Tuesday, August 18, 2015

Daily Crime Reports As on 18/08/2015 at 19:30 Hrs



ಹಲ್ಲೆ ಪ್ರಕರಣ 
  • ಕಾರ್ಕಳ: ದಿನಾಂಕ 17/08/2015 ರಂದು 22:30 ಗಂಟೆಗೆ ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಕರಿಯಕಲ್ಲು ಎಂಬಲ್ಲಿ ಪಿರ್ಯಾದಿದಾರರಾದ ಗುರುನಾಥ ಪ್ರಭು (36), ತಂದೆ: ದಿ.ಜಗನ್ನಾಥ ಪ್ರಭು, ಸುರಾಲ್ ಕಜೆ ಮನೆ, ಕರಿಯಕಲ್ಲು ಮಿಯ್ಯಾರು ಗ್ರಾಮ, ಕಾರ್ಕಳ ತಾಲೂಕು ಇವರು ತನ್ನ ಮನೆ ಕಡೆಗೆ ಹೋಗುತ್ತಿರುವಾಗ ಅವರ ಪರಿಚಯದ ಅಟೋ ಚಾಲಕ ಬಬಿತ್ ಎಂಬಾತನು ತನ್ನ ಅಟೋ ರಿಕ್ಷಾದಲ್ಲಿ ಸತೀಶ್ ಶೆಟ್ಟಿ, ಅಜಿತ್ ಹಾಗೂ ಪರಿಚಯವಿಲ್ಲದ ಇನ್ನೋರ್ವರೊಂದಿಗೆ ಗುರುನಾಥ ಪ್ರಭು ರವರ ಬಳಿಗೆ ಬಂದು ನಿನ್ನನ್ನು ಮನೆಗೆ ಬಿಡುತ್ತೇನೆ ಎಂದು ತನ್ನ ಅಟೋರಿಕ್ಷಾದಲ್ಲಿ ಹತ್ತಿಸಿ ಕುಳಿತುಕೊಳ್ಳಿಸಿ ಕರೆದುಕೊಂಡು ಹೋಗಿ, ಅವರ ಮನೆಯ ಬಳಿ ಬಿಡದೆ ಮುಂದಕ್ಕೆ ಕರೆದುಕೊಂಡು ಹೋಗಿರುವುದನ್ನು ಆಕ್ಷೇಪಿಸಿದ ಗುರುನಾಥ ಪ್ರಭುರವರಿಗೆ ರಿಕ್ಷಾದಲ್ಲಿದ್ದ ಸತೀಶ್ ಶೆಟ್ಟಿ ಅಟೋರಿಕ್ಷಾದಿಂದ ಎಳೆದು ಹಾಕಿ ಕೈಯಿಂದ ಹಲ್ಲೆ ನಡೆಸಿದ್ದಲ್ಲದೆ, ರಿಕ್ಷಾದಲ್ಲಿದ್ದ ಅಜಿತ್ ಹಾಗೂ ಇನ್ನೋರ್ವ ಅಪರಿಚಿತ ವ್ಯಕ್ತಿ ಗುರುನಾಥ ಪ್ರಭುರವರಿಗೆ ಕೈಯಿಂದ ಎದೆಗೆ, ಬೆನ್ನಿಗೆ ಹೊಡೆದು ಕಾಲಿನಿಂದ ತುಳಿದ ಪರಿಣಾಮ ಗುರುನಾಥ ಪ್ರಭುರವರ ಮುಂಭಾಗದ ಕೆಳದವಡೆಯ ಎರಡು ಹಲ್ಲುಗಳು ಉದುರಿ ಹೋಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 117/2015 ಕಲಂ:341, 323,325 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಇತರೇ ಪ್ರಕರಣ 
  • ಕಾರ್ಕಳ: ದಿನಾಂಕ 18/08/2015 ರಂದು 11:30 ಗಂಟೆಗೆ ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಸಂಕಲ ಕರಿಯ ಎಂಬಲ್ಲಿ ಅಕೇಶಿಯಾ ಮರದ ಹಾಡಿಯಲ್ಲಿ ಅರೋಪಿತರರಾದ 1) ಇಬ್ರಾಹಿಂ (45), ತಂದೆ: ಅಬ್ದುಲ್ ಖಾದರ್, ವಾಸ:  ರೆಹಮತ್ ಮಂಜಿಲ್, ಪುನರೂರು, ತಾಳಿಪ್ಪಾಡಿ ಅಂಚೆ ಮತ್ತು ಗ್ರಾಮ ಮಂಗಳೂರು ತಾಲೂಕು2) ಇಲ್ಯಾಸ್ (40), ತಂದೆ: ಅಬ್ದುಲ್ ಖಾದರ್, ವಾಸ: ರೆಹಮತ್ ಮಂಜಿಲ್, ಪುನರೂರು, ತಾಳಿಪ್ಪಾಡಿ ಅಂಚೆ ಮತ್ತು ಗ್ರಾಮ ಮಂಗಳೂರು ತಾಲೂಕು ಇವರು ತಮ್ಮ ಸ್ವಂತ ಲಾಭಕ್ಕೋಸ್ಕರ ಕೇರಳದ ಕಸಾಯಿಖಾನೆಗೆ ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಊರಿನವರಿಂದ ಖರೀದಿಸಿ ಅಕ್ರಮವಾಗಿ ಕಟ್ಟಿಹಾಕಿದ್ದ 30 ಕೋಣಗಳನ್ನು ಮಹದೇವ ಶೆಟ್ಟಿ ಕೆ. ಎಂ ಪೊಲೀಸ್ ಉಪನಿರೀಕ್ಷಕರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಇವರು ಸ್ಥಳಕ್ಕೆ ದಾಳಿ ನಡೆಸಿ ಸ್ವಾಧೀನಪಡಿಸಿಕೊಂಡು ಆರೋಪಿತರನ್ನು ವಶಕ್ಕೆ ಪಡೆದಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 138/2015 ಕಲಂ: 8, 9, 11 ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಪರಿರಕ್ಷಣೆ ಅಧಿನಿಯಮ 1964 ರಂತೆ ಪ್ರಕರಣ ದಾಖಲಾಗಿರುತ್ತದೆ.

No comments: