Thursday, August 20, 2015

Daily Crime Reports As on 20/08/2015 at 19:30 Hrs

ಅಪಘಾತ ಪ್ರಕರಣ
  • ಕುಂದಾಪುರ: ದಿನಾಂಕ 12/08/2015 ರಂದು ಸಮಯ ಸುಮಾರು ಬೆಳಿಗ್ಗೆ 7:00 ಗಂಟೆಗೆ ಕುಂದಾಪುರ ತಾಲೂಕು ಕರ್ಕುಂಜೆ  ಗ್ರಾಮದ  ಬಟ್ರಾಡಿ  ಎಂಬ ರಸ್ತೆಯಲ್ಲಿ ಆಪಾದಿತ  M. ಭಾಸ್ಕರ್  ಎಂಬವರು KA 15 A 0891 ನೇ  ಟಿಪ್ಪರ್ ಲಾರಿಯನ್ನು ನೇರಳಕಟ್ಟೆ  ಕಡೆಯಿಂದ  ಮಾವಿನಕಟ್ಟೆ  ಕಡೆಗೆ ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ ಕೊಂಡು ಬಂದು ಮಾವಿನಕಟ್ಟೆ ಕಡೆಯಿಂದ  ನೇರಳಕಟ್ಟೆ ಚಲಾಯಿಸಿಕೊಂಡು  ಹೋಗುತ್ತಿದ್ದ  KA20 Z 3284 ನೇ ಜೀಪಿಗೆ  ಎದುರುಗಡೆಯಿಂದ ಡಿಕ್ಕಿ  ಹೊಡೆದ ಪರಿಣಾಮ ಪಿರ್ಯಾದಿ ಇರ್ಷಾದ್‌ (28) ತಂದೆ: ಅಬ್ಬಾಸ್‌ ವಾಸ: ಮಸೀದ್‌ ಹತ್ತೀರ ಮಾವಿನಕಟ್ಟೆ,  ಗುಲ್ವಾಡಿ ಗ್ರಾಮ ಕುಂದಾಪುರ ಇವರು ಗಾಯಗೊಂಡು ಕುಂದಾಪುರ  ಚಿನ್ಮಯಿ  ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲದ  ಕೆ.ಎಂ.ಸಿ  ಆಸ್ಪತ್ರೆಗೆ ದಾಖಲಾಗಿರುತ್ತಾರೆ, ಈ ಬಗ್ಗೆ ಕುಂದಾಪುರ ಸಂಚಾರ ಅಪರಾಧ ಕ್ರಮಾಂಕ:100/15  ಕಲಂ 279 , 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೇ ಪ್ರಕರಣ
  • ದಿನಾಂಕ 20/08/2015 ರಂದು ವಿ ಚಂದ್ರಶೇಖರ ಆಹಾರ ನಿರೀಕ್ಷಕರು ಕುಂದಾಪುರ, ಇವರಿಗೆ ಬೆಳಿಗ್ಗೆ 10:30 ಗಂಟೆಗೆ ದೂರವಾಣೆ ಕರೆ ಬಂದಂತೆ ಹೋಗಿ ತನಿಖೆ ಮಾಡಲಾಗಿ ಉಪ್ಪುಂದ ಗ್ರಾಮ ವ್ಯಾಪ್ತಿಯ ಜನತಾ ಕಾಲನಿಯಲ್ಲಿ ಓಮ್ನಿ ಕಾರು ನಂಬ್ರ ಕೆಎ 04 ಬಿ 1030 ನೇದರಲ್ಲಿ 833 ಕೆಜಿ ಅಕ್ಕಿ ಕಂಡು ಬಂದಿದ್ದು ಅದರ ಅಂದಾಜು ಮೌಲ್ಯ ಸುಮಾರು ರೂಪಾಯಿ 24,416/- ಆಗಿರುತ್ತದೆ. ಈ ಬಗ್ಗೆ ಓಮ್ನಿ ಕಾರಿನ ಡ್ರೈವರ್ ಮಹಮ್ಮದ್ ನಾಸೀರ್ ನನ್ನು ವಿಚಾರಿಸಿದಲ್ಲಿ ಅಕ್ಕಿಯನ್ನು ಮನೆ ಮನೆಯಿಂದ ತಂದಿರುವುದಾಗಿಯೂ ತಿಳಿಸಿದ್ದು, ಡ್ರೈವರ್‌ ಈ ಬಗ್ಗೆ ಯಾವುದೇ ದಾಖಲೆಯನ್ನು ಹಾಜರು ಪಡಿಸಲು ವಿಫಲನಾಗಿದ್ದು, ಸದ್ರಿ ಅಕ್ಕಿಯನ್ನು ಪಡಿತರ ಅಕ್ಕಿ ಎಂಬುದಾಗಿ ಸಾಬೀತು ಪಡಿಸಿ 833 ಕೆ ಜಿ ಅಕ್ಕಿಯನ್ನು ಹಾಗೂ ಓಮ್ನಿ ಕಾರನ್ನು ವಶ ಪಡಿಸಿಕೊಳ್ಳಲಾಗಿದ್ದು, ಈ ಬಗ್ಗೆ ಬೈಂದೂರು ಅಪರಾಧ ಕ್ರಮಾಂಕ:224 /2015 ಕಲಂ 3.7 ESSENTIAL COMMODITIES ACT, 1955 & 18  PDS CONTROLING ORDER, 1992 ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣಗಳು
ಬೈಂದೂರು: ದಿನಾಂಕ 19/08/2015 ರಂದು ಪಿರ್ಯಾದಿ ಬಾಬು ಪೂಜಾರಿ(42) ತಂದೆ: ಜೋಗಿ ಪೂಜಾರಿ ವಾಸ: ತೊಂಡೆಹಿತ್ಲು ಮನೆ, ತಾರಾಪತಿ ಕುಂದಾಪುರ ತಾಲೂಕು ಇವರಿಗೆ ಹಾಗೂ ರವಿರಾಜ ದವಖಾನೆರವರಿಗೆ ರಾತ್ರಿ ಪಾಳೆ ಕರ್ತವ್ಯಕ್ಕೆ ನೇಮಿಸಿದಂತೆ ರಾತ್ರಿ ಕರ್ತವ್ಯದಲ್ಲಿದ್ದು, ದಿನಾಂಕ 20/08/2015 ರಂದು ಬೆಳಿಗ್ಗೆ 6:00 ಗಂಟೆಗೆ ಉಪ್ಪುಂದದ ಕಟ್ಗೇರಿ ವಠಾರದಲ್ಲಿ ವಿದ್ಯತ್ ಸರಬರಾಜು ಇಲ್ಲವೆಂದು ದೂರು ಬಂದಂತೆ ಪಿರ್ಯಾದಿದಾರರು ತನ್ನ ವಾಹನದಲ್ಲಿ ಲೈನ್ ಮ್ಯಾನ್ ರವಿರಾಜ ದವಖಾನೆರವರನ್ನು ಕರೆದುಕೊಂಡು ಉಪ್ಪುಂದದ ಕಟ್ಗೇರಿ ಬಳಿಗೆ ಹೋಗಿ ಅಲ್ಲಿನ ಟ್ರಾನ್ಸ್ ಫಾರ್ಮರ್  ನಲ್ಲಿ ಅಡಚಣೆ  ಇರುವ ಬಗ್ಗೆ ತಿಳಿದು, ಸಮಯ ಸುಮಾರು ಬೆಳಿಗ್ಗೆ 06:30 ಗಂಟೆಗೆ ಟ್ರಾನ್ಸ್‌ ಫಾರ್ಮರ್ ಇರುವ ವಿದ್ಯತ್ ಕಂಬವನ್ನು ಹತ್ತುವ ಮೊದಲು ಲೈನ್ ಆಪ್ ಮಾಡಿಕೊಂಡು ಬಳಿಕ ಕಂಬವನ್ನು ಹತ್ತಿ ಫಾರ್ಮರ್ ಲೈನ್ ಸರಿ ಪಡಿಸುತ್ತಿರುವಾಗ ಒಮ್ಮೆಲೇ ಶಾಕ್ ಹೊಡೆದಂತೆ ಜೋರಾಗಿ ಕೂಗಿ ಕೆಳಗೆ ಬಿದ್ದರು. ರವಿರಾಜ ದವಖಾನೆಯವರನ್ನು ಬೈಂದೂರು ಅಂಜಲಿ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯರಲ್ಲಿ ತಪಾಸಣೆಗೆ ಒಳಪಡಿಸುವಾಗ ವೈದ್ಯರು ಹೆಚ್ಚಿನ ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಬಾಬು ಪೂಜಾರಿ ರು ಹಾಗೂ ವಿಜಯ ಕುಮಾರ್ ಶೆಟ್ಟಿರವರು ರವಿರಾಜ ದವಖಾನೆಯವರನ್ನು 108 ಅಂಬುಲೆನ್ಸ್ ನಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರಿಕ್ಷೀಸಿ ರವಿರಾಜ ದವಖಾನೆಯವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಈ ಬಗ್ಗೆ ಬೈಂದೂರು ಠಾಣೆ ಯು.ಡಿ.ಆರ್‌ ನಂಬ್ರ 31/2015 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಉಡುಪಿ: ಪಿರ್ಯಾದಿ ಎಚ್‌ ಮಹೇಶ ಶೆಣೈ (48) ತಂದೆ ಎಚ್‌ ಪದ್ಮನಾಭ ಶೆಣೈ ವಾಸ: ಮನೆ ನಂಬ್ರ 7-1-71 ಎ 1 ಸಿದ್ದಿವಿನಾಯಕ  ಬೀಡಿನಗುಡ್ಡೆ ರವರ ಮಾಲಿಕತ್ವದ ಲಾರಿಗಳನ್ನು ಅವರ ಕಛೇರಿಯ ಪಕ್ಕದಲ್ಲಿರುವ ಬೀಡಿನ ಗುಡ್ಡೆ ಮೈದಾನದಲ್ಲಿ ನಿಲ್ಲಿಸುವುದಾಗಿದ್ದು, ದಿನಾಂಕ: 15/08/2015ರಂದು ಸಂಜೆ ಮಾಲಿಕತ್ವದ ಲಾರಿ ನಂಬ್ರ ಕೆಎ 20 ಎ 1241 ನ್ನು ಸಂಜೆ ಬೀಡಿನಗುಡ್ಡೆ ಮೈದಾನದಲ್ಲಿ ನಿಲ್ಲಿಸಿದ್ದು, ದಿನಾಂಕ: 20/08/2015ರಂದು ಮಧ್ಯಾಹ್ನ ೦1:30 ಗಂಟೆಗೆ ಸದ್ರಿ ಲಾರಿಯನ್ನು ತೆಗೆಯಲು ಹೋದಾಗ ಲಾರಿಯ ಕ್ಯಾಬಿನ್‌ ಒಳಗೆ ಓರ್ವ ಅಪರಿಚಿತ ವ್ಯಕ್ತಿ ಕವುಚಿ ಬಿದ್ದಿರುವ ಸ್ಧಿತಿಯಲ್ಲಿ ಕಂಡುಬಂದಿದ್ದು,  ಅವನನ್ನು ನೋಡಿದಾಗ ಮೃತ ಪಟ್ಟಿರುತ್ತಾನೆ, ಪಿಡ್ಡಪ್ಪ ಸುಮಾರು 48 ವರ್ಷ ಪ್ರಾಯ ಎಂಬುವನೆಂದು ತಿಳಿದು ಬಂದಿರುತ್ತದೆ, ಈ ಬಗ್ಗೆ ಉಡುಪಿ ನಗರ ಠಾಣೆ ಯು.ಡಿ.ಆರ್‌ ನಂಬ್ರ 42/2015 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: