Wednesday, August 19, 2015

Daily Crime Reports As on 19/08/2015 at 07:00 Hrs

ಇತರೇ ಪ್ರಕರಣಗಳು
  • ಮಣಿಪಾಲ: ದಿನಾಂಕ 16/06/2015 ರಂದು ಬೆಳಿಗ್ಗೆ 8:00 ಗಂಟೆಗೆ ಪಿರ್ಯಾದಿದಾರರಾದ ಪೃಥ್ವಿ ಆರ್ (30), ತಂದೆ: ರಾಜ ವಿಕ್ರಮ್ ಬಿ, ವಾಸ: ಸಪ್ತಗಿರಿ ನಗರ, ಶ್ರೀರಾಮ್, ಬಡಗುಬೆಟ್ಟು ಗ್ರಾಮ, ಮಣಿಪಾಲ ಇವರು ಮಣಿಪಾಲದ ಅಮಿತ ಬೇಕರಿಯ ಬಳಿ ಅಪ್ ನಲ್ಲಿ ಕಾರಿನಲ್ಲಿ ಹೋಗುತ್ತಿರುವಾಗ ಕಾರ್ ಬಂದ್ ಬಿದ್ದು ಹಿಂದಕ್ಕೆ ನಿಧಾನವಾಗಿ ಚಲಿಸಿದ್ದರಿಂದ ಕಾರಿನ ಹಿಂದೆ ಸ್ಕೂಟರ್ ನಲ್ಲಿದ್ದ ಆರೋಪಿ ಸುರೇಶ ಸ್ಕೂಟರ್ ನಿಲ್ಲಿಸಿ ಪೃಥ್ವಿ ಆರ್ ರವರ ಬಳಿ ಬಂದು ಅವಾಚ್ಯ ಶಬ್ದದಿಂದ ಬೈದು, ಕಾರಿನ ಎದುರು ಗಾಜಿಗೆ ಕೈಯಿಂದ ಹೊಡೆದ ಪರಿಣಾಮ ಗಾಜು ಒಡೆದು ನಷ್ಟ ಉಂಟಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 165/2015 ಕಲಂ: 504,427 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ: 12/08/2015 ರಂದು 18.00 ಗಂಟೆಗೆ ಉಡುಪಿ ತಾಲೂಕು 52 ನೇ ಹೇರೂರು ಗ್ರಾಮದ ಕೊಳಂಬೆ 5 ಸೆಂಟ್ಸ್ ಬಳಿ ವೃತ್ತ ನಿರೀಕ್ಷಕು ಬ್ರಹ್ಮಾವರ ರವರು ನೀಡಿದ ಮಾಹಿತಿ ಮತ್ತು ನಿರ್ದೇಶನದಂತೆ ಪಿ.ಎಸ್.ಐ ಬ್ರಹ್ಮಾವರ ರವರು ಕೆಎ 20 ಬಿ 3910 ನಂಬ್ರದ ಗೂಡ್ಸ್ ರಿಕ್ಷಾ ವಾಹನವನ್ನು ತಪಾಸಣೆ ಮಾಡಿದಾಗ 6 ಗೋಣಿ ಚೀಲ ಸುಮಾರು 3 ಕ್ವಿಂಟಾಲ್ ಗೋಧಿ ಸಾಗಾಟ ಮಾಡುತ್ತಿದ್ದುದು ಕಂಡು ಬಂದು ವಿಚಾರಿಸಿದಾಗ ಯಾವುದೇ ದಾಖಲೆ ಪತ್ರ ಹಾಜರುಪಡಿಸದೆ ಇರುವ ಕಾರಣ ವಿಲೇ ಮಾಡುವ ಆದೇಶದ ಬಗ್ಗೆ ಉಡುಪಿ ಆಹಾರ ನಿರೀಕ್ಷಕರಿಗೆ ವಿನಂತಿ ಪತ್ರ ನೀಡಿದ ಮೇರೆಗೆ ಅವರು ಪರಿಶೀಲಿಸಿ ವರದಿ ನೀಡಿ ಸದ್ರಿ ಗೋಧಿಯನ್ನು ಅನ್ನಭಾಗ್ಯ ಯೋಜನೆಯ ಪಡಿತರದಿಂದ ಆರೋಪಿ ಕೃಷ್ಣ ಪುತ್ರನ್, ಸೆಕ್ರೆಟರಿ ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿದ್ದೋದ್ದೇಶ ಸಹಕಾರಿ ಸಂಘನ ಆದಿ ಉಡುಪಿ ಇವರು ಸರಕಾರಕ್ಕೆ ವಂಚನೆ ಮಾಡುವ ಉದ್ದೇಶದಿಂದ ಅಕ್ರಮವಾಗಿ ಅಗತ್ಯ ವಸ್ತುಗಳ ಕಾಯ್ದೆ ಉಲ್ಲಂಘಿಸಿ ಸಾಗಾಟ ಮಾಡುತ್ತಿದ್ದುದಾಗಿ ತಿಳಿದು ಬಂದಿದೆ. ಈ ಬಗ್ಗೆ ಸೀತಾರಾಮ ಶೆಟ್ಟಿ ಆಹಾರ ನಿರೀಕ್ಷಕರು ತಾಲೂಕು ಕಛೇರಿ ಉಡುಪಿ ಇವರು ನೀಡಿದ ದೂರಿನಂತೆ ಬ್ರಹ್ಮಾವರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ ನಂಬ್ರ 165/2015 ಕಲಂ: 3,7  ಅಗತ್ಯ  ವಸ್ತುಗಳ ಕಾಯ್ದೆ, 403,420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: