Thursday, August 20, 2015

Daily Crime Reports As on 20/08/2015 at 07:00 Hrsಅಪಘಾತ ಪ್ರಕರಣ
  • ಕುಂದಾಪುರ: ದಿನಾಂಕ 19/08/2015 ರಂದು ಸಂಜೆ 6:15 ಗಂಟೆಗೆ ಕುಂದಾಪುರ ತಾಲೂಕು ತಲ್ಲೂರು ಗ್ರಾಮದ ಜೈ ದುರ್ಗಾ ಮಾತಾ ಕಾಂಪ್ಲೆಕ್ಸ್ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯಲ್ಲಿ ಆಪಾದಿತ ರಾಮ ಗೌಡ ಎಂಬುವವರು KA 20B 3303 ನೇ ಬಸ್‌ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಾಷ್ಟ್ರೀಯ ಹೆದ್ದಾರಿ ರಸ್ತೆಯ ಮಣ್ಣಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಾದ ಶ್ರೀಮತಿ ನಿರ್ಮಲ ಶೇರಿಗಾರ (45), ಗಂಡ: ಶಿವರಾಮ ಶೇರಿಗಾರ, ವಾಸ: ಕೋಡಿ ಹೌಸ್, ಉಪ್ಪಿನ ಕುದ್ರು ಗ್ರಾಮ ಕುಂದಾಪುರ ಹಾಗೂ ಇವರ ಮಗನಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ನಿರ್ಮಲ ಶೇರಿಗಾರ ಹಾಗೂ ಮಗ ವಿಕಾಸ್ ಶೇರಿಗಾರ್ ಗಾಯಗೊಂಡು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 99/2015 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.


No comments: