Tuesday, August 18, 2015

Daily Crime Reports As on 18/08/2015 at 17:00 Hrs

ಅಪಘಾತ ಪ್ರಕರಣ
  • ಬ್ರಹ್ಮಾವರ: ದಿನಾಂಕ: 17/08/2015 ರಂದು 18:20 ಗಂಟೆಗೆ ಉಡುಪಿ ತಾಲೂಕು ಚಾಂತಾರು ಗ್ರಾಮದ ಚಾಂತಾರು ರೈಲ್ವೇ ಬ್ರೀಡ್ಜ್ ಬಳಿ ಪಿರ್ಯಾದಿ ದುಗ್ಗು ನಾಯ್ಕ ಇವರ ಬಾಬ್ತು ಕೆಎ 20 ಡಿ 2807 ನೇ ಎ.ಪಿ.ಎಮ್ ಬಸ್ಸ್ ಅನ್ನು ಬ್ರಹ್ಮಾವರ ಕಡೆಯಿಂದ ಕುಂಜಾಲು  ಕಡೆಗೆ ರಸ್ತೆಯ ಎಡಭಾಗದಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ ಆಪಾದಿತ ರಾಜೇಶ್ ಕೆಎ 15 8630 ನೇ ಟಿಪ್ಪರ್‌ ಚಾಲಕ ತನ್ನ ಬಾಬ್ತು ಟಿಪ್ಪರ್‌ನ್ನು ಕುಂಜಾಲು ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಎರಡು  ಬೈಕ್ ಮತ್ತು ಒಂದು ಕಾರನ್ನು ಹಿಂದಿಕ್ಕಿ ತೀರ ಬಲಭಾಗದಿಂದ ಚಲಾಯಿಸಿಕೊಂಡು ಅಡ್ಡಾದಿಡ್ಡಿಯಾಗಿ ಬಂದು ಬಸ್ಸಿನ ಮುಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಮುಂಭಾಗ ಜಖಂಗೊಂಡಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 164/15 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ
  • ಕಾರ್ಕಳ: ರೆಂಜಾಳ ಗ್ರಾಮದ  ದಡ್ಡ ಕಜೆ  ಪಿಂಟೋ ಕಾಂಪೌಂಡ್ ಎಂಬಲ್ಲಿ   ಪಿರ್ಯಾದಿ ಫ್ಲೋರಿನ್ ಪಿಂಟೋ ಇವರ ಮಾವ ವಯೋವೃದ್ಧರಾದ ಲೋರೇನ್ಸ್ ಪಿಂಟೋ ಹಾಗೂ ಅತ್ತೆ ಎಲಿಜಾ ಪಿಂಟೋ  ವಾಸವಾಗಿದ್ದು ಇವರುಗಳನ್ನು ಪಿರ್ಯಾಧಿಯವರು  ದಿನಾಂಕ 17/08/2015 ರಂದು ಬೆಳಿಗ್ಗೆ 10 ಗಂಟೆಗೆ ಕಾರ್ಕಳಕ್ಕೆ ಚಿಕಿತ್ಸೆಗೆ ಕರೆದುಕೊಂಡು ಹೋಗಿ ವಾಪಾಸ್ಸು ಸಂಜೆ 6 ಗಂಟೆಗೆ ಮನೆಗೆ ಬರುವಾಗ ಅವರ ಮನೆಯ ಬಳಿ ಕೆಲವು ಮಕ್ಕಳು ಮತ್ತು ಹೆಂಗಸರು ಬೊಬ್ಬೆ ಹಾಕಿ ಓಡುತ್ತಿದ್ದು ಅವರ ಹಿಂದೂಗಡೆಯಿಂದ ಕೆಂಪು ಬಣ್ಣದ ಸ್ವಿಪ್ಟ್  ಕಾರು  ಮನೆಯ ಕಂಪೌಂಡುನಿಂದ ಅತೀ ವೇಗವಾಗಿ  ಬಂದು ಬೋರ್ಕಟ್ಟೆ ಕಡೆ ಹೋಗಿರುತ್ತದೆ, ಪಿರ್ಯಾಧಿದಾರರು ಲೋರೇನ್ಸ್ ಪಿಂಟೋ ಹಾಗೂ ಅತ್ತೆ ಎಲಿಜಾ ಪಿಂಟೋ ರವರೊಂದಿಗೆ ಅವರ  ಮನೆಗೆ ಬಂದು ನೋಡಲಾಗಿ ಯಾರೋ ಕಳ್ಳರು  ಆ ಮನೆಯ ಬಾಗಿಲಿಗೆ  ಹಾಕಿದ ಬೀಗ ಮತ್ತು ಚಿಲಕ  ಮುರಿದು ಮನೆಯ ಒಳಗೆ ಪ್ರವೇಶಿಸಿ  ಬೆಡ್ ರೂಂ ನಲ್ಲಿದ್ದ  ಕಪಾಟ್ ನ್ನು ಮುರಿಯಲು ಪ್ರಯತ್ನಿಸಿ  ಕಪಾಟಿನ ಹ್ಯಾಂಡಲ್  ಮುರಿದು ಬಿದ್ದಿರುತ್ತದೆ.  ಪಿಂಟೋ  ಕಂಪೌಂಡ್ ಒಳಗಿನಿಂದ ಹೋಗಿರುವ ಕೆಂಪು ಬಣ್ಣದ ಸ್ವಿಪ್ಟ್ ಕಾರಿನಲ್ಲಿ ಬಂದ ವ್ಯಕ್ತಿಗಳೇ ಕಳ್ಳತನ ಮಾಡಲು ಪ್ರಯತ್ನಿಸಿದ್ದು ಮನೆಯ ಆಸುಪಾಸಿನ ಜನರು ಬೊಬ್ಬೆ ಹೊಡೆದಿದ್ದರಿಂದ ಕಳ್ಳರು ಕಳವು ಮಾಡುವುದನ್ನು ಬಿಟ್ಟು ಹೋಗಿರುತ್ತಾರೆ. ಬಗ್ಗೆ ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 136/15 ಕಲಂ 454.380, 511 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾರ್ಕಳ: ದಿನಾಂಕ: 17/08/2015 ರಂದು 18:40 ಗಂಟೆಗೆ ರೆಂಜಾಳದ ಒಂದು ಮನೆಯಲ್ಲಿ ಕಳವಿಗೆ ಪ್ರಯತ್ನಿಸಿ ಸಾರ್ವಜನಿಕ ರಿಂದ ತಪ್ಪಿಸಿಕೊಂಡು ಒಂದು ಕೆಂಪು ಬಣ್ಣದ ಮಾರುತಿ ಸ್ವಿಪ್ಟ್ ಬರುತ್ತಿರುವುದಾಗಿ ದೊರೆತ ಮಾಹಿತಿಯಂತೆ ಅದನ್ನು ನಿಲ್ಲಿಸುವ ಉದ್ದೇಶದಿಂದ ಪಿರ್ಯಾದಿ ರವಿದಾಸ್ ಕುಡ್ವ ಮತ್ತು ಅವರ ಸ್ನೇಹಿತರು ಕಲ್ಯಾ ಗ್ರಾಮದ  ಮಾವಿನ ಕಟ್ಟೆ ಜಂಕ್ಷನ್ ಬಳಿ ರಸ್ತೆ ಬದಿಯಲ್ಲಿ ನಿಂತು ಕಾರ್ಕಳ ಕಡೆಯಿಂದ ಬೆಳ್ಮಣ್ ಕಡೆಗೆ ಬರುತ್ತಿದ್ದ ಕೆಂಪು ಬಣ್ಣದ ಮಾರುತಿ ಸ್ವಿಪ್ಟ್ ಕಾರನ್ನು ನಿಲ್ಲಿಸುವಂತೆ ಸೂಚನೆ ನೀಡಿದರೂ ಸ್ವಿಪ್ಟ್ ಕಾರು ಚಾಲಕನು ತಾನು ಚಲಾಯಿಸುತ್ತಿದ್ದ ಕಾರನ್ನು ಅತೀವೇಗ ಚಲಾಯಿಸಿ ರಸ್ತೆಯ ಬದಿಯಲ್ಲಿ ನಿಂತಿದ್ದ ಪಿರ್ಯಾದಿಯ ಸ್ನೇಹಿತ ಪ್ರಕಾಶ್ ರವರಿಗೆ ಡಿಕ್ಕಿ ಹೊಡೆದು ರಸ್ತೆಯ ಎಡಬದಿಯ ಇಳಿಜಾರಾದ ಜಾಗದಲ್ಲಿ ಉರುಳಿಬಿದ್ದು ಸಂಪೂರ್ಣ ಜಖಂ ಗೊಂಡಿರುತ್ತದೆ. ಕಾರು ಡಿಕ್ಕಿ ಹೊಡೆದ ಪರಿಣಾಮ ಪ್ರಕಾಶ್ ರವರಿಗೆ ಎದೆಗೆ ಜಖಂ ಆಗಿರುತ್ತದ. ಹಾಗೂ ಕಾರು ಚಾಲಕನಿಗೂ ಗಾಯವಾಗಿರುತ್ತದೆ.  ಸದ್ರಿ ಕಾರಿನ ಬಳಿ ಪಿರ್ಯಾದಿದಾರರು ಮತ್ತು ಉಳಿದ ಅವರ ಸ್ನೇಹಿತರು ಹೋಗಿ ನೋಡಲಾಗಿ ಸ್ವಿಪ್ಟ್ ಕಾರು ನಂಬ್ರ  KA 19Z3129 ಆಗಿದ್ದು ಚಾಲಕನ ಹೆಸರು ಫಾರೂಕ್ ಅಲಿಯಾಸ್ ಉಮ್ಮರ್ ಫಾರೂಕ್ ಎಂದು ತಿಳಿಯಿತು. ಕಾರಿನಲ್ಲಿ ನೋಡಲಾಗಿ  ಬೆಳ್ಳಿಯ ಶಿವನ ಮುಖವಾಡ -1, ಬೆಳ್ಳಿಯ ದೀಪ-2 , ಬೆಳ್ಳಿಯ ಪನ್ನಾಲು-1 ಪಂಚಲೋಹದ ದೈವಮೂರ್ತಿ-1, ಹಿತ್ತಾಳೆಯ ಭರಣಿ-1 , ಬೆಳ್ಳಿಯ ತುಂಡು-1 ಇದ್ದು  ಕಾರಿನಲ್ಲಿ ಇದ್ದ ಸೊತ್ತುಗಳ ಬಗ್ಗೆ ವಿಚಾರಿಸಲಾಗಿ ತನ್ನ ಸ್ನೇಹಿತರಾದ ಹಜೀಂ ಹಾಗೂ ಇತರರು ನಿನ್ನೆ ದಿನ ರಾತ್ರಿ ಎಲ್ಲೋ ದೇವಸ್ಥಾನದಲ್ಲಿ ಕಳವು ಮಾಡಿರುವುದಾಗಿ ಕಾರು ಚಾಲಕ ಫಾರೂಕ್ ತಿಳಿಸಿರುತ್ತಾನೆ. ಬಗ್ಗೆ ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 137/15 ಕಲಂ 279,337,457,380 ಐಪಿಸಿ 41(1)(ಡಿ) ಜೊತೆ 102 ಸಿ ಆರ್ ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಹಿರಿಯಡ್ಕ: ರಮೇಶ ಕರ್ಕೆರಾ (45) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 17/08/15 ರಂದು ರಾತ್ರಿ 9-30 ಗಂಟೆಗೆ ತನ್ನ ಮನೆಯಿಂದ ಹೊರಗಡೆ ಹೋದವರು  ಮನೆಗೆ ವಾಪಾಸು ಬಾರದೆ ಇದ್ದು ತದನಂತರ  ಹುಡುಕಿದರೂ ಕಾಣ ಸಿಗದೇ ಈ ದಿನ ಬೆಳಿಗ್ಗೆ ಮತ್ತೆ ಹುಡುಕಿದಾಗ ಮನೆಯಿಂದ ಅನತಿ ದೂರದಲ್ಲಿದ್ದ  ಗೇರು ಮರವೊಂದಕ್ಕೆ ನೈಲಾನ್‌ ಹಗ್ಗದಿಂದ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೋಲಿಸ್ ಠಾಣೆ ಯುಡಿಆರ್ ಕ್ರಮಾಂಕ 15/2015 ಕಲಂ: 174 ಸಿ.ಆರ್.ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

No comments: