Sunday, August 23, 2015

Daily Crime Reports As on 23/08/2015 at 07:00 Hrs

ಅಪಘಾತ ಪ್ರಕರಣ
  • ಕೊಲ್ಲೂರು: ಪಿರ್ಯಾದಿದಾರರಾದ ಗಣೇಶ್‌ ಆಚಾರಿ (19), ತಂದೆ: ದಿ.ಆನಂದ ಆಚಾರಿ, ವಾಸ: ಮಾರಣಕಟ್ಟೆ ಚಿತ್ತೂರು ಗ್ರಾಮ ಕುಂದಾಪುರ ತಾಲೂಕು ಇವರು  ದಿನಾಂಕ 21/08/2015 ರಂದು ಕೆಲಸ ಮುಗಿಸಿ ಮಾರಣಕಟ್ಟೆಯಲ್ಲಿರುವ ತನ್ನ ಮನೆಗೆ ಹೋಗುತ್ತಿರುವಾಗ ಸಂಜೆ 05:20 ಗಂಟೆಗೆ ಕುಂದಾಪುರ ತಾಲೂಕು ಚಿತ್ತೂರು ಗ್ರಾಮದ ಮಾರಣಕಟ್ಟೆಯ ರಾಮಚಂದ್ರ ಭಟ್‌ರ ಮನೆಯ ಬಳಿ ತಲುಪುವಾಗ ಎದುರಿನಿಂದ ಮಾರಣಕಟ್ಟೆ ಕಡೆಯಿಂದ ಚಿತ್ತೂರು ಕಡೆಗೆ ಬರುತ್ತಿದ್ದ ಕೆಎ 15 ಇ 5482 ನೇ RX 100 ಮೋಟಾರು ಸೈಕಲ್‌ ಸವಾರನು ತನ್ನ ಬೈಕ್‌ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಮೇಲೆ ನಿಂತಿರುವ ದನಕ್ಕೆ ಡಿಕ್ಕಿ ಹೊಡೆದು ನಂತರ ಗಣೇಶ್‌ ಆಚಾರಿಯವರ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಗಣೇಶ್‌ ಆಚಾರಿಯವರು ಬೈಕ್‌ ಸಮೇತ ರಸ್ತೆಯ ಎಡ ಭಾಗಕ್ಕೆ ಬಿದ್ದು ಎಡಗೈ ಮೂಳೆ ಮುರಿತ ಹಾಗೂ ಗಲ್ಲಕ್ಕೆ ತರಚಿದ ಗಾಯ ಮತ್ತು ಎಡ ಬದಿಯ ಕಾಲರ್‌ ಬೋನ್‌ ತುಂಡಾಗಿದ್ದು ಚಿಕಿತ್ಸೆಯ ಬಗ್ಗೆ ಕುಂದಾಪುರ ವಿನಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 97/2015 ಕಲಂ:279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೇ ಪ್ರಕರಣ
  • ಕೋಟ: ದಿನಾಂಕ 22/08/2015 ರಂದು ಪಿರ್ಯಾದಿದಾರರಾದ ಪಿ.ಶಂಬು ಪೂಜಾರಿ (53), ತಂದೆ: ದಿ.ಐತ ಪೂಜಾರಿ, ವಾಸ: ಮಿತಾ, ಪಡುಕೆರೆ, ಪಾರಂಪಳ್ಳಿ ಗ್ರಾಮ, ಉಡುಪಿ ತಾಲೂಕು ಇವರು ಹೇರಿಕುದ್ರುವಿನಲ್ಲಿರುವ ಅವರ ಹೆಂಡತಿಯ ಮನೆಗೆ ಹೋಗಿರುವಾಗ, ಅವರು ವಾಸವಿರುವ ಉಡುಪಿ ತಾಲೂಕು ಪಾರಂಪಳ್ಳಿ ಗ್ರಾಮದ ಪಡುಕೆರೆಯ ಮಿತಾ ಎಂಬ 4/143 ನಂಬ್ರದ ಕಟ್ಟಡಕ್ಕೆ ಆಪಾದಿತರಾದ 1) ಜಗನ್ನಾಥ ಪೂಜಾರಿ, 2) ಸವಿತಾ, 3) ವನಜಾ ಪೂಜಾರ್ತಿ, 4) ವಿನೋದ, 5) ರಮಾನಂದ ಹಾಗೂ 6) ಭರತ್ ಕುಮಾರ್ ಇವರುಗಳು ಕೈಗಳಲ್ಲಿ ಮಾರಕಾಯುಧಗಳನ್ನು ಹಿಡಿದುಕೊಂಡು ಪಿ.ಶಂಬು ಪೂಜಾರಿಯವರ ಮನೆಗೆ ಅಕ್ರಮ ಪ್ರವೇಶ ಮಾಡಿ ಮನೆಯ ಛಾವಣಿಯನ್ನು ಹಾನಿಗೊಳಿಸಿರುವುದಾಗಿ ಪಿ.ಶಂಬು ಪೂಜಾರಿಯವರ ಅಣ್ಣ ರಾಜು ಪೂಜಾರಿಯವರು ಮೊಬೈಲ್ ಕರೆ ಮಾಡಿ ತಿಳಿಸಿದ ಮೇರೆಗೆ ಪಿ.ಶಂಬು ಪೂಜಾರಿಯವರು ಅವರ ಹೆಂಡತಿ ಗೀತಾ ಹಾಗೂ ಮಗ ಗಗನ್ ರವರೊಂದಿಗೆ ಬೆಳಿಗ್ಗೆ 09.00 ಗಂಟೆಗೆ ಬಂದು ನೋಡುವಾಗ, ಆಪಾದಿತರು ಮಾರಕಾಯುಧಗಳನ್ನು ಹಿಡಿದುಕೊಂಡು ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಕೋಟ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 189/2015 ಕಲಂ: 143, 147, 148, 341, 506(2), 448, 504, 427 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ

No comments: