೆಯಿಂದ ಅಟೋ ರಿಕ್ಷ ನಂಬ್ರ ಕೆಎ 20 ಡಿ 4637 ನೇದನ್ನು ಅದರ ಚಾಲಕ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಒಮ್ಮೇಲೆ ಮುಖ್ಯ ರಸ್ತೆಗೆ ಬಂದು ತಿರುಗಿಸಿದ ಪರಿಣಾಮ ಪಿರ್ಯಾದಿದಾರರ ವಾಹನ ರಿಕ್ಷಾಕ್ಕೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದ ಪರಿಣಾಮ ಕೀತ್ ಗೆಬ್ರಿಯಲ್ ಪೊರ್ಟಾಡೊರವರಿಗೆ ಬಲಕಾಲಿನ ಮೊಣಗಂಟಿನ ಬಳಿ, ಹೊಟ್ಟೆ ,ಎಡಕೈ ಅಂಗೈ  ಹಾಗೂ ಹೆಬ್ಬೆರಳಿಗೆ ರಕ್ತಗಾಯವಾಗಿರುತ್ತದೆ, ಈ ಬಗ್ಗೆ ಉಡುಪಿ ಸಂಚಾರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ  90/2015 ಕಲಂ.279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: