Thursday, August 20, 2015

Daily Crime Reports As on 20/08/2015 at 17:00 Hrs

ಅಸ್ವಾಭಾವಿಕ ಮರಣ ಪ್ರಕರಣ
  • ಕಾಪು: ಪಿರ್ಯಾದಿದಾರರಾದ ಶ್ರೀಮತಿ ಸುಜಾತ (34), ಗಂಡ: ಮಹೇಶ್ ಪೂಜಾರಿ, ವಾಸ: ರೈಲ್ವೆ ಬ್ರಿಡ್ಜ್ ಬಳಿ, ಮಯ್ಯೊಟ್ಟು, ಮಜೂರು ಗ್ರಾಮ, ಉಡುಪಿ ಇವರ ಗಂಡ ಮಹೇಶ್ ಪೂಜಾರಿ (40) ರವರು ದಿನಾಂಕ 19/08/2015 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ 20/08/2015 ರಂದು ಬೆಳಿಗ್ಗೆ 05:30 ಗಂಟೆಯ ಮದ್ಯಾವಧಿಯಲ್ಲಿ ತನ್ನ ಮನೆಗೆ ತಾಗಿಕೊಂಡಿರುವ ಇನ್ನೊಂದು ರೂಮಿನಲ್ಲಿ ಚೂಡಿದಾರದ ಶಾಲ್‌ನಿಂದ ಛಾವಣಿಯ ಪಕ್ಕಾಸಿಗೆ ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕಾಪು ಪೋಲಿಸ್ ಠಾಣೆ ಯುಡಿಆರ್ ಕ್ರಮಾಂಕ 23/2015 ಕಲಂ: 174 (ಸಿ)  ಸಿ.ಆರ್. ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಪಘಾತ ಪ್ರಕರಣ
  • ಕಾಪು: ದಿನಾಂಕ 19/08/2015 ರಂದು ಮದ್ಯಾಹ್ನ 3:30 ಗಂಟೆಗೆ ಪಿರ್ಯಾದಿದಾರಾದ ಈರಣ್ಣ (34), ತಂದೆ: ಮುನಿಯಪ್ಪ, ವಾಸ: ಕಟಪಾಡಿ ವಿದ್ಯಾನಗರ, ಪೂಜ್ಯ ಪ್ರಸಾದ್ ಕಂಪೌಂಡ್, ಕಟಪಾಡಿ ಹಾಗೂ ಇವರ ತಮ್ಮ ವೆಂಕಟೇಶ್ ಮಂಚಕಲ್-ಕಟಪಾಡಿ ರಸ್ತೆಯ ಪ್ಯಾಪ್ಯುಲನ್ ಬಾರ್ ಹತ್ತಿರ ರಸ್ತೆಯ ದಕ್ಷಿಣ ಬದಿಯ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ಕೆಎ 20 ಸಿ 9894 ನೇ ರಿಕ್ಷಾ ಚಾಲಕನು ರಿಕ್ಷಾವನ್ನು ಮಂಚಕಲ್ ಕಡೆಯಿಂದ ಕಟಪಾಡಿ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಈರಣ್ಣ ರವರ ತಮ್ಮ ವೆಂಕಟೇಶರವರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ವೆಂಕಟೇಶ್ ರವರು ರಸ್ತೆಗೆ ಎಸೆಯಲ್ಪಟ್ಟು ರಕ್ತಗಾಯ ಉಂಟಾಗಿರುವುದಾಗಿದೆ. ಈ ಬಗ್ಗೆ ಕಾಪು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 155/2015 ಕಲಂ:279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: