Tuesday, August 18, 2015

Daily Crime Reports As on 18/08/2015 at 07:00 Hrs

ಇತರೇ ಪ್ರಕರಣ
  • ಬ್ರಹ್ಮಾವರ: ಪಿರ್ಯಾದಿದಾರರಾದ ಸುಮಿತ್ರಾ (45), ಗಂಡ: ಉಮೇಶ್ ಆಚರ್ಯ, ವಾಸ: ನವಗ್ರಾಮ ರಂಗನಜೆರೆ, ಬಾರ್ಕೂರು ಅಂಚೆ, ಹನೇಹಳ್ಳಿ ಗ್ರಾಮ, ಉಡುಪಿ ತಾಲೂಕು ಇವರ ಮಗನಾದ ಸಂಜಯ್ ಒಂದು ವರ್ಷದ ಹಿಂದೆ ಆರೋಪಿ ರೂಪೇಶ್ ನಿಂದ ರೂಪಾಯಿ 32,000/- ಹಣವನ್ನು ಸಾಲ ಪಡೆದುಕೊಂಡಿದ್ದನು, ಸಾಲದ ಭದ್ರತೆಗಾಗಿ ಸುಮಿತ್ರಾ ರವರ ಮಗನ ಮಿತ್ರನಾದ ಉದಯ ಪೂಜಾರಿ ಮತ್ತು ಮಗಳು ಚೈತ್ರ ಎಂಬವರಿಂದ ಖಾಲಿ ಚೆಕ್‌ಗಳನ್ನು ಪಡೆದುಕೊಂಡಿದ್ದನು. ಸುಮಿತ್ರಾ ರವರ ಮಗ ಸಾಲದ ಹಣವನ್ನು 2 ಕಂತುಗಳಲ್ಲಿ ಮರುಪಾವತಿಸಿರುತ್ತಾನೆ. ಆದರೆ ಆರೋಪಿಯು ಇನ್ನೂ ಹೆಚ್ಚಿನ ಬಡ್ಡಿ ಹಣ ನೀಡ ಬೇಕೆಂದು ಪೀಡಿಸಿ ಹೆಚ್ಚಿನ ಬಡ್ಡಿ ಹಣ ನೀಡಲು ಒಪ್ಪದಿದ್ದಾಗ ಆರೋಪಿಯು ಉದಯ ಪೂಜಾರಿ ಮತ್ತು ಚೈತ್ರ ಎಂಬವರ ಖಾಲಿ ಚೆಕ್‌ಗಳನ್ನು ಬ್ಯಾಂಕ್‌ನಲ್ಲಿ ಅಮಾನ್ಯ ಮಾಡಿಸಿ ಎನ್‌.ಐ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಉದಯ ಮತ್ತು ಚೈತ್ರ ರವರಿಗೆ ತೊಂದರೆ ಆಗುತ್ತದೆ ಎಂದು ಬೆದರಿಸಿ ರೂಪಾಯಿ 40,000/- ಹಣವನ್ನು ವಸೂಲಿ ಮಾಡಿರುತ್ತಾನೆ, ಉಳಿದ ರೂಪಾಯಿ 40,000/- ಹಣ ನೀಡಬೇಕೆಂದು ಒತ್ತಾಯಿಸಿ ಮಾನಸಿಕ ಹಿಂಸೆ ನೀಡಿರುತ್ತಾನೆ. ಸುಮಿತ್ರಾ ರವರ ಮಗನಾದ ಸಂಜಯ್‌ಗೆ ಆರೋಪಿ ಅಧಿಕ ಬಡ್ಡಿ ಹಣ ನೀಡುವಂತೆ ಒತ್ತಾಯಿಸಿ ಮಾನಸಿಕವಾಗಿ ಹಿಂಸೆ ನೀಡಿದ್ದರಿಂದ ದಿನಾಂಕ 15/08/2015 ರಂದು ಬೆಳಿಗ್ಗೆ 11:30 ಗಂಟೆಗೆ ಸಂಜಯ್ ಮನೆಯಲ್ಲಿದ್ದ 25 ರಿಂದ 30 ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದವನನ್ನು ಕೂಡಲೇ ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ದಾಖಲಿಸಿದ್ದು ಚೇತರಿಸಿಕೊಂಡಿರುತ್ತಾನೆ. ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 163/2015 ಕಲಂ: KARNATAK PROHIBITION OF CHARGING EXORBITANT INTEREST ACT 3, 4 & MONEY LENDERS ACT 1961 SEC 38, 39 ರಂತೆ ಪ್ರಕರಣ ದಾಖಲಾಗಿರುತ್ತದೆ.

No comments: