Friday, August 21, 2015

Daily Crime Reports As on 21/08/2015 at 19:30 Hrs

ಜುಗಾರಿ ಪ್ರಕರಣ
  • ಕೋಟ: ದಿನಾಂಕ 21/08/2015 ರಂದು ಮದ್ಯಾಹ್ನ 3:10 ಗಂಟೆಗೆ ಶ್ರೀಮತಿ ಮುಕ್ತಾಬಾಯಿ ಮ.ಎ.ಎಸ್.ಐ ಕೋಟ ಠಾಣೆ ಇವರು ಠಾಣೆಯಲ್ಲಿರುವಾಗ ಉಡುಪಿ ತಾಲೂಕು ಶಿರಿಯಾರ ಗ್ರಾಮದ ಕಾಜರಳ್ಳಿ 5 ಸೆಂಟ್ಸ್ ಸಮೀಪ ಸರಕಾರಿ ಬಾವಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪಿಟ್ ಜುಗಾರಿ ಆಟ ಆಡುತ್ತಿರುವುದಾಗಿ ದೊರೆತ ಖಚಿತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ತೆರಳಿ ಇಸ್ಪಿಟ್ ಜುಗಾರಿ ಆಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು 15:30 ಗಂಟೆಗೆ ದಾಳಿ ನಡೆಸಿ ಇಸ್ಪಿಟ್ ಜುಗಾರಿ ಆಟ ಆಡುತ್ತಿದ್ದ 1) ಮಂಜುನಾಥ ಶೆಟ್ಟಿ, 2) ಬಚ್ಚು ಪೂಜಾರಿ ಹಾಗೂ 3) ಶೇಖರ ಪೂಜಾರಿ ಎಂಬುವವರನ್ನು ದಸ್ತಗಿರಿ ಮಾಡಿ ಆಪಾದಿತರಿಂದ ಇಸ್ಪಿಟ್ ಜುಗಾರಿ ಆಟಕ್ಕೆ ಬಳಸುತ್ತಿದ್ದ ಇಸ್ಪಿಟ್ ಎಲೆ-52, ನೆಲಕ್ಕೆ ಹಾಸಿದ ಬಿಳಿ ಬಣ್ಣದ ಹಳೆಯ ಕರ್ಚಿಪ್-1, ನಗದು ರೂಪಾಯಿ 2,680/- ನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 186/2015 ಕಲಂ:87 ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಕಾರ್ಕಳ: ಶಿವಣ್ಣ ಶೆಟ್ಟಿ (72), ವಾಸ; ಅಡ್ಡೋಳಿಮಾರ್ ಎರ್ಲಪಾಡಿ ಗ್ರಾಮ ಕಾರ್ಕಳ ತಾಲೂಕು ಎಂಬವರು ದಿನಾಂಕ 21/08/2015 ರಂದು 13:30 ಗಂಟೆಯ ಮೊದಲು ತನ್ನ ವಾಸದ ಮನೆಯ ಛಾವಡಿಯ ಜಂತಿಗೆ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೋಲಿಸ್ ಠಾಣೆ ಯುಡಿಆರ್ ಕ್ರಮಾಂಕ 27/2015 ಕಲಂ:174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ
  • ಕುಂದಾಪುರ: ದಿನಾಂಕ 21/08/2015 ರಂದು ಪಿರ್ಯಾದಿದಾರರಾದ ಮಹಮ್ಮದ್‌ ಶರೀಫ್‌ (50), ತಂದೆ: ದಿ.ಅಬ್ದುಲ್‌ ಖಾದರ್‌, ವಾಸ: ಮಸೀದಿ ಬಳಿ, ಎಂ. ಕೋಡಿ, ಕಸಬಾ ಗ್ರಾಮ, ಕುಂದಾಪುರ ತಾಲೂಕು ಇವರು ಕುಂದಾಪುರ ತಾಲೂಕು ಕಸಬಾ ಗ್ರಾಮದ ಎಂ. ಕೋಡಿ ಎಂಬಲ್ಲಿ ಜಬ್ಬರ್‌ ಎಂಬವರ ಮನೆಯ ರಿಪೇರಿ ಕೆಲಸಕ್ಕಾಗಿ ತಂದಿದ್ದ ಸಿಮೆಂಟಿನ ಹೋಲೊ ಬ್ಲಾಕ್‌ ಕಲ್ಲುಗಳನ್ನು ರಸ್ತೆ ಬದಿಯಲ್ಲಿಂದ ತೆಗೆದುಕೊಂಡು ಹೋಗುವ ಸಮಯ ಮಧ್ಯಾಹ್ನ 12:00 ಗಂಟೆಗೆ ಆಪಾದಿತ ಕೋಡಿ ರಂಜಿತ್‌ ಎಂಬಾತನು ಆತನ ಕಾರು ನಂಬ್ರ ಕೆಎ 20 ಜಡ್‌ 3729 ನೇದನ್ನು ಕುಂದಾಪುರ ಕಡೆಯಿಂದ ಕೋಡಿ ಕಡೆಗೆ ಚಲಾಯಿಸಿಕೊಂಡು ಬಂದು, ಕಾರನ್ನು ನಿಲ್ಲಿಸಿ, ‘ಕಾರಿನ ಅಡಿಗೆ ಬಿದ್ದು ಸಾಯುತ್ತಿಯಾ?’ ಎಂದು ಕೇಳಿದ್ದಕ್ಕೆ ಮಹಮ್ಮದ್‌ ಶರೀಫ್‌ ರವರು ‘ನಾನು ಸಾಯುವುದಿಲ್ಲ, ನಿಧಾನ ಕಾರನ್ನು ಚಲಾಯಿಸಿಕೊಂಡು ಹೋಗು ಎಂದಾಗ ಆಪಾದಿತನು ಕಾರಿನಿಂದ ಇಳಿದು ಬಂದು ಮಹಮ್ಮದ್‌ ಶರೀಫ್‌ ರವರು ಮುಂದಕ್ಕೆ ಹೋಗದಂತೆ ಅಡ್ಡಗಟ್ಟಿ, ಏಕಾಏಕಿಯಾಗಿ ಕೈಗಳಿಂದ ಬಲಕಣ್ಣಿನ ಮೇಲೆ, ಬಲ ಕೈಗೆ, ಬೆನ್ನಿಗೆ ಹೊಡೆದು, ಎಳೆದಾಡಿ ದೂಡಿ ಹಾಕಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಕುಂದಾಪುರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 294/2015  ಕಲಂ: 341, 323, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.       

No comments: