Sunday, August 23, 2015

Daily Crime Reports As on 23/08/2015 at 17:00 Hrs

ಅಪಘಾತ ಪ್ರಕರಣ
  • ಹೆಬ್ರಿ: ಪಿರ್ಯಾದಿ ಪ್ರಸನ್ನ ಶೆಟ್ಟಿ(48) ತಂದೆ: ಭುಜಂಗ ಶೆಟ್ಟಿ ವಾಸ: ಶಿವಪುರ ಅಂಚೆ, ಕೆರೆಬೆಟ್ಟು ಗ್ರಾಮ, ಕಾರ್ಕಳ ತಾಲೂಕುರರ ಕೃಷರ್‌ ನಲ್ಲಿ ಕೆಲಸ ಮಡಿಕೊಂಡಿದ್ದ ಹರೀಶ್ ಎಂಬುವವರು ದಿನಾಂಕ 22/08/2015 ರಂದು ಕೆಎ 20 ಇಇ 8877 ನೇ ಮೋಟಾರ್‌ ಸೈಕಲಿನಲ್ಲಿ ಹೆಬ್ರಿಯಿಂದ ಹೊರಟು ಶಿವಪುರದ ವಿಜಯ ಆಹಾರೋದ್ಯಮದ ಎದುರು ತಲುಪುವಾಗ ಸಮಯ ಸಂಜೆ 5:45 ಗಂಟೆಗೆ ಕೆಎ 20 ಸಿ 507 ನೇ ಬಸ್ ನ್ನು ಅದರ ಚಾಲಕ ಸಿ.ಶಿವಕುಮಾರ್‌ ಎಂಬುವವರು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬದಿಗೆ ಬಂದು ಹರೀಶ್‌ ರವರು ಚಲಾಯಿಸುತ್ತಿದ್ದ ಮೋಟಾರ್‌ ಸೈಕಲ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಹರೀಶ್‌ ರವರು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು, ಗಾಯಗೊಂಡು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ, ಈ ಬಗ್ಗೆ ಹೆಬ್ರಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ  79/15  ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಹಿರಿಯಡ್ಕ: ಪಿರ್ಯಾದಿ ಶ್ರೀಮತಿ ಸಂಪಾವತಿ (45)  ವಾಸ: ಮಾತೃ ಪ್ರಸಾದ್ ನಿಲಯ, ದೂಪದಕಟ್ಟೆ, ಬೈರಂಪಳ್ಳಿ ಗ್ರಾಮ, ಉಡುಪಿ ತಾಲೂಕು ಇವರ ಗಂಡ ಸದಾಶಿವ ಶೆಟ್ಟಿ ರವರು (52) ತನ್ನ ಅತ್ತೆ, ಪತ್ನಿ ಮತ್ತು ಎರಡು  ಮಕ್ಕಳೊಂದಿಗೆ ಬೈರಂಪಳ್ಳಿ  ಗ್ರಾಮದ ದೂಪದಕಟ್ಟೆಯಲ್ಲಿ  ವಾಸವಾಗಿದ್ದು, ಸದಾಶಿವ ಶೆಟ್ಟಿ ರವರಿಗೆ ಹೃದಯ ಸಂಬಂದಿ ಖಾಯಿಲೆಯಿಂದ ಬಳಲುತ್ತಿದ್ದು, ಇದೇ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 23/08/2015 ರಂದು ಬೆಳಿಗ್ಗೆ 08.00 ಗಂಟೆಯಿಂದ 08.30 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ದನದ ಕೊಟ್ಟಿಗೆಯಲ್ಲಿನ ಪಕ್ಕಾಸಿಗೆ  ಹಗ್ಗದಿಂದ ಕುತ್ತಿಗೆಗೆ  ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ, ಈ ಬಗ್ಗೆ ಹಿರಿಯಡ್ಕ ಠಾಣೆ ಯು.ಡಿ.ಆರ್‌ ನಂಬ್ರ 16/2015  ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: