Friday, August 21, 2015

Daily Crime Reports As on 21/08/2015 at 07:00 Hrs

ಅಪಘಾತ ಪ್ರಕರಣಗಳು
  • ಮಣಿಪಾಲ : ಪಿರ್ಯಾದಿದಾರಾದ ಅವಿನಾಶ್‌, ತಂದೆ: ಶೇಖರ, ವಾಸ: ಕಟ್ಟಿಂಗೇರಿ, ಮೂಡುಬೆಳ್ಳೆ ಗ್ರಾಮ, ಉಡುಪಿ ಇವರು  ದಿನಾಂಕ 20/08/2015 ರಂದು ಕೆಎ 20 ಯು 6962 ನೇ ಮೋಟಾರ್ ಸೈಕಲ್‌ನಲ್ಲಿ ಪ್ರೀತಮ್‌‌ ರವರನ್ನು ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಮರ್ಣೆ ಸೊಸೈಟಿ ಕಡೆಯಿಂದ ತನ್ನ ಮನೆ ಕಡೆಗೆ ಬೈಕ್‌ನ್ನು ಸವಾರಿ ಮಾಡಿಕೊಂಡು ಮಧ್ಯಾಹ್ನ 12:00 ಗಂಟೆಯ ಸಮಯಕ್ಕೆ ಪಟ್ಲ ಕ್ರಾಸ್ ಬಳಿ ತಲುಪುವಾಗ ಪಟ್ಲ ರಸ್ತೆಯಿಂದ ಕೆಎ 20 ಪಿ 4857 ನೇ ಕಾರನ್ನು ಅದರ ಚಾಲಕನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಮುಖ್ಯ ರಸ್ತೆಗೆ ಒಮ್ಮೆಲೆ ಬಂದು ಮರ್ಣೆ ಕಡೆಗೆ ತಿರುಗಿಸಿದ ಪರಿಣಾಮ ಕಾರು ಬೈಕ್‌ಗೆ ಢಿಕ್ಕಿ ಹೊಡೆದು ಅವಿನಾಶ್‌ರವರು ಹಾಗೂ ಹಿಂಬದಿ ಸವಾರ ಪ್ರೀತಮ್‌ ಬೈಕ್ ಸಮೇತ ರಸ್ತೆಗೆ ಬಿದ್ದು, ಪ್ರೀತಮ್‌‌ನ ಬಲಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು, ಎಡಕೈ ಮುಂಗೈಗೆ ಮತ್ತು ಬಲಕೆನ್ನೆಗೆ ತರಚಿದ ಗಾಯವಾಗಿರುತ್ತದೆ. ಅವಿನಾಶ್‌ರವರ ಬಲಕಾಲಿಗೆ ಗುದ್ದಿದ ಒಳನೋವು ಉಂಟಾಗಿರುತ್ತದೆ. ಪ್ರೀತಮ್‌‌ನಿಗೆ ಅಪಘಾತದಿಂದ ಆದ ಗಾಯದ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 167/2015 ಕಲಂ: 279,337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಸಂದೇಶ್ ಪೂಜಾರಿ (25), ತಂದೆ: ಶೇಖರ್ ಪೂಜಾರಿ, ವಾಸ:ಜಿಎನ್‌ ನಗರ 4ನೇ ಕ್ರಾಸ್ ಯನಗುಡ್ಡೆ ಕಟಪಾಡಿ, ಉಡುಪಿ ಇವರು ದಿನಾಂಕ 18/08/2015 ರಂದು ರಾತ್ರಿ 7:30 ಗಂಟೆ ಸಮಯಕ್ಕೆ ತನ್ನ ಚಿಕ್ಕಮ್ಮನ ಮಗ ಅಕ್ಷಯನೊಂದಿಗೆ ಉಡುಪಿ ವಿದ್ಯೋದಯ ಶಾಲೆಯ ಎದುರು ಡಾಮರು ರಸ್ತೆಯ ಬದಿಯಲ್ಲಿರುವ ಮಣ್ಣು ರಸ್ತೆಯಲ್ಲಿ ಮಾತನಾಡುತ್ತಿರುವಾಗ ನಾಗಬನದ ಕಡೆಯಿಂದ ವಿದ್ಯೋದಯ ಶಾಲೆಯ ಕಡೆಗೆ ಕೆಎ 20 ಇಸಿ 392 ನೇ ಮೋಟಾರ್ ಸೈಕಲ್ ಸವಾರ ಗಣೇಶ್ ಎಂಬುವವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅಕ್ಷಯನಿಗೆ ಡಿಕ್ಕಿ ಹೊಡೆದ ಪರಿಣಾಮ ಅಕ್ಷಯನು ನೆಲಕ್ಕೆ ಬಿದ್ದು, ಕಣ್ಣು, ಮುಖ, ಬಲಕಾಲುಗಳಿಗೆ ರಕ್ತಗಾಯಗಳಾಗಿರುತ್ತವೆ. ನಂತರ ಸಂದೇಶ್ ಪೂಜಾರಿ ಮತ್ತು ಅಲ್ಲಿ ಸೇರಿದವರು ಅಕ್ಷಯರವರನ್ನು ಕೆಎಮ್‌ಸಿ ಆಸ್ಪತ್ರೆಗೆ ಚಿಕ್ಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 88/2015 ಕಲಂ: 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 20/08/2015 ರಂದು ಸಂಜೆ 6:45 ಗಂಟೆಗೆ ಕುಂದಾಪುರ ತಾಲೂಕು ವಡೇರಹೋಬಳಿ ಬಿಸಿ ರಸ್ತೆಯ  ಬೈಲು ಚಿಕ್ಕಮ್ಮ ದೇವಸ್ಥಾನ ಬಳಿ ರಾಜು ಮಾಸ್ಟರ್ ರವರ ಮನೆಯ ಎದುರುಗಡೆ ರಾಜ್ಯ ರಸ್ತೆಯಲ್ಲಿ ಆಪಾದಿತ ಉದಯ ಪೂಜಾರಿ  ಎಂಬುವವರು KA 20 EE 8428 ನೇ ಬೈಕಿನಲ್ಲಿ ವಸಂತ ಪೂಜಾರಿಯರವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಕುಂದಾಪುರ ಬಸ್ರೂರು ಮೂರು ಕೈ ಕಡೆಯಿಂದ ಕೋಣಿ ಕಡೆಗೆ  ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬರುತ್ತಿರುವಾಗ ರಸ್ತೆಯಲ್ಲಿ ನಾಯಿಯೊಂದು ರಸ್ತೆಗೆ ಅಡ್ಡ ಬಂದಾಗ ಉದಯ ಪೂಜಾರಿ ರವರು ಒಮ್ಮಲೆ ಬ್ರೇಕ್‌ ಹಾಕಿದ ಕಾರಣ ಬೈಕ್‌ ಸ್ಕಿಡ್ ಆಗಿ ರಸ್ತೆಯಲ್ಲಿ ಅಡ್ಡ ಬಿದ್ದು ವಸಂತ ಪೂಜಾರಿಯ ಬಲಕಾಲಿನ ಮುಂಗಾಲು ಗಂಟಿನ ಕೆಳಗೆ ಕಾಲಿಗೆ, ತಲೆಗೆ ಹಾಗೂ ಮೈ ಕೈಗೆ ರಕ್ತಗಾಯ ಹಾಗೂ ಒಳ ನೋವು ಹಾಗೂ ಉದಯ ಪೂಜಾರಿಯ ಸೊಂಟ ಹಾಗೂ ಬೆನ್ನಿಗೆ ಒಳ ನೋವು ಆಗಿ ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 101/2015 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣಗಳು
  • ಮಣಿಪಾಲ: ದಿನಾಂಕ 19/08/2015 ರಂದು ಸಂಜೆ 7:15 ಗಂಟೆಗೆ ಪಿರ್ಯಾದಿದಾರರಾದ ಕೃಷ್ಣ ಪೂಜಾರಿ, ತಂದೆ: ಕುಟ್ಟಿ ಪೂಜಾರಿ, ವಾಸ: ನಂ.304, ಶರ್ವರಿ ಕಾಂಪ್ಲೆಕ್ಸ್‌, ಅಲೆವೂರು ರಸ್ತೆ, ಟ್ಯಾಪ್ಲಿ ಕ್ರಾಸ್, ಮಣಿಪಾಲ, ಉಡುಪಿ ಇವರ ಪರಿಚಯದ ಪ್ರಭಾತ್ ಎಂಬುವವರು ಕೃಷ್ಣ ಪೂಜಾರಿಯವರ ತಾಯಿ ಒಬ್ಬರೇ ಇರುವಾಗ ಮನೆಗೆ ಬಂದು ನೀರು ಕೇಳಿ, ಮನೆಯೊಳಗೆ ನುಗ್ಗಿ ಮನೆಯಲ್ಲಿದ್ದ 2 ನೊಕೀಯಾ ಮೊಬೈಲ್‌ ಸೆಟ್‌, ಟ್ಯಾಬ್‌ ಬ್ಲಾಕ್ಬೆರಿ, ರೂಪಾಯಿ 4,000/- ಹಣ, ಲ್ಯಾಪ್‌ಟಾಪ್‌ ಹಾಗೂ ಎಲೆಕ್ಟ್ರಾನಿಕ್‌ ಸ್ಟೌಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಸೊತ್ತುಗಳ ಮೌಲ್ಯ 46,000/- ಆಗಿರುತ್ತದೆ. ಈ ಬಗ್ಗೆ ಮಣಿಪಾಲ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 168/2015 ಕಲಂ: 381 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 21/07/2015 ರಂದು 18:30 ಗಂಟೆಯಿಂದ 19:30 ಗಂಟೆಯ ಮಧ್ಯದ ಅವಧಿಯಲ್ಲಿ ಉಡುಪಿ ತಾಲೂಕು ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಆಕಾಶವಾಣೆ ಬಳಿ ಇರುವ ಬಾಡಿ ಜೊನ್‌ ಜಿಮ್‌ ವ್ಯಾಯಾಮ ಶಾಲೆಯ ಡ್ರೆಸಿಂಗ್‌ ರೂಮ್‌ನಲ್ಲಿ  ಪಿರ್ಯಾದಿದಾರರಾದ ಗಣೇಶ ಪೂಜಾರಿ (25), ತಂದೆ: ಸಂಜೀವ ಪೂಜಾರಿ, ವಾಸ: ಶ್ರೀಗಣೇಶ ನಿಲಯ ಬ್ರಹ್ಮಾವರ ಅಂಚೆ ಹಂದಾಡಿ,  ಉಡುಪಿ ತಾಲೂಕು ಇವರು ಹಾಗೂ ರಾಘವೇಂದ್ರ ಮತ್ತು ಶಶಿಧರ ಎಂಬುವವರು ಇಟ್ಟಿದ್ದ ನೋಕಿಯಾ ಲೂಮಿಯಾ ಬ್ಯ್ಲಾಕ್‌ 630 ಮೊಬೈಲ್‌-1, ಮೈಕ್ರೋಮ್ಯಾಕ್ಸ್ ಮೊಬೈಲ್‌-1, ಸ್ಯಾಮ್‌‌ಸಂಗ್‌ ಮೊಬೈಲ್‌-1, ಮೊಬೈಲ್‌ಗಳ ಒಟ್ಟು ಮೌಲ್ಯ ರೂಪಾಯಿ 18,700/- ಹಾಗೂ ಚುನಾವಣಾ ಗುರುತು ಪತ್ರ, ಆಧಾರ್‌ ಕಾರ್ಡ್‌, ಇತರ ಕಾರ್ಡಗಳು ಮತ್ತು ಪರ್ಸ್‌ಗಳು-2, ಪರ್ಸ್‌ನಲ್ಲಿದ್ದ ಒಟ್ಟು ರೂಪಾಯಿ 1,200/- ನ್ನು ಅಪಾದಿತ ಇಬ್ರಾಹಿಂ ತಾಹಿಫ್‌ ಕಳವು ಮಡಿಕೊಂಡು ಹೋಗಿದ್ದು ಕಳವಾದ ಒಟ್ಟು ಸೊತ್ತುಗಳ ಮೌಲ್ಯ ರೂಪಾಯಿ 20,000/- ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ  167/2015 ಕಲಂ: 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಮನುಷ್ಯಕಾಣೆ ಪ್ರಕರಣ


  • ಉಡುಪಿ: ಪಿರ್ಯಾದಿದಾರರಾದ ಶ್ರೀಮತಿ ಲಕ್ಷ್ಮೀ (24), ಗಂಡ: ಯಲ್ಲಪ್ಪ, ವಾಸ: ಸುಂದರಿ ಅಪಾರ್ಟ್‌ಮೆಂಟ್ ಕೆಳ ಅಂತಸ್ತು ಮಲ್ಲಿಕಟ್ಟೆ 1ನೇ ಕ್ರಾಸ್ ಮಂಗಳೂರು ಇವರ ಗಂಡನಾದ ಯಲ್ಲಪ್ಪನವರಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ದಿನಾಂಕ 19/08/2015 ರಂದು 14:00 ಗಂಟೆಗೆ ಉಡುಪಿಯ ಬ್ರಹ್ಮಗಿರಿಯ ನಾಗನಕಟ್ಟೆ ಬಳಿ ಇರುವ ಶೆಡ್ಡಿನಲ್ಲಿ ಇರಿಸಿಕೊಂಡಿದ್ದು, ಮೈಲಾರಪ್ಪನವರು ಯಲ್ಲಪ್ಪನನ್ನು ಪ್ರಭುರವರೊಂದಗೆ ಬಿಟ್ಟು ಮಂಗಳೂರಿಗೆ ಹೋಗಿರುತ್ತಾರೆ ಆದರೆ ಸಮಯ 18:00 ಗಂಟೆಗೆ ಪ್ರಭುರವರ ಜೊತೆಯಲ್ಲಿ ಮಲಗಿದ್ದ ಯಲ್ಲಪ್ಪರವರು ಮನೆಯಲ್ಲಿ ಇಲ್ಲದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಠಾಣೆ ಅಪರಾಧ ಕ್ರಮಾಂಕ 183/2015 ಕಲಂ ಮನುಷ್ಯ ಕಾಣೆ  ಯಂತೆ ಪ್ರಕರಣ ದಾಖಲಾಗಿರುತ್ತದೆ. 
ಇತರೇ ಪ್ರಕರಣಗಳು
  • ಬ್ರಹ್ಮಾವರ: ದಿನಾಂಕ 20/8/2015 ರಂದು 14:00 ಗಂಟೆಗೆ ಉಡುಪಿ ತಾಲೂಕು ಹೇರೂರು ಗ್ರಾಮದ ದೂಪದ ಕಟ್ಟೆ, ಮಂಜುನಾಥ ಪೇಟ್ರೋಲ್ ಬಂಕ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅನಂತಪದ್ಮನಾಭ ಕೆ.ವಿ ಪೊಲೀಸ್ ಉಪ ನಿರೀಕ್ಷಕರು, ಬ್ರಹ್ಮಾವರ ಪೊಲೀಸ್ ಠಾಣೆ ಇವರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ನಲ್ಲಿರುವಾಗ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ 407 ಗೂಡ್ಸ್ ಟೆಂಪೊ ನಂಬ್ರ ಕೆಎ 20 6518 ನೇದರಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಸಿಕ್ಕ ಮಾಹಿತಿಯಂತೆ ಕುಂದಾಪುರ ಕಡೆಯಿಂದ ಬಂದ ಗೂಡ್ಸ್ ಟೆಂಪೊವನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಆರೋಪಿ ಮೊಹಮ್ಮದ್.ಕೆ (53), ತಂದೆ: ದಿ|| ಹಾಜಿ ಮೊಯಿದ್ದೀನ್, ವಾಸ: ಕುಳಾಯಿತೋಟ, ಮುಂಡಿಲಚಿಲ್ , ಮಂಗಳೂರು ತಾಲೂಕು ಇವನು ಟೆಂಪೊದ ಚಾಲಕನಾಗಿ 2 ಕೋಣಗಳನ್ನು ತುಂಬಿ, ಜಾನುವಾರುಗಳನ್ನು ಸಾಗಿಸಲು ಯಾವುದೇ ಪರವಾನಿಗೆ ಇಲ್ಲದೇ ಕೋಣಗಳನ್ನು ಇಕ್ಕಟ್ಟಾಗಿ ಹಿಂಸೆಯಾಗುವಂತೆ ಹಗ್ಗದಿಂದ ಕಟ್ಟಿ ಸಾಗಿಸುತ್ತಿರುವುದು ಕಂಡು ಬಂದ ಮೇರೆಗೆ ಜಾನುವಾರುಗಳನ್ನು ಮತ್ತು ಗೂಡ್ಸ್ ಟೆಂಪೊವನ್ನು ಸ್ವಾಧೀನಪಡಿಸಿಕೊಂಡು ಚಾಲಕ ಮೊಹಮ್ಮದ್ ಕೆ. ಇವನನ್ನು ವಶಕ್ಕೆ ಪಡೆದುಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 166/2015 ಕಲಂ: 11 (1) (ಡಿ) ಪ್ರಾಣಿ ಹಿಂಸೆ ನಿಷೇದ ಕಾಯ್ದೆ 1960 ಮತ್ತು ಕಲಂ: 192 (ಎ)  ಐ.ಎಮ್.ವಿ.ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಚಂದ್ರ ಆಚಾರಿ (34), ತಂದೆ:ಕೃಷ್ಣಯ್ಯ ಆಚಾರಿ, ವಾಸ:ದತ್ತಾತ್ರೇಯ, ಸ್ಯಾಬ್ರಕಟ್ಟೆ ಅಂಚೆ, ಶಿರಿಯಾರ ಗ್ರಾಮ, ಉಡುಪಿ ತಾಲೂಕು ಇವರು ದಿನಾಂಕ 20/08/2015 ರಂದು ರಾತ್ರಿ 10:00 ಗಂಟೆಗೆ ದನಗಳನ್ನು ಕದ್ದು ಕೇರಳದ ಕಸಾಯಿಖಾನೆಗೆ ಮಾಂಸ ಮಾಡುವ ಉದ್ದೇಶದಿಂದ ಕೊಂಡು ಹೋಗುವ ಬಗ್ಗೆ  ದೊರೆತ ಮಾಹಿತಿಯಂತೆ ಅವರ ಸ್ನೇಹಿತರೊಂದಿಗೆ ಹರ್ಕಾಡಿ ಕಿರಿಯ ಪ್ರಾಥಮಿಕ ಶಾಲೆಯ ಹಿಂಭಾಗಕ್ಕೆ ಹೋದಾಗ ಅಲ್ಲಿ ಜಗಲಿಯ ಮೇಲೆ ಮೂವರು ವ್ಯಕ್ತಿಗಳು ಮಲಗಿದ್ದು ಚಂದ್ರ ಆಚಾರಿ ರವರನ್ನು ನೋಡಿ ಎದ್ದು ಓಡುವಾಗ ಅವರನ್ನು ತಡೆದು ನಿಲ್ಲಿಸಿ ವಿಚಾರಿಸಿದಾಗ ಅವರುಗಳು ಸ್ಥಳೀಯರಾದ  ಹಿರಿಯಣ್ಣ ಶೆಟ್ಟಿ, ಚಂದ್ರ ಶೆಟ್ಟಿ ಹಾಗೂ ಭಾಸ್ಕರ ಶೆಟ್ಟಿ ಎಂಬುದಾಗಿ ತಿಳಿದು ಬಂದಿದ್ದು ಅದರಲ್ಲಿ ಭಾಸ್ಕರ ಶೆಟ್ಟಿ ಎಂಬುವವರು ಅಲ್ಲಿಂದ ಓಡಿ ಹೋಗಿರುತ್ತಾರೆ. ಇನ್ನಿಬ್ಬರನ್ನು ಹಿಡಿದು ವಿಚಾರಿಸಿದಾಗ ಅವರು ದನಗಳನ್ನು ಕದ್ದು ಕೇರಳದ ಕಸಾಯಿಖಾನೆಗೆ ಮಾಂಸ ಮಾಡುವ ಉದ್ದೇಶದಿಂದ  ಶಾಲೆಯ ಪಕ್ಕದ ಹಾಡಿಯಲ್ಲಿ ಕಟ್ಟಿರುವುದಾಗಿ ತಿಳಿಸಿದ ಮೆರೆಗೆ ಚಂದ್ರ ಆಚಾರಿ ರವರು ವಿಚಾರವನ್ನು ಪೊಲೀಸ್ ಠಾಣೆಗೆ ತಿಳಿಸಿ 01:00 ಗಂಟೆಗೆ ಪೊಲೀಸರೊಂದಿಗೆ ಸ್ಥಳಕ್ಕೆ ಹೋಗಿ ನೋಡುವಾಗ 1 ದನ ಮತ್ತು 4 ಸಣ್ಣ ಗಂಡು ಕರುಗಳನ್ನು ಹಿಂಸಾತ್ಮಕವಾಗಿ ಮರಕ್ಕೆ ಕಟ್ಟಿದ್ದು ಕಂಡು ಬಂದಿದ್ದು. ಈ ಬಗ್ಗೆ ಕೋಟ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ  184/2015 ಕಲಂ:379 ಐಪಿಸಿ, 8,11 ಕರ್ನಾಟಕ ಗೋಹತ್ಯೆ ನಿಷೇದ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.



No comments: