Friday, August 21, 2015

Daily Crime Reports As on 21/08/2015 at 17:00 Hrs



ಅಪಘಾತ ಪ್ರಕರಣ

  • ಬೈಂದೂರು: ದಿನಾಂಕ 20/08/2015 ರಂದು ರಾತ್ರಿ ಸಮಯ ಪಿರ್ಯಾದಿ ವಸಂತ ಶೆಟ್ಟಿ ಇವರು ಅವರ ಸ್ನೇಹಿತ ಸುಬ್ರಹ್ಮಣ್ಯ ಶೆಟ್ಟಿರವರ ಬಾಬ್ತು ಕೆ20 ಯು 9792ನೇ ಮೋಟಾರು ಸೈಕಲ್‌ನ್ನು ಕಾಲ್ತೋಡಿನಿಂದ ಕಂಬದಕೋಣೆ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವಾಗ ರಾತ್ರಿ ಸುಮಾರು 8:50 ಗಂಟೆ ಸಮಯಕ್ಕೆ ಕಂಬದಕೋಣೆ ಗ್ರಾಮದ ಹೇರಾಂಜಾಲು 5 ಸೆಂಟ್ಸ್ ಬೋರ್‌ವೆಲ್ ಬಳಿ ತಲುಪುವಾಗ ಎದುರಿನಿಂದ ಅಂದರೆ ಕಂಬದಕೋಣೆ ಕಡೆಯಿಂದ ಕಾಲ್ತೋಡು ಕಡೆಗೆ ಓಮ್ನಿ ಕಾರು ನಂಬ್ರ ಕೆಎ 02 ಎಂಹೆಚ್ 8470ನೇದರ ಓಮ್ನಿ ಚಾಲಕ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ತೀರಾ ಬಲ ಬದಿಗೆ ಬಂದು ಪಿರ್ಯಾದಿದಾರರ ಮೋಟಾರು ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು, ಪಿರ್ಯಾದಿದಾರರು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ತಲೆಗೆ, ಎರಡೂ ಕಾಲಿನ ಮಣೆಗಂಟಿಗೆ, ಎಡ ಕಾಲಿನ ಮೊಣಗಂಟು, ಬಲ ಕೈಯ ಮೊಣಗಂಟಿಗೆ ರಕ್ತ ಗಾಯ, ಬೆನ್ನು ಮೂಳೆಗೆ ಒಳಜಖಂ ಆಗಿದ್ದವರನ್ನು ಸುಧಾಕರ ಶೆಟ್ಟಿರವರು 108 ಅಂಬುಲೆನ್ಸ್ ನಲ್ಲಿ ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುತ್ತಾರೆ ಹಾಗೂ ಪಿರ್ಯಾದಿದಾರರರು ಸವಾರಿ ಮಾಡಿಕೊಂಡು ಬಂದಿದ್ದ ಮೋಟಾರ್‌ ಸೈಕಲ್ ಜಖಂ ಗೊಂಡಿರುತ್ತದೆ. ಈ ಬಗ್ಗೆ ಬೈಂದೂರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ  225/2015 ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾರ್ಕಳ: ಪಿರ್ಯಾದಿ ಕಿಶೋರ ಎನ್ ಮತ್ತು ರಕ್ಷಿತ್ ಎಂಬುವರು ದಿನಾಂಕ:20/08/2015 ರಂದು ಸಂಜೆ ಸುಮಾರು 4:30 ಗಂಟೆಗೆ  ಪಿರ್ಯಾದಿದಾರರ  ಬಾಬ್ತು ಕೆ ಎ 19 ಪಿ 873 ನೇ ನಂಬ್ರದ ಮಾರುತಿ ಕಾರಿನಲ್ಲಿ ಕೆಲಸ ಮುಗಿಸಿ ಕುದುರೆಮುಖದಿಂದ ಮೂಡಬಿದ್ರೆ ಕಡೆಗೆ ಬರುವರೇ ಮಾಳಾ ಮೂಳ್ಳೂರು ಘಾಟಿನ ಓಟೆಹಳ್ಳ ಎಂಬಲ್ಲಿನ ತಿರುವಿನಲ್ಲಿ  ಎದುರುಗಡೆಯಿಂದ ಅಂದರೆ ಕಾರ್ಕಳ ಕಡೆಯಿಂದ ಶ್ರಂಗೇರಿ ಕಡೆಗೆ ಹೋಗುತ್ತಿರುವ ಕೆಎ 19 ಡಿ 7607 ನಂಬ್ರದ ಇಚರ್ ಲಾರಿಯ ಚಾಲಕ ರವಿ ಎಂಬುವನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು  ಮಾರುತಿ ಕಾರಿಗೆ ಢಿಕ್ಕಿ ಹೊಡೆದ  ಪರಿಣಾಮದಿಂದ ಕಾರಿನ ಮುಂಭಾಗ  ಜಖಂ ಗೊಂಡಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ  139/2015 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

  • ಕೋಟ: ದಿನಾಂಕ:20/08/2015 ರಾತ್ರಿ 10:30 ಗಂಟೆಗೆ  ಪಿರ್ಯಾದಿ ಶ್ರೀಮತಿ ಬಾಬಿ ಶೆಡ್ತಿ ಇವರ ಗಂಡ ಚಂದ್ರಶೆಟ್ಟಿ ಹಾಗೂ ನೆರೆಮನೆಯ ಹೆರಿಯಣ್ಣ ಶೆಟ್ಟಿ ಯವರೊಂದಿಗೆ ಕುಂದಾಪುರ ತಾಲೂಕು ಕಳ್ಳಾಡಿ ಹರ್ಕಾಡಿ ಗ್ರಾಮದ ಸಾಲಿಮಕ್ಕಿ ಎಂಬಲ್ಲಿನ ಅವರ ಮನೆಯಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ಆಪಾದಿತ ಚಂದ್ರ ಆಚಾರಿ ಹಾಗೂ ಭಜರಂಗದಳ ಎಂದು ಹೇಳಿ ಕೊಳ್ಳುವ ಇತರ 15 ಜನ  ಪಿರ್ಯಾದಿದಾರರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಚಂದ್ರ ಶೆಟ್ಟಿ ಹಾಗೂ ಹೆರಿಯಣ್ಣ ಶೆಟ್ಟಿಯವರನ್ನು ತಡೆದು ನಿಲ್ಲಿಸಿ ಕೈಯಿಂದ ಹೊಡೆದು ಅವಾಚ್ಯವಾಗಿ ಬೈದು ದೂಡಿ ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಚಂದ್ರ ಶೆಟ್ಟಿ ಹಾಗೂ ಹೆರಿಯಣ್ಣ ಶೆಟ್ಟಿಯವರನ್ನು ಆಪಾದಿತರ ವಾಹನದಲ್ಲಿ ಕರೆದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಕೋಟ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ  185/2015 ಕಲಂ:143,147,148,354(ಎ)(1),504,506,149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: